ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮಾಜಿ ಎಂಎಲ್‌ಎ ನಿಧನ

Posted By: ಕಿರಣ್ ಸಿರ್ಸಿಕರ್
Subscribe to Oneindia Kannada

ಮಂಗಳೂರು, ನವೆಂಬರ್ 20 : ರಬ್ಬರ್ ತೋಟಗಳಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಸುಳ್ಯದ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ಇಂದು (ನವೆಂಬರ್ 20) ನಿಧನ ಹೊಂದಿದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಹಲವಾರು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆ ಉಸಿರೆಳೆದರು.

1983 ರಿಂದ‌ 1985ರ ವರೆಗೆ ಸುಳ್ಯದಿಂದ ಬಿಜೆಪಿಯ ಶಾಸಕರಾಗಿ ಬಾಕಿಲ ಹುಕ್ರಪ್ಪ ಆಯ್ಕೆಯಾಗಿದ್ದರು. 1983ರ ಸಂದರ್ಭದಲ್ಲಿ ಅಂದಿನ ಜನತಾ ಪಕ್ಷದಿಂದ ಹೊರ ಬಂದು ಅಟಲ್ ಬಿಹಾರಿ ವಾಜಪೇಯಿ ಅವರು ರಚಿಸಿದ ಬಿಜೆಪಿಯ ಜೊತೆಗೆ ಸೇರಿದ ಬಾಕಿಲ ಹುಕ್ರಪ್ಪರಿಗೆ 1983ರ ಜನವರಿ 26 ರಂದು ಘೋಷಣೆಯಾದ ಚುನಾವಣೆಗೆ ಸುಳ್ಯ ಕ್ಷೇತ್ರದ ಅಭ್ಯರ್ಥಿಯಾಗುವ ಅವಕಾಶ ದೊರೆಯಿತು. ಬಾಕಿಲ ಹುಕ್ರಪ್ಪ ಚುನಾವಣೆಯಲ್ಲಿ 6975 ಮತಗಳ ಅಂತರದಿಂದ ಕಾಂಗ್ರೇಸ್ ಎನ್. ಶೀನಾ ಅವರ ವಿರುದ್ದ ಗೆದ್ದು ಬಂದಿದ್ದರು.

ಕಾಂಗ್ರೆಸ್ ಮುಖಂಡ ಪ್ರಿಯರಂಜನ್ ದಾಸ್ ಮುನ್ಷಿ ಇನ್ನಿಲ್ಲ

ಕೇವಲ 18 ತಿಂಗಳುಗಳ ಕಾಲ ಶಾಸಕರಾಗಿದ್ದ ಇವರು ಸಿಕ್ಕಿದ ಅಲ್ಪ ವರ್ಷಗಳ ಅವಧಿಯಲ್ಲಿ ಹಲವು ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಾನುರಾಗಿಯಾಗಿದ್ದರು. ನಂತರ ನಡೆಯ ಚುನಾವಣೆಯಲ್ಲಿ ಬಾಕಿಲ ಹುಕ್ರಪ್ಪ ಅವರಿಗೆ ಮತ್ತೆ ಗೆಲುವು ಸಾಧಿಸಲಾಗಲಿಲ್ಲ.

ಕೊನೆಯದಾಗಿ ಎಎಪಿ ಸೇರ್ಪಡೆ

ಕೊನೆಯದಾಗಿ ಎಎಪಿ ಸೇರ್ಪಡೆ

1985 ರ ಚುನಾವಣೆಯಲ್ಲಿ ಬಿಜೆಪಿ ತೊರೆದು ಜನತಾ ಪಕ್ಷದಲ್ಲಿ ಚುನಾವಣೆಗೆ ನಿಂತರು. ಆ ಚುನಾವಣೆಯಲ್ಲಿ ಬಾಕಿಲ ಹುಕ್ರಪ್ಪ ಕೇವಲ 800 ಮತಗಳ ಅಂತರದಿಂದ ಸೋತರು. ನಂತರ 1990 ರಲ್ಲಿ ಜನತಾದಳದಿಂದ ಸ್ಪರ್ಧಿಸಿ 3 ನೇ ಸ್ಥಾನಕ್ಕಿಳಿದರು. 1994 ರಲ್ಲಿ ಬಂಗಾರಪ್ಪನವರ ಕೆಸಿಪಿ ಯಿಂದ ನಿಂತು ಕೇವಲ 2,500 ಮತ ಮಾತ್ರ ಪಡೆದರು. ನಂತರದ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲೇ ಅತ್ತಿಂದಿತ್ತ ಸುತ್ತಾಡಿದರು. ನಂತರದ ದಿನಗಳಲ್ಲಿ ಬಿಜೆಪಿಯನ್ನು ಬಿಟ್ಟು ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಭ್ರಷ್ಟಾಚಾರದಿಂದ ದೂರ

ಭ್ರಷ್ಟಾಚಾರದಿಂದ ದೂರ

ಈಗಿನ ದಿನಗಳಲ್ಲಿ ಒಬ್ಬ ಶಾಸಕ ಕೇವಲ ಒಂದು ವರ್ಷ ಅಧಿಕಾರದಲ್ಲಿದ್ದರೆ ಸಾಕು, ಮಾರನೆಯ ದಿನವೇ ಕೋಟಿಗಟ್ಟಲೇ ಹಣ ಮಾಡಿ ಸ್ವಿಸ್ ಬ್ಯಾಂಕುಗಳಲ್ಲಿ ಇಡುವಂತಹ ಪರಿಸ್ಥಿತಿ ಇದೆ. ಆದರೆ ಬಾಕಿಲ ಹುಕ್ರಪ್ಪ 1983 ರಲ್ಲಿ ಎಂ.ಎಲ್.ಎ ಆಗಿದ್ದರೂ ಕೂಡ ಈಗ ಅದೇ ಊರಲ್ಲಿ ತುತ್ತು ಕೂಳಿಗಾಗಿ ತೋಟದ ಕೆಲಸಕ್ಕೆ ತೆರಳಿದ್ದರು. ಮಾಜಿ ಶಾಸಕರಾಗಿದ್ದರೂ ಗದ್ದೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು, ರಬ್ಬರ್ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದರು. ಶಾಸಕರಾಗಿ ಆಯ್ಕೆಯಾದ ಬಳಿಕ ಇವರು ವಿವಿಧ ಜನಪರ ಕಾರ್ಯಗಳನ್ನು ಕ್ಷೇತ್ರದಲ್ಲಿ ಕೈಗೊಂಡಿದ್ದರು. ತನ್ನ ವೈಯುಕ್ತಿಕ ಬದುಕಿನಲ್ಲಿ ಹಣ, ಭ್ರಷ್ಟಾಚಾರದಿಂದ ದೂರ ಉಳಿದಿದ್ದರು.

ಅಲ್ಪ ಪಿಂಚಣಿಯಲ್ಲೇ ಜೀವನ

ಅಲ್ಪ ಪಿಂಚಣಿಯಲ್ಲೇ ಜೀವನ

ಬಾಕಿಲ ಹುಕ್ರಪ್ಪ ಕೇವಲ ಶಾಸಕನಾದದ್ದು ಮಾತ್ರವಲ್ಲ. ಆ ನಂತರ ಗುತ್ತಿಗಾರು ಗ್ರಾ.ಪಂ. ಚುನಾವಣೆಗೆ ನಿಂತು ಅದರ ಸದಸ್ಯರಾಗಿ, ಎರಡೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ಶಾಸಕನಾದ ಬಳಿಕವೂ ಕೂಲಿ ಕೆಲಸ ಮಾಡಿಕೊಂಡು ಸಂಸಾರದ ಹೊಟ್ಟೆ ತುಂಬಿಸುತ್ತಿದ್ದ ಬಾಕಿಲ ಹುಕ್ರಪ್ಪ ಅವರಿಗೆ ತಿಂಗಳಿಗೆ ಅಲ್ಪ ಮೊತ್ತದ ಶಾಸಕ ಪಿಂಚಣಿ ಬರುತ್ತಿತ್ತು.

ಚುನಾವಣೆಗೆ ನಿಲ್ಲಬೇಕಾದರೆ ಇದ್ದದ್ದು 4000 ರೂ ಮಾತ್ರ

ಚುನಾವಣೆಗೆ ನಿಲ್ಲಬೇಕಾದರೆ ಇದ್ದದ್ದು 4000 ರೂ ಮಾತ್ರ

ಶಾಸಕನಾದ ಬಳಿಕವೂ 40 ರೂ. ದಿನಗೂಲಿಗೆ ದುಡಿಯುತ್ತಿದ್ದ ಹುಕ್ರಪ್ಪ 1990 ರ ಚುನಾವಣೆಯಲ್ಲಿ ಆಸ್ತಿ ಘೋಷಣೆ ಮಾಡುವಾಗ ಅವರಲ್ಲಿದ್ದದ್ದು 250 ರೂ. ಬ್ಯಾಂಕ್ ಬ್ಯಾಲೆನ್ಸ್, 4,000 ರೂ. ಬೆಲೆಬಾಳುವ ಹೆಂಡತಿಯ ಚಿನ್ನದ ಕಿವಿಯೋಲೆ ಮತ್ತು ಸಣ್ಣದಾದ ಕೃಷಿ ಭೂಮಿ. ಇದು ಬಾಕಿಲ ಹುಕ್ರಪ್ಪ ಅವರ ಒಟ್ಟು ಆಸ್ತಿಯಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former MLA of Sullia Bakikala (65) Hukkappa died today. He was suffering from illness for several days.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ