ಏಳು ಮದುವೆ ಒಟ್ಟಿಗೆ ಮಾಡಲು ಹೊರಟ ಮೀನು ಉಂಬಾಯಿಚ್ಚ

By: ಶಂಶೀರ್ ಬುಡೋಳಿ
Subscribe to Oneindia Kannada

ಮಂಗಳೂರು, ಫೆಬ್ರವರಿ 3 : ಮೀನು ಮಾರಾಟಗಾರರು ದುಡಿದು ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಳ್ಳುವುದಕ್ಕೇ ಕಷ್ಟ ಪಡುತ್ತಿರುವಾಗ ಸುಳ್ಯದ ವ್ಯಕ್ತಿಯೊಬ್ಬರು ತನ್ನ ಮಗಳು ಹಾಗೂ ಇನ್ನೂ ಆರು ಹೆಣ್ಣು ಮಕ್ಳಳ ಮದುವೆ ಮಾಡಲು ಮುಂದಾಗಿದ್ದಾರೆ.

ನೀವೊಮ್ಮೆ ದಕ್ಷಿಣ ಕನ್ನಡದ ಸುಳ್ಯದಲ್ಲಿರುವ ಮೀನು ಮಾರುಕಟ್ಟೆಗೆ ಹೋಗಿ 'ಮೀನು ಉಂಬಾಯಿಚ್ಚ' ಎಲ್ಲಿದ್ದಾರೆ..? ಎಂದು ಕೇಳಿದರೆ ಪ್ಯಾಂಟು, ಬಿಳಿ ಶರ್ಟ್, ಕೈಗೊಂದು ವಾಚ್ ಕಟ್ಟಿರುವ ವ್ಯಕ್ತಿಯನ್ನ ತೋರಿಸುತ್ತಾರೆ. ಅವರೇ ಸುಳ್ಯ ತಾಲೂಕಿನ ಗುಂಡ್ಯಡ್ಕ ಹಳೇಗೇಟು ನಿವಾಸಿ ಜಿ. ಇಬ್ರಾಹಿಂ ಹಾಜಿ. ಕಳೆದ 35 ವರ್ಷಗಳಿಂದ ಮೀನು ಮಾರಾಟ ಮಾಡುತ್ತಿರುವ ಇವರ ಬಳಿ ಮೂವತ್ತು ಕಾರ್ಮಿಕರಿದ್ದಾರೆ. ಇವರು ಕೆಲಕಾಲ ವಿದೇಶದಲ್ಲಿದ್ದು ಬಳಿಕ ಮೀನು ವ್ಯಾಪಾರಕ್ಕೆ ಇಳಿದಿದ್ದಾರೆ.[ಮಡಿಕೇರಿಯಲ್ಲಾಯ್ತು ವಿರಾಜಪೇಟೆ ಶಾಸಕ ಕೆಜಿ ಬೋಪಯ್ಯ ಮಗಳ ಮದುವೆ]

sullia fish seller give a free marriage allowance

ಪತ್ನಿ, ಜೊತೆ ಸಂತೃಪ್ತಿಯ ಜೀವನ ನಡೆಸುತ್ತಿರುವ ಇಬ್ರಾಹಿಂ ಹಾಜಿಗೆ ಹತ್ತು ಮಕ್ಕಳು. ಇದರಲ್ಲಿ 7 ಹೆಣ್ಮಕ್ಕಳು. 3 ಗಂಡು ಮಕ್ಕಳು. ಏಳು ಹೆಣ್ಮಕ್ಕಳಲ್ಲಿ ಐದು ಹೆಣ್ಮಕ್ಕಳಿಗೆ ಮದುವೆಯಾಗಿದೆ. ಇದೇ
ಫೆಬ್ರವರಿ 5 ರಂದು ತನ್ನ ಆರನೇ ಪುತ್ರಿಗೆ ಮದುವೆ ಮಾಡಲಿದ್ದಾರೆ. ಜೊತೆ ಇನ್ನು ಆರು ಹೆಣ್ಣು ಮಕ್ಕಳ ಮದುವೆ ಮಾಡಿಸಲು ಮುಂದಾಗಿದ್ದಾರೆ. ವಧುವಿಗೆ ತಲಾ 10 ಪವನ್ ಚಿನ್ನದ ಒಡವೆ, ಮದುವೆ ಬಟ್ಟೆ ಹಾಗೂ ಊಟದ ಖರ್ಚನ್ನು ಇವರೇ ಭರಿಸಲಿದ್ದಾರೆ ಎಂಬುದೇ ಇಲ್ಲಿನ ವಿಶೇಷ.

sullia fish seller give a free marriage allowance

ವಿವಾಹಕ್ಕೆ ವಧುವಿನ ಆಯ್ಕೆ?
ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಹೆಚ್ಚು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತೆ. ಆದರೆ ಸುಳ್ಯದ ಇಬ್ರಾಹಿಂ ಹಾಜಿಯವರು ಈ ರೀತಿ ಮಾಡಿಲ್ಲ. ತಾವೇ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿರುವ ಬಡ ಕುಟುಂಬದಲ್ಲಿರುವ ಹೆಣ್ಮಕ್ಕಳ ಮಾಹಿತಿ ಸಂಗ್ರಹಿಸಿ ಅವರಿಗೆ ಮದುವೆ ಮಾಡಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಯಾರ ಸಹಾಯ ಪಡೆದಿಲ್ಲ ಅಂತಾರೆ ಇಬ್ರಾಹಿಂ ಹಾಜಿ. ವರನ ಆಯ್ಕೆ ಹುಡುಗಿ ಕಡೆಯವರದ್ದು. ಮದುವೆ ಖರ್ಚನ್ನೆಲ್ಲಾ ಇವರೇ ಭರಿಸುತ್ತಿದ್ದಾರೆ. ಅಂದಹಾಗೇ ಫೆಬ್ರವರಿ 5ರಂದು ಸುಳ್ಯದಲ್ಲಿರುವ ಇವರ ಮನೆಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ ಎನ್ನುತ್ತಾರೆ ನಗುನಗುತ್ತಾ.

ಪುತ್ರಿಯ ಮದುವೆ ಜೊತೆಗೆ ಆರು ಮಂದಿ ಬಡ ಹೆಣ್ಣುಮಕ್ಕಳ ಮದುವೆ ಮಾಡಲು ತೀರ್ಮಾನ ಮಾಡಿದ್ಯಾಕೆ..? ಎಂದು ಕೇಳಿದಾಗ ಮೀನು ಉಂಬಾಯಿ ಉತ್ತರ ಕೊಟ್ಟಿದ್ದು ಹೀಗೆ..' ನಾನು ಬಡತನದ ಹಿನ್ನೆಲೆಯಲ್ಲಿ ಬಂದವ. ನನಗೆ ಕೂಡಾ ಬಡ ಹೆಣ್ಮಕ್ಕಳ ನೋವು, ಭಾವನೆ ಏನೂಂತ ಅರ್ಥ ಆಗುತ್ತೆ. ಈ ಯೋಚನೆ ಮುಂಚೆನೇ ಇತ್ತು. ಈಗ ಕಾಲ ಕೂಡಿ ಬಂದಿದೆ' ಎಂದರು‌.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
sullia fish seller give a free marriage allowance. Different marriage organized by fish seller. This marriage held at sullia on February 5.
Please Wait while comments are loading...