ಸಂತ ಅಲೋಶಿಯಸ್ ಕಾಲೇಜು ವಿವಾದ, ಕಿಡಿಗೇಡಿಗಳ ಕೃತ್ಯವೇ?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 06 : ಹಲವು ನಿಯಮಗಳ ವಿಚಾರದಲ್ಲಿ ಸುದ್ದಿಯಾಗಿದ್ದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದೆ. ಕಾಲೇಜಿನಲ್ಲಿ ಯಾವುದೇ ನಿಯಮವನ್ನು ಜಾರಿಗೆ ತಂದಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ವಿದ್ಯಾರ್ಥಿನಿಯರು ಮೇಕಪ್ ಮಾಡಬಾರದು, ನೈಲ್ ಪಾಲಿಶ್ ಹಚ್ಚುವಂತಿಲ್ಲ, ಕಣ್ಣಿಗೆ ಕಾಡಿಗೆ ಹಚ್ಚಬಾರದು, ಟ್ಯಾಟೋ ಹಾಕುವಂತಿಲ್ಲ ಮುಂತಾದ ನಿಯಮಗಳನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಜಾರಿಗೆ ತರಲಾಗಿದೆ ಎಂದು ಬ್ಲಾಗ್‌ವೊಂದರಲ್ಲಿ ಬರೆಯಲಾಗಿತ್ತು.[ನಮಾಜಿಗೆ ಹೋಗಲು ಬಿಡಲ್ಲ, ಸ್ಕಾರ್ಫ್ ಧರಿಸಲು ಒಪ್ಪಲ್ಲ!]

St Aloysius college denies discriminatory rules allegations

ಸಾಮಾಜಿಕ ಜಾಲತಾಣದಲ್ಲಿ ಕಾಲೇಜಿನ ಈ ನಿಯಮಗಳ ಬಗ್ಗೆ ವ್ಯಾಪಕ ಚರ್ಚೆಗೆ ನಡೆದಿತ್ತು. ಆದರೆ, ಕಾಲೇಜಿನ ಆಡಳಿತ ಮಂಡಳಿ ಈ ಆರೋಪಗಳನ್ನು ತಳ್ಳಿಹಾಕಿದೆ. ಬ್ಲಾಗ್‌ನಲ್ಲಿನ ಬರಹದ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಕಾಲೇಜು ಹೇಳಿದೆ.[ಪ್ರತಿಭಾ ಶೋಧದಲ್ಲಿ ಮಂಗಳೂರಿನ ವಿದ್ಯಾರ್ಥಿಗಳ ಸಾಧನೆ]

ಆರೋಪ ಏನಿತ್ತು? : ಕಾಲೇಜಿನಲ್ಲಿ ವಾರದ ಹಿಂದೆ ನಡೆದ ಪುನಶ್ಚೇತನ ಕಾರ್ಯಕ್ರಮದಲ್ಲಿ ಈ ಬಗ್ಗೆ ಕರಪತ್ರ ಹಂಚಲಾಗಿತ್ತು. ಕರಪತ್ರವನ್ನು ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಹಂಚಲಾಗಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೂ ಈ ಕರಪತ್ರವನ್ನು ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.

ಈ ನಿಯಮವನ್ನು ಉಲ್ಲಂಘನೆ ಮಾಡಿದರೆ ವಿದ್ಯಾರ್ಥಿಗಳಿಗೆ ಪ್ರಥಮ ಬಾರಿಗೆ ರೂ. 500 ದಂಡ, 2 ನೇ ಬಾರಿ ಸಿಕ್ಕಿಬಿದ್ದರರೆ ರೂ. 1000 ದಂಡ ಹಾಗೂ 7 ದಿನಗಳ ಕಾಲ ಡಿಬಾರ್, ನಂತರವೂ ಸಿಕ್ಕಿಬಿದ್ದರೆ ಕಾಲೇಜಿನಿಂದ ಅಮಾನತುಗೊಳಿಸುವ ಎಚ್ಚರಿಕೆಯನ್ನು ನೀಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು.

ಆದರೆ, ವಿದ್ಯಾರ್ಥಿಗಳಿಗೆ ಹಂಚಲಾದ ಕರಪತ್ರದಲ್ಲಿ ಎಲ್ಲಿಯೂ ಕಾಲೇಜಿನ ಹೆಸಾರಾಗಲಿ, ಕಾಲೇಜು ಮುಖ್ಯಸ್ಥರ ಸಹಿಯಾಗಲಿ ಇರಲಿಲ್ಲ. ಕಿಡಿಗೇಡಿ ವಿದ್ಯಾರ್ಥಿಗಳು ಈ ಕರಪತ್ರ ಹಂಚಿರಬಹುದು ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru St Aloysius PU College denied the allegations of discriminatory rules enforced on students. College authorities said they will file complaint to police.
Please Wait while comments are loading...