ಸುಳ್ಯ ಕೆ.ಎಸ್.ಆರ್.ಟಿ.ಸಿ ಡಿಪೋ ಕಾಮಗಾರಿ ಪೂರ್ಣಗೊಳ್ಳುವುದೆಂದು?

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಎಪ್ರಿಲ್ 18: ಕಾಮಗಾರಿ ಆರಂಭವಾಗಿ ವರ್ಷ ಮೂರು ಕಳೆಯಿತು. ಹೀಗಿದ್ದೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕೆಎಸ್ಆರ್ಟಿಸಿ ಡಿಪೋದ ನಿರ್ಮಾಣ ಮಾತ್ರ ಇನ್ನೂ ಮುಗಿದಿಲ್ಲ. ಹೀಗಾಗಿ ಲೋಕಾರ್ಪಣೆ ಮತ್ತಷ್ಟು ವಿಳಂಬವಾಗುತ್ತಿದೆ.

ಮೂರುವರೆ ಕೋಟಿ ವೆಚ್ಚದಲ್ಲಿ ಸುಳ್ಯ ನಗರದ ಮುಖ್ಯ ಬಸ್ ನಿಲ್ದಾಣದಿಂದ ಒಂದು ಕಿ.ಮೀ. ದೂರದಲ್ಲಿರುವ ಉಬರಡ್ಕ ರಸ್ತೆಯ ಕಾಯರ್ತೋಡಿನಲ್ಲಿ ನೂತನ ಕೆಎಸ್ಆರ್ಟಿಸಿ ಬಸ್ ಡಿಪೋ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಟೆಂಡರ್ ಅವಧಿ ಮುಗಿದರೂ ಕಾಮಗಾರಿ ಮಾತ್ರ ಮುಗಿದಿಲ್ಲ. ಆಮೆ ನಡಿಗೆಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದಾಗಿ ಡಿಪೋ ಉದ್ಘಾಟನೆ ಮತ್ತೆ ಮತ್ತೆ ವಿಳಂಬವಾಗುತ್ತಿದೆ.[ಮಂಗಳೂರಿನ ವೀರಯೋಧ ಸಂತೋಷ್ ಮನೆಗೆ ಗಣ್ಯರ ಭೇಟಿ]

Sullia bus depot construction delayed even after tender period is over

ಈ ಹಿಂದೆ ಡಿಪೋ ನಿರ್ಮಾಣವಾಗುತ್ತಿರುವ ಸ್ಥಳ ವಿವಾದ ಸೃಷ್ಟಿಸಿತ್ತು. ಈ ಸ್ಥಳದ ಭೂ ಹಕ್ಕು ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ವಿವಾದಗಳಿದ್ದವು. ಇದು ಕೋರ್ಟ್ ಮೆಟ್ಟಿಲೇರಿತ್ತು. ಕೊನೆಗೂ ಈ ವಿವಾದಕ್ಕೆ ಇತಿಶ್ರೀ ಸಿಕ್ಕಿತು.

ಇದೀಗ 7 ಎಕರೆ ಜಾಗದಲ್ಲಿ ಡಿಪೋ ನಿರ್ಮಾಣವಾಗುತ್ತಿದೆ. 2014 ರಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಈ ಜಾಗ ಬೆಟ್ಟ ಪ್ರದೇಶವಾಗಿದ್ದರಿಂದ ಇದನ್ನ ಸಮತಟ್ಟು ಮಾಡಲು ತಿಂಗಳುಗಳೇ ಬೇಕಾಯಿತು.[ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ: ಸಿಐಡಿ ತನಿಖೆಗೆ ಆದೇಶ]

ಮೈಸೂರು ಬೆಂಗಳೂರು ಕಡೆಯಿಂದ ಕೊಡಗು ಮೂಲಕ ಬರುವವರು ಕುಕ್ಕೆ ಸುಬ್ರಹ್ಮಣ್ಯ ಮುಂತಾದ ಕಡೆ ಹೋಗಲು, ಅದೇ ರೀತಿ ಇಲ್ಲಿನವರು ಮೈಸೂರು, ಮಡಿಕೇರಿಗೆ ಹೋಗಬೇಕೆಂದರೆ ಸುಳ್ಯ ಮೂಲಕವೇ ಹೋಗಬೇಕು. ಹೀಗಾಗಿ ದಿನಾಲೂ ಇಲ್ಲಿ ಜನ ಸಂಚಾರ ಹೆಚ್ಚಾಗಿರುತ್ತವೆ.

ಈ ನೂತನ ಬಸ್ ಡಿಪೋ ನಿರ್ಮಾಣವಾದಲ್ಲಿ ಇಲ್ಲಿನ ಗ್ರಾಮೀಣ ಭಾಗದ ಜನರಿಗೆ ಪ್ರಯಾಣ ಮಾಡಲು ಮತ್ತಷ್ಟು ಸುಲಭವಾಗುತ್ತದೆ.

ಸದ್ಯ ಇಲ್ಲಿ ಬಸ್ ನಿಲ್ಲುವ ಸ್ಥಳದ ಕಾಮಗಾರಿ, ಪೆಟ್ರೋಲ್ ಪಂಪ್ ಅಳವಡಿಸುವ ಕಾಮಗಾರಿ ಸೇರಿ ಕೆಲ ಕಾಮಗಾರಿಗಳು ಬಾಕಿ ಇವೆ. ಕೂಡಲೇ ಇವನ್ನ ಪೂರ್ಣಗೊಳಿಸಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sullia Bus depot construction delayed even after tender period is over. Construction of bus depot started in 2014 with a cost of 3 crores but it fails to complete within mentioned period of construction.
Please Wait while comments are loading...