ಹತ್ಯೆ ರಹಸ್ಯ: ಇಸ್ಮಾಯಿಲ್ ರನ್ನು ಕೊಂದಿದ್ದು ಸುಪಾರಿ ಕಿಲ್ಲರ್ಸ್!

Posted By:
Subscribe to Oneindia Kannada

ಬೆಳ್ಳಾರೆ, ಸೆ.24: ಬೆಳ್ಳಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ವಹೀದಾ ಇಸ್ಮಾಯಿಲ್ ಅವರ ಪರಿ ಕರಾವಳಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ನೇಲ್ಯಮಜಲು (52 ವರ್ಷ) ರವರನ್ನು ತಲವಾರಿನಿಂದ ಕಡಿದು ಕೊಲೆ ಮಾಡಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಹತ್ಯೆ ರಹಸ್ಯದ ಬಗ್ಗೆ ಬೆಳಕು ಚೆಲ್ಲುವ ವಿವರಗಳು ಇಲ್ಲಿವೆ...

ಸದ್ಯಕ್ಕೆ ಇದು ರಾಜಕೀಯ ಉದ್ದೇಶದಿಂದ ನಡೆದ ಕೊಲೆಯಲ್ಲ. ವೈಯಕ್ತಿಕ ದ್ವೇಷದಿಂದ ನಡೆದ ಕೃತ್ಯ, ಸುಪಾರಿ ಕಿಲ್ಲರ್ಸ್ ಬಳಕೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಸ್ಮಾಯಿಲ್ ಅವರು ಐವರ್ನಾಡು ಮಸೀದಿಯಲ್ಲಿ ಶುಕ್ರವಾರದ ನಮಾಜು ಸಲ್ಲಿಸಿ ತನ್ನ ಇನ್ನೋವಾ ಕಾರಿನಲ್ಲಿ ಮನೆಗೆ ಹಿಂತಿರುಗಲು ಸಿದ್ಧರಾಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.[ಮಸೀದಿಯಿಂದ ಹೊರ ಬಂದ ಇಸ್ಮಾಯಿಲ್ ಬರ್ಬರ ಹತ್ಯೆ]

ತನಿಖೆಯ ಜಾಡು ಹಿಡಿದು: ಇಸ್ಮಾಯಿಲ್ ಹಂತಕರ ಪತ್ತೆಗಾಗಿ ಪುತ್ತೂರು ಎಎಸ್ಪಿ ಸಿ.ಬಿ. ರಿಷ್ಯಂತ್ ಮಾರ್ಗದರ್ಶನದಲ್ಲಿ ಮೂರು ತನಿಖಾ ತಂಡ ರಚಿಸಲಾಗಿದೆ. ಈ ತಂಡಗಳು ಕಾಸರಗೋಡು, ಮಡಿಕೇರಿ ಮತ್ತು ಬೆಂಗಳೂರು ಕಡೆಗೆ ಹಂತಕರ ಜಾಡು ಹಿಡಿದು ತೆರಳಿವೆ. ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣಯ್ಯ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಇನ್ನಷ್ಟು ಮುಂದೆ ಓದಿ...

ನ್ಯಾಯಾಲಯದ ಪರಿಸರಕ್ಕೆ ಬಂದಿದ್ದ ಸುಪಾರಿ ಕಿಲ್ಲರ್ಸ್ ಹೆಜ್ಜೆ

ನ್ಯಾಯಾಲಯದ ಪರಿಸರಕ್ಕೆ ಬಂದಿದ್ದ ಸುಪಾರಿ ಕಿಲ್ಲರ್ಸ್ ಹೆಜ್ಜೆ

ಇಸ್ಮಾಯಿಲ್ ರವರು ಸುಳ್ಯ ನ್ಯಾಯಾಲಯದಲ್ಲಿ ತಮ್ಮ ಖಾಸಗಿ ದಾವೆಯೊಂದರ ಕುರಿತು ಹಾಜರಾಗಿದ್ದರು. ನ್ಯಾಯಾಲಯದಲ್ಲಿ ಹಲವು ಸ್ನೇಹಿತರ ಜೊತೆ ಮಾತನಾಡಿದ್ದರು. ಹಂತಕರ ತಂಡ ನ್ಯಾಯಾಲಯದ ಪರಿಸರಕ್ಕೂ ಬಂದಿತ್ತು.

ಸಂದರ್ಭ ಕೂಡಿಬಾರದ ಕಾರಣ ಇಸ್ಮಾಯಿಲ್ ಅವರ ವಾಹನವನ್ನು ಹಿಂಬಾಲಿಸಿ ಐವರ್ನಾಡಿಗೆ ಬಂದಿತ್ತು. ಅಂಗರಕ್ಷಕ ಇದ್ದ ಕಾರಣ ಹಾಗೂ ನ್ಯಾಯಾಲಯದ ಪರಿಸರ ಕೃತ್ಯಕ್ಕೆ ಅನುಕೂಲವಾಗಿರದ ಕಾರಣ ಹಂತಕರು ಶುಕ್ರವಾರ ಮಧ್ಯಾಹ್ನದ ತನಕ ಹೊಂಚು ಹಾಕಿ ತಮ್ಮ ಕೃತ್ಯವನ್ನು ನಡೆಸಿದ್ದಾರೆ.

ಹೊಂಚು ಹಾಕಿ ಕೊಂದರು

ಹೊಂಚು ಹಾಕಿ ಕೊಂದರು

ಇಸ್ಮಾಯಿಲ್ ಅವರು ಶುಕ್ರವಾರ ಮಸೀದಿಯಲ್ಲಿ ಜುಮಾ ಪ್ರಾರ್ಥನೆ ಮುಗಿಸಿ ಹೊರಬಂದು ತಮ್ಮ ವಾಹನದತ್ತ ಬಂದಾಗ ಕಾರಿನಲ್ಲಿ ಬಂದ ಹಂತಕರ ತಂಡ ಇವರ ಮುಖ ಸಹಿತ ದೇಹದ ವಿವಿಧ ಭಾಗಗಳಿಗೆ ತಲವಾರಿನಿಂದ ಕಡಿದಾಗ ಗಂಭೀರ ಗಾಯಗೊಂಡ ಇಸ್ಮಾಯಿಲ್ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟರು.

ಶುಕ್ರವಾರ ಮಧ್ಯಾಹ್ನ ಅಂದಾಜು 1:45ರ ವೇಳೆಗೆ ಈ ಕೃತ್ಯ ಸಂಭವಿಸಿದೆ ಇಸ್ಮಾಯಿಲ್ ರ ಮೃತ ದೇಹ ಅವರ ವಾಹನದ ಬಳಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಈ ಘಟನೆ ಸ್ಥಳೀಯರನ್ನು ತಲ್ಲಣಗೊಳಿಸಿದೆ. ಮಸೀದಿಗೆ ಹೋಗುವ ಕಾರಣ ಅಂಗರಕ್ಷಕ ಇಸ್ಮಾಯಿಲ್ ಅವರ ಜೊತೆ ಇರಲಿಲ್ಲ.

ವೃತ್ತಿಪರ ಹಂತಕರಿಂದ ಕೊಲೆ

ವೃತ್ತಿಪರ ಹಂತಕರಿಂದ ಕೊಲೆ

ಇಸ್ಮಾಯಿಲ್ ಅವರನ್ನು ತಲವಾರಿನಿಂದ ಕೊಚ್ಚಿ ಕೊಲೆಗೈದ ಘಟನೆಯನ್ನು ಗಮನಿಸಿದರೆ ಇಸ್ಮಾಯಿಲ್ ಅವರ ಹಳೆಯ ದ್ವೇಷಿಗಳು ವೃತ್ತಿಪರ ಹಂತಕರ(ಸುಪಾರಿ ಕಿಲ್ಲರ್ಸ್) ಮೂಲಕ ಈ ಕೃತ್ಯವನ್ನು ನಡೆಸಿರಬಹುದೆಂದು ಶಂಕಿಸಲಾಗುತ್ತಿದೆ. ಈ ಹಿಂದಿನ ಯತ್ನದಲ್ಲಿ ಹಂತಕರಿಗೆ ಇಸ್ಮಾಯಿಲ್ ಅವರನ್ನು ಕೊಲೆ ಮಾಡಲು ಸಾಧ್ಯವಾಗಿರಲಿಲ್ಲ. ಸುಳ್ಯ ಗಾಂಧಿನಗರದಲ್ಲಿ ಅಂದು ನಡೆದ ಕೊಲೆ ಯತ್ನ ವಿಫಲವಾಗಿತ್ತು. ತದ ನಂತರ ಇಸ್ಮಾಯಿಲ್ ರವರು ಅಂಗರಕ್ಷಕರನ್ನು ನೇಮಿಸಿಕೊಂಡಿದ್ದರು.

ವಿಧಿವಿಜ್ಞಾನ ತಜ್ಞರ ವರದಿಗೆ ಕಾಯುತ್ತಿದ್ದಾರೆ

ವಿಧಿವಿಜ್ಞಾನ ತಜ್ಞರ ವರದಿಗೆ ಕಾಯುತ್ತಿದ್ದಾರೆ

ಇಸ್ಮಾಯಿಲ್ ಅವ ದೇಹದ ಮರಣೋತ್ತರ ಪರೀಕ್ಷೆ ವಿಧಿವಿಜ್ಞಾನ ತಜ್ಞರ ನೆರವಿನೊಂದಿಗೆ ನಡೆಯಲಿದೆ. ದೇರಳಕಟ್ಟೆ ಆಸ್ಪತ್ರೆಯ ವಿಧಿವಿಜ್ಞಾನ ತಜ್ಞರ ತಂಡ ಡಾ ಗೀತಾಲಕ್ಷ್ಮೀ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿದ ಬಳಿಕವಷ್ಟೇ ಮೃತದೇಹವನ್ನು ಅಲ್ಲಿಂದ ತೆರವುಗೊಳಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ, ಪುತ್ತೂರು ಎಎಸ್ಪಿ ಸಿ.ಬಿ. ರಿಷ್ಯಂತ್, ಸುಳ್ಯ ವೃತ್ತನಿರೀಕ್ಷಕ ಕೃಷ್ಣಯ್ಯ, ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ಎಂ.ವಿ.ಚೆಲುವಯ್ಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಥಮಿಕ ತನಿಖೆಯಿಂದ ಸುಳಿವು ಲಭ್ಯವಾಗಿದೆ

ಪ್ರಾಥಮಿಕ ತನಿಖೆಯಿಂದ ಸುಳಿವು ಲಭ್ಯವಾಗಿದೆ

ಇಸ್ಮಾಯಿಲ್ ಅವರನ್ನು ಈ ಹಿಂದೆ ಸುಳ್ಯ ಗಾಂಧಿ ನಗರದಲ್ಲಿ ಕೊಲೆಗೆ ಯತ್ನಿಸಿದ ಆರೋಪಿಯೇ ಇಂದು ಈ ಕೊಲೆ ಕೃತ್ಯದಲ್ಲಿ ಪಾಲ್ಗೊಂಡಿರುವ ಕುರಿತು ಪೊಲೀಸರಿಗೆ ಪ್ರಾಥಮಿಕ ತನಿಖೆಯಿಂದ ಸುಳಿವು ಲಭ್ಯವಾಗಿದೆ. ಇಸ್ಮಾಯಿಲ್ ಅವರೊಂದಿಗೆ ಈ ವ್ಯಕ್ತಿ ಈಗಲೂ ದ್ವೇಷ ಹೊಂದಿದ್ದು, ಅಂದಿನ ಕೊಲೆ ಯತ್ನ ಘಟನೆಯಲ್ಲಿ ಜಾಮೀನು ಪಡೆದು ಹೊರಬಂದ ಬಳಿಕವೂ ಇಸ್ಮಾಯಿಲ್ ಅವರನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಈ ವ್ಯಕ್ತಿ ಬಹಿರಂಗವಾಗಿ ಹೇಳಿಕೊಂಡಿದ್ದನು.

ರಾಜಕೀಯ ದ್ವೇಷದಿಂದ ನಡೆದ ಕೃತ್ಯವಲ್ಲ

ರಾಜಕೀಯ ದ್ವೇಷದಿಂದ ನಡೆದ ಕೃತ್ಯವಲ್ಲ

ಇಸ್ಮಾಯಿಲ್ ಕೊಲೆಯಲ್ಲಿ ಯಾವುದೇ ರಾಜಕೀಯ ವೈಷಮ್ಯ ಇಲ್ಲ ಎಂದು ಪೊಲೀಸರು ತಿಳಿಸಿದ್ದು ಖಾಸಗಿ ವಿಚಾರವಾಗಿ ಹುಟ್ಟಿಕೊಂಡ ದ್ವೇಷವೇ ಇಂದು ಕೊಲೆಯಲ್ಲಿ ಪರ್ಯಾವಸಾನ ಹೊಂದಿದೆ. ಇಸ್ಮಾಯಿಲ್ ಅವರು ಐವರ್ನಾಡಿನ ಮಸೀದಿಗೆ ಪ್ರತಿ ಶುಕ್ರವಾರ ಜುಮಾ ಪ್ರಾರ್ಥನೆಗೆ ಬರುವ ವಿಚಾರ ಆರೋಪಿಗಳಿಗೆ ತಿಳಿದಿತ್ತು. ಆರೋಪಿಗಳು ಸಂದರ್ಭಕ್ಕಾಗಿ ಕಾಯುತ್ತಿದ್ದರು. ಇಸ್ಮಾಯಿಲ್ ಅವರ ಜೊತೆ ಸದಾ ಅಂಗರಕ್ಷಕ ಇರುತ್ತಿದ್ದರು. ಮಸೀದಿಗೆ ಪ್ರಾರ್ಥನೆಗೆ ಬಂದ ಸಂದರ್ಭದಲ್ಲಿ ಅಂಗರಕ್ಷಕ ಇರುತ್ತಿರಲಿಲ್ಲ. ಈ ವಿಚಾರ ಆರೋಪಿಗಳಿಗೂ ಗೊತ್ತಿತ್ತು.

ಶುಕ್ರವಾರವೇ ಕೃತ್ಯಕ್ಕೆ ಆಯ್ದುಕೊಂಡಿದ್ದಾರೆ

ಶುಕ್ರವಾರವೇ ಕೃತ್ಯಕ್ಕೆ ಆಯ್ದುಕೊಂಡಿದ್ದಾರೆ

ಕಳೆದ ಬಾರಿ ಸುಳ್ಯ ಗಾಂಧಿನಗರದಲ್ಲಿ ಇಸ್ಮಾಯಿಲ್ ಅವರ ಮೇಲೆ ಕೊಲೆ ಯತ್ನ ನಡೆದ ದಿನ ಕೂಡ ಶುಕ್ರವಾರವೇ ಆಗಿತ್ತು. ಕೊಲೆ ನಡೆದ ಸೆ.23 ಕೂಡ ಶುಕ್ರವಾರವೇ ಆಗಿದೆ. ಈ ಘಟನೆಯು ವೈಯಕ್ತಿಕ ದ್ವೇಷದ ಕೃತ್ಯವೇ ಹೊರತು ಇದರಲ್ಲಿ ಯಾವುದೇ ಕೋಮು ಸಂಬಂಧಗಳು ಇಲ್ಲ ಎಂಬುದು ಪೊಲೀಸರಿಗೆ ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ.ಇಸ್ಮಾಯಿಲ್ ಕೊಲೆ ಪ್ರಕರಣದ ತನಿಖೆಗಾಗಿ ಶ್ವಾನ ದಳವನ್ನು ಸ್ಥಳಕ್ಕೆ ಕರೆಯಲಾಗಿದೆ. ಮಳೆ ಕಾರಣದಿಂದ ಹಂತಕರ ಕುರಿತು ವಾಸನೆ ಗ್ರಹಿಸಲು ಪೊಲೀಸ್ ಶ್ವಾನಕ್ಕೆ ಕಷ್ಟವಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sullia : Bellare police in Dakshina Kannada district are investigating Ismail Nelyamajalu murder case. Police suspect that Congress leader Ismail Nelyamajalu killed by Professionals. It was well planned and executed. But, police have a clue and will snatch the culprit soon said senior officer.
Please Wait while comments are loading...