ಪ್ರತಿಮೆ ಮಾನವ ರಫೀಕ್‌ನನ್ನು ನಿಮಗೆ ನಗಿಸಲು ಸಾಧ್ಯವೆ?

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 05 : ಪ್ರತಿಮೆ ಮಾನವ (ಸ್ಟಾಚ್ಯು ಮ್ಯಾನ್) ಎಂದೇ ಪ್ರಖ್ಯಾತಿ ಪಡೆದಿರುವ ಮಹಮ್ಮದ್ ರಫೀಕ್ ಪುತ್ತೂರಿಗೆ ಸದ್ಯದಲ್ಲಿಯೇ ಬರಲಿದ್ದಾರೆ. ರಫೀಕ್ ಸ್ಥಬ್ಧವಾಗಿ ನಿಂತುಬಿಟ್ಟರೆ ಶಿಲಾ ಪ್ರತಿಮೆಯೇ ನಾಚಿಸುವಂತಹ ಅದ್ಬುತ ಮನುಷ್ಯ.

ಈ ಪ್ರತಿಮೆ ಮಾನವ ದೃಢತೆಯೊಂದಿಗೆ ನಿಂತರೆ ಕಣ್ ರೆಪ್ಪೆ ಸಹ ಮಿಟುಕಿಸೊಲ್ಲ, ಒಂಚೂರು ಅಲುಗಾಡೊಲ್ಲ. ನೋಡಿದ್ರೆ ನೋಡ್ತಾನೆ ಇರ್ತಾರೆ. ನೀವೇನೇ ಕಸರತ್ತು ಮಾಡಿದ್ರೂ ನಗೋಲ್ಲ. ಗಂಟೆಗಳ ಕಾಲ ಪ್ರತಿಮೆಯಾಗಿಯೇ ನಿಲ್ಲುತ್ತಾರೆ ಚೆನ್ನೈನಲ್ಲಿ ನೆಲೆಸಿರುವ ಈ ರಫೀಕ್.

ಈ ಅಪರೂಪದ ಮನುಷ್ಯ ರಫೀಕ್ ಪುತ್ತೂರಿಗೆ ಬರುತಿದ್ದು ಆಗಸ್ಟ 7ರಂದು ಪುತ್ತೂರಿನ ಟೋಪ್ಕೊ ಝಮ್ ಝಮ್ ಜ್ಯುವೆಲ್ಲರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಆ ಕಾರ್ಯಕ್ರಮದಲ್ಲಿ ರಫೀಕ್ ಪ್ರತಿಮೆಯಾಗಿ ನಿಂತು ಜನರನ್ನು ಆಕರ್ಷಿಸಲಿದ್ದಾರೆ. ಚೆನ್ನೈನ ಗೋಲ್ಡನ್ ಬೀಚ್ ನಲ್ಲಿ ಇವರದೇ ಆಕರ್ಷಣೆ.

Statue man of India to arrive to Puttur on Aug 7th

ಈ ನಡುವೆ ಝಮ್ ಝಮ್ ಜ್ಯುವೆಲ್ಲರಿ ಒಂದು ಸ್ಪರ್ಧೆಯನ್ನು ಕೂಡ ಆಯೋಜಿಸಿದೆ. ಪ್ರತಿಮೆ ಮಾನವ ರಫೀಕ್ ಅವರನ್ನು ನಗಿಸುವ ಸ್ಪರ್ದೆ. ಈ ಸವಾಲನ್ನು ಸಾರ್ವಜನಿಕರು ಸ್ವೀಕರಿಸಿ ರಫೀಕ್ ಅವರನ್ನು ನಗಿಸಿದರೆ ಝಮ್ ಝಮ್ ಜ್ಯುವೆಲ್ಲರಿ ಅವರು 51 ಸಾವಿರ ರೂಪಾಯಿ ನಗದು ಬಹುಮಾನ ನೀಡಲಿದ್ದಾರೆ.

ಪ್ರತಿಮೆ ಮಾನವ ರಫೀಕ್:

ಪ್ರತಿಮೆ ಮಾನವ ಚೆನ್ನೈಯ ಪನಿಯೂರಿನವರು. ಕೈಯಲ್ಲೊಂದು ಬಡಿಗೆ ಹಿಡಿದು ನಿಂತರೆ ಥೇಟ್ ವಿಗ್ರಹವೇ. 53ರ ಹರೆಯದ ರಫೀಕ್ ತನ್ನ ಸ್ವಸಾಮರ್ಥ್ಯದಿಂದ ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಕಳೆದ 35 ವರ್ಷಗಳಿಂದ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಭಾರತವಲ್ಲದೆ ದುಬೈ, ಮಲೇಷ್ಯಾ, ಮಸ್ಕತ್ ನಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ.

ನಿರಂತರ 6 ತಾಸುಗಳ ಕಾಲ ಅಲುಗಾಡದೆ ಪ್ರತಿಮೆಯಾಗಿ ನಿಲ್ಲುವ ಸಾಮರ್ಥ್ಯ ಇವರಿಗಿದೆ. ರಫೀಕ್ ಪ್ರತಿಭೆಯನ್ನು ಗುರುತಿಸಿ ಚಿದಂಬರಂ ಅಣ್ಣಾಮಲೈ ಯುನಿವರ್ಸಿಟಿಯಲ್ಲಿ ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Statue man of India Mohammad Raffiq who is staying in Chennai will be arriving to Puttur on August 7th as a guest for the inaugral cermony of a Jewellery showroom at Puttur. There is contest by Zum Zum Jewelry to make him laugh. Can you try?
Please Wait while comments are loading...