ಮಂಗಳೂರು: ಕ್ರೈಸ್ತ ಧರ್ಮದ ಬಗ್ಗೆ ಅವಹೇಳನ, ಆರೋಪಿ ಬಂಧನ

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 13 : ಯೇಸು ಕ್ರಿಸ್ತ ಹಾಗೂ ಮದರ್ ತೆರೆಸಾ ಅವರ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿಯನ್ನು ಮಂಗಳವಾರ ಸುಳ್ಯದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಕ್ರೈಸ್ತ ಧರ್ಮದ ಬಗ್ಗೆ ಅವಹೇಳನ, ಆರೋಪಿ ಬಂಧನಕ್ಕೆ ಒತ್ತಾಯ

ಫೇಸ್ ಬುಕ್ ನಲ್ಲಿ ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮದ ವಿರುದ್ದ ಹಾಗೂ ಯೇಸು ಕ್ರಿಸ್ತ ಕುರಿತು ಫೇಸ್ ಬುಕ್ ನಲ್ಲಿ ತೀರಾ ಕೀಳು ಅಭಿರುಚಿಯ ಬರಹವನ್ನು ಪ್ರಕಟಿಸಿದ್ದ ಅಕ್ಷರ್ ಬೋಳಿಯಮಜಲ್ ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Sullia police arrest accused for Derogatory comments against Christian community

ಅಕ್ಷರ್ ಬೋಳಿಯಮಜಲ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮದ ವಿರುದ್ದ ಹಾಗೂ ಯೇಸುಕ್ರಿಸ್ತರ ಕುರಿತು ತೀರ ಕೀಳು ಅಭಿರುಚಿಯ ಮಾತುಗಳಿಂದ ನಿಂದಿಸಿದ ಬರಹವನ್ನು ಪ್ರಕಟಿಸಿದ್ದ.

ಅಲ್ಲದೆ ಮದರ್ ತೆರಸಾ ಅವರನ್ನು ಕೂಡ ತೀರಾ ನಿಂದನಾತ್ಮಕವಾಗಿ ಬರೆದು ಫೇಸ್ ಬುಕ್ ಖಾತೆಯಲ್ಲಿ ಪ್ರಕಟಿಸಿದ್ದ. ಈ ಹಿನ್ನೆಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಅಕ್ಷರ್ ಬೋಳಿಯಮಜಲ್ ನನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಕ್ರೈಸ್ತ ಸಂಘಟನೆಗಳು ನಗರ ಪೋಲಿಸ್ ಕಮೀಷನರ್ ಅವರಿಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು ಅಕ್ಷರ್ ಬೋಳಿಯಮಜಲ್ ನನ್ನು ಸುಳ್ಯದಲ್ಲಿ ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sullia police arrest accused for Derogatory comments against Jesus here on Sep 13. Christian community and members of the Youth Congress had given a complaint to Police Commissiner T R Suresh over derogatory comments against Jesus Christ on social media, the Sullia police arrested the accused.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ