ಸುರೇಶ್ ಪಡೀಲ್ ಕೊಲೆ ಯತ್ನ ತಪ್ಪಿಸಿದ ಪೊಲೀಸರಿಗೆ ಬಹುಮಾನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜೂನ್ 06 : ಮಂಗಳೂರು ಕೋರ್ಟ್ ಆವರಣದಲ್ಲಿ ಸುರೇಶ್ ಪಡೀಲ್ ಕೊಲೆಯತ್ನ ತಪ್ಪಿಸಿದ ಪೊಲೀಸರಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಗಿದೆ. ಶನಿವಾರ ಕೋರ್ಟ್‌ ಆವರಣದಲ್ಲಿ ಜಪಾನ್ ಮಂಗ ಸುರೇಶ್ ಅವರ ಕೊಲೆಗೆ ಯತ್ನಿಸಿದ್ದ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ಭಾನುವಾರ, ಎಎಸ್‌ಐ ಶ್ರೀಧರ್, ಹೆಡ್‌ ಕಾನ್‌ಸ್ಟೇಬಲ್‌ ರಾಘವ್, ಹರೀಶ್, ದಿನೇಶ್ ಹಾಗೂ ಮಹಾಂತೇಶ್ ಅವರಿಗೆ ತಲಾ 2000 ರೂ. ಬಹುಮಾನ ನೀಡಿ, ಅಭಿನಂದನೆ ಸಲ್ಲಿಸಿದ್ದಾರೆ. [ಸುಭಾಷ್ ಕೊಲೆಗೆ ಯತ್ನಿಸಿದ ಜಪಾನ್ ಮಂಗ]

mangaluru

ಸುಭಾಷ್ ಪಡೀಲ್ 2012ರ ಹೋಮ್ ಸ್ಟೇ ದಾಳಿಯ ಪ್ರಮುಖ ಆರೋಪಿ. ಜೂನ್ 4ರ ಶನಿವಾರ ಕೋರ್ಟ್‌ಗೆ ಅವರು ವಿಚಾರಣೆಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ರಾಜ ಅಲಿಯಸ್ ಜಪಾನ್ ಮಂಗ ಸುಭಾಷ್ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ. [ಪಡೀಲ್ ಬಂಧನ ಖಂಡಿಸಿ, ಪ್ರತಿಭಟನೆ]

ಅಲ್ಲಿದ್ದ ಪೊಲೀಸರು ತಕ್ಷಣ ಜಪಾನ್‌ ಮಂಗನನ್ನು ಬಂಧಿಸಿ, ಸುಭಾಷ್ ಅವರನ್ನು ರಕ್ಷಣೆ ಮಾಡಿದ್ದರು. ಸುಭಾಷ್ ಪಡೀಲ್ ಕೊಲೆ ಯತ್ನ ಪ್ರಕರಣದಿಂದಾಗಿ ಕೋರ್ಟ್‌ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

police

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dakshina Kannada police arrested Japan Manga alias Raju who attacked 2012 Padil home stay attack accused Subhash Padil at court premises in Mangaluru on Saturday, Jun 4, 2016. Police get Rs 2000 reward.
Please Wait while comments are loading...