ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ಪರಿಸರ ಪ್ರೇಮ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್. 14 : ಭೂಮಿ ಆರೋಗ್ಯ ಸುಧಾರಿಸಬೇಕಾದರೆ, ಹಸಿರು ನಮ್ಮೆಲ್ಲರ ಉಸಿರಾಗಬೇಕು. ಪರಿಸರ ಮಾಲಿನ್ಯ ತಡೆಯುವುದು ಸಾಮೂಹಿಕ ಹೊಣೆಗಾರಿಕೆ.

ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಪ್ರತಿವರ್ಷವೂ ನಡೆಯುತ್ತಲೇ ಇವೆ. ಆದರೆ, ಅಚ್ಚರಿ ಎಂಬಂತೆ ಮಂಗಳೂರಿನ ಹೆಸರಾಂತ ಕಾಲೇಜುಗಳಲ್ಲಿ ಒಂದಾದ ಸೇಂಟ್ ಆಗ್ನೆಸ್ ಕಾಲೇಜ್ ಪರಿಸರದ ಬಗ್ಗೆ ತನ್ನ ಅನನ್ಯ ಪ್ರೇಮ ಹಾಗೂ ಕಾಳಜಿ ವಹಿಸಲು ಮುಂದಾಗಿದೆ.[ಮಂಗಳೂರಿನ ಬೆಲ್ಲ ಕ್ಯಾಂಡಿ ರುಚಿಯನ್ನು ಸವಿದವನೇ ಬಲ್ಲ!]

ಸೇಂಟ್ ಆಗ್ನೆಸ್ ಕಾಲೇಜು ಹಾದು ಹೋಗುವ ರಸ್ತೆಯ ವಿಭಾಜಕಗಳಲ್ಲಿ ಸುಮಾರು 150 ಸಸ್ಯಗಳನ್ನು ಕಾಣಬಹುದು. ನಗರದ ಸೇಂಟ್ ತೆರೇಸಾ ಪ್ರೌಢ ಶಾಲೆಯಿಂದ ಹಿಡಿದು ಬೆಂದೂರ್ ವೆಲ್ ನ ವಾಸ್ ಬೇಕರಿ ತನಕ ಸಸ್ಯಗಳ ಸೌಂದರ್ಯವನ್ನು ಕಾಣಬಹುದು. [ಮಂಗಳೂರಿಗೆ ಬಂತು ಗಾಳಿ ಅಳೆಯುವ ತಂತ್ರ]

ಹೌದು, ಈ ಕಾಲೇಜಿನ ಯುವ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಕಾರ್ಯ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎಲ್ಲೆಲ್ಲೂ ನೀರಿನ ಕೊರತೆ ಇದ್ದು ಜನರು ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. [ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಹೊಸ ಸ್ವೈಪಿಂಗ್ ಉಪಕರಣ]

ಆದರೆ, ಈ ಕಾಲೇಜಿನ ವಿದ್ಯಾರ್ಥಿಗಳು ಕೇವಲ ಸಸ್ಯಗಳನ್ನು ನೆಟ್ಟಿದ್ದಲ್ಲದೆ ಅದಕ್ಕೆ ಪೂರಕವಾಗಿ ಕೆಲವು ಬಾಟಲಿಗಳನ್ನು ಉಪಯೋಗಿಸಿ ಹನಿನೀರಾವರಿ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದಾದ್ಯಂತ ಹೆಚ್ಚುತ್ತಿರುವ ವಾಹನ ದಟ್ಟಣೆ, ವಾಯುಮಾಲೀನ್ಯ ದಿಂದ ಶುದ್ದವಾದ ಗಾಳಿ ಸಿಗುತ್ತಿಲ್ಲ. ಇದರಿಂದ ಅನೇಕ ಪ್ರಕಾರದ ಅಲರ್ಜಿಗಳು ಹಾಗೂ ಶ್ವಾಸಕೋಶದ ತೊಂದರೆಗಳು ಹೆಚ್ಚಾಗುತ್ತಿದೆ. ಈ ಕಾರಣದಿಂದಲೇ ಈ ಕಾಲೇಜು ಒಂದು ದಿಟ್ಟ ಸಾಹಸಕ್ಕೆ ಕೈ ಹಾಕಿದೆ.

ಡಾ. ಜೆಸ್ವಿನ ಎ ಸಿ, ಒನ್ ಇಂಡಿಯಾ ಜತೆ

ಡಾ. ಜೆಸ್ವಿನ ಎ ಸಿ, ಒನ್ ಇಂಡಿಯಾ ಜತೆ

ಈ ಕುರಿತು ಕಾಲೇಜಿನ ಪ್ರಾಂಶುಪಾಲ ಡಾ. ಜೆಸ್ವಿನ ಎ ಸಿ, ಒನ್ ಇಂಡಿಯಾ ಜತೆ ಮಾತನಾಡಿ, ಹಸಿರು ಪರಿಸರ ನಿರ್ಮಿಸುವುದು ಅಗತ್ಯ ಈ ಹಿನ್ನಲೆಯಲ್ಲಿ ಕಾಲೇಜು ಅರ್ಥಶಾಸ್ತ್ರ ವಿಭಾಗದ ಸಿಸ್ಟರ್ ವೆನೆಸ ಎಸಿ, ಮತ್ತು ಎನ್ಎಸ್ಎಸ್ ವಿಭಾಗ ಹಸಿರು ಕಲ್ಪನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದಾಗಿದೆ. ಕೇವಲ ಸಸ್ಯ ನೆಟ್ಟು ಅದರ ಪಾಡಿಗೆ ಬಿಡಲಿಲ್ಲ ದಿನಾಲೂ ಕಾಲೇಜಿನ ವಿದ್ಯಾರ್ಥಿಗಳು ನೀರು ಹಾಕಿ ಸಸ್ಯಗಳ ಆರೈಕೆ ಮಾಡುತ್ತಿದ್ದಾರೆ. ಹನಿನೀರಾವರಿಯು ಒಂದು ಹೊಸ ಪ್ರಯತ್ನ ಹಾಗೂ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯು ಸಾಥ್ ನೀಡಿದೆ ಎಂದರು.

ಎಂಸಿಸಿ ತಂಡದ ಪ್ರೇರಣೆ

ಎಂಸಿಸಿ ತಂಡದ ಪ್ರೇರಣೆ

ಸಸ್ಯಗಳನ್ನು ನೆಡುವ ನಿರ್ಧಾರ ಸುಲಭವಾಗಿರಲಿಲ್ಲ. ಇದಕ್ಕಾಗಿ ಕಾರ್ಪೊರೇಟರ್ ಗಳು, ಡಿಸಿ ಅವರ ಅನುಮತಿ ಪಡೆದು ಈ ನಿರ್ಧಾರ ಕೈಗೊಂಡಿದ್ದೇವೆ . ಇದಲ್ಲದೆ ಎಂಸಿಸಿ ತಂಡದ ಪ್ರೇರಣೆಯಿಂದಲೇ ಈ ಕಾರ್ಯ ಕೈಗೊಂಡೆವು ಎಂದು ಸಂತಸದ ಮಾತುಗಳನ್ನಾಡಿದರು.

ಸಿಸ್ಟರ್ ವೆನೆಸ್ಸಾ ಮಾತುಗಳು

ಸಿಸ್ಟರ್ ವೆನೆಸ್ಸಾ ಮಾತುಗಳು

ಮಾತನಾಡಿದ ಸಿಸ್ಟರ್ ವೆನೆಸ್ಸಾ, ಈಗಾಗಲೇ ಕಾಲೇಜಿನಲ್ಲಿ ಸೌರಶಕ್ತಿ ಪ್ಯಾನಲ್ ಅಳವಡಿಸಲಾಗಿದೆ . 2017 ಸಂಪೂರ್ಣವಾಗಿ ಇದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುತ್ತೇವೆ . ಪರಿಸರ ಸಂರಕ್ಷಣೆಗೆ ನಮ್ಮ ಕಾಲೇಜು ಮುಂದಾಗಿರುವುದು ಮಂಗಳೂರಿನ ಜನರಿಗೆ ಪ್ರೇರಣೆ ನೀಡಿದಂತಾಗಿದೆ . ಎಲ್ಲಾರು ಪರಿಸರ ಸ್ನೇಹಿಗಳಾಗಬೇಕು ಎಂದರು.

ಮಂಗಳೂರಿನ ಮೊದಲ ಕಾಲೇಜು

ಮಂಗಳೂರಿನ ಮೊದಲ ಕಾಲೇಜು

ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟ ಮಂಗಳೂರಿನ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶಾಸ ಜೆ. ಆರ್. ಲೋಬೊ ಹೇಳಿದ್ದಾರೆಂದು ಪ್ರಾಂಶುಪಾಲರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Motivational work from the young minds of St Agnes College. While passing by the college one can see that the dividers on the adjoining roads have nearly 150 plants in them and some bottles hung up for the purpose of drip irrigation.
Please Wait while comments are loading...