ಎಸ್ಸೆಸ್ಸೆಲ್ಸಿಯಲ್ಲಿ ಶೇ 90 ಅಂಕ ಗಳಿಸಿದರೆ ವಿಮಾನ ಯಾನ ಬಹುಮಾನ

By: ಐಸಾಕ್ ರಿಚರ್ಡ್
Subscribe to Oneindia Kannada

ಮಂಗಳೂರು, ಮಾರ್ಚ್ 17: ಸರಕಾರಿ ಕನ್ನಡ ಶಾಲೆಗಳು ಅಂದ್ರೆ ಮೂಗು ಮುರಿಯೋರೆ ಜಾಸ್ತಿ. ತಮ್ಮ ಮಕ್ಕಳು ಇಂಗ್ಲಿಷ್ ಮೀಡಿಯಂನಲ್ಲಿ ಓದಿದರೆ ಜ್ಞಾನ ಹೆಚ್ಚುತ್ತೆ ಅನ್ನೋದು ಪೋಷಕರ ನಂಬಿಕೆ. ಆದರೆ ಮಂಗಳೂರಿನಲ್ಲಿ ಸರಕಾರಿ ಶಾಲಾ ಅಧ್ಯಾಪಕರು ಕನ್ನಡ ಶಾಲೆ ಉಳಿಸೋಕೆ ಹಾಗೂ ಪ್ರತಿಭೆಗಳನ್ನ ಬೆಳೆಸೋಕೆ ವಿಭಿನ್ನ ಪ್ರಯತ್ನ ಮಾಡ್ತಿದ್ದಾರೆ.

ಮಂಗಳೂರಿನ ರಥಬೀದಿಯಲ್ಲಿರುವ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾದ್ರೆ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ. ಶಿಕ್ಷಕರು ವಿದ್ಯಾರ್ಥಿನಿಯರಿಗಾಗಿ ಈ ಬಂಪರ್ ಆಫರ್ ನೀಡಿದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿನಿಯರಿಗೆ ವಿಮಾನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗೋ ಮಾತು ಕೊಟ್ಟಿದ್ದಾರೆ.[ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಬದಲಾವಣೆ ಬಗ್ಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ನಿರ್ಧರಿಸಿ: ಹೈಕೋರ್ಟ್]

Students scoring 90 percent get chance to travel by air

ಕೇವಲ ಆಕಾಶದಲ್ಲಿ ಹಾರಾಡುವ ಲೋಹದ ಹಕ್ಕಿಗಳನ್ನು ನೋಡಿಯೇ ಕಣ್ತುಂಬಿಕೊಳ್ಳಬೇಕಾಗಿದ್ದ ಸರಕಾರಿ ಶಾಲೆಗಳ ಮಕ್ಕಳು ವಿಮಾನ ಏರಬಹುದೆಂಬ ಆಸೆ ಗರಿಗೆದರುವಂತೆ ಮಾಡಿದ್ದಾರೆ ಈ ಶಾಲೆಯ ಶಿಕ್ಷಕರು.

Students scoring 90 percent get chance to travel by air

ವಿದ್ಯಾರ್ಥಿನಿಯರಲ್ಲಿ ಕಲಿಕೆ ಉತ್ಸಾಹವನ್ನು ಹೆಚ್ಚಿಸುವ ಸಲುವಾಗಿ ಕಳೆದ ವರ್ಷ ಶಿಕ್ಷಕರು ಇಂಥದ್ದೊಂದು ಆಫರ್ ಇಟ್ಟಿದ್ದರು. ಅದು ಫಲ ಕೊಟ್ಟಿದ್ದು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದರು. ಜೊತೆಗೆ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿ ಮೂವರು ವಿದ್ಯಾರ್ಥಿಗಳು ಜಿಲ್ಲೆಯ ಗಮನ ಸೆಳೆದಿದ್ದರು.

Students scoring 90 percent get chance to travel by air

ಇನ್ನು ಒನ್ ಇಂಡಿಯಾ ಜೊತೆ ಮಾತನಾಡಿದ ಮುಖ್ಯೋಪಾಧ್ಯಾಯರಾದ ರಾಜ್ವಿ ಕೆ, ವಿದ್ಯಾರ್ಥಿಗಳಲ್ಲಿ ಕಲಿಯುವ ಆಸೆ ಹುಟ್ಟಿಸಲು, ಈ ಬಾರಿ ವಿಮಾನ ಏರುವ ಆಸೆ ಕೈ ತಪ್ಪಿದರೂ ಮುಂದೆ ಜೀವನದಲ್ಲಿ ಒಳ್ಳೆಯ ಉದ್ಯೋಗ ಲಭಿಸಿ ಈ ಆಸೆ ಖಂಡಿತಾ ಈಡೇರುತ್ತದೆ ಎಂಬ ಉತ್ಸಾಹ ಸದಾ ಜಾಗೃತವಾಗಿರಲಿ ಎಂಬ ಕಾರಣಕ್ಕೇ ಇಂಥದ್ದೊಂದು ಘೋಷಣೆ ಮಾಡಿದೆವು. ಈ ವೆಚ್ಚವನ್ನು ಶಾಲೆಯೇ ಭರಿಸುತ್ತದೆ. ಕೆಲವು ದಾನಿಗಳೂ ಶಿಕ್ಷಕರ ಉದ್ದೇಶಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು.[ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]

Students scoring 90 percent get chance to travel by air

ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಆದರೆ ಸ್ವತಃ ಈ ಶಾಲೆಯ ಶಿಕ್ಷಕರೇ ಮಕ್ಕಳಲ್ಲಿ ಕಲಿಯುವ ಆಸಕ್ತಿಯನ್ನು ಹೆಚ್ಚಿಸಲು ಕೈಗೊಳ್ಳುತ್ತಿರುವ ಪ್ರಯತ್ನದ ಮೂಲಕ ಮಾದರಿಯಾಗಿದ್ದಾರೆ. ಖಾಸಗಿ ಶಾಲೆಗಳ ಅಬ್ಬರದ ಎದುರು ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸೋಕೆ ಅಧ್ಯಾಪಕರು ಮಾಡ್ತಿರೋ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The women's PU college at car street in the Mangaluru has stood apart by bringing out a unique scheme of rewarding students scoring high marks. Any student who score over 90 percent marks in SSLC will be given an opportunity to travel in air to Bengaluru.
Please Wait while comments are loading...