ಉಚಿತ ಫ್ಲೈಟ್ ಟಿಕೆಟ್ ಗೆದ್ದ ಮಂಗಳೂರು ವಿದ್ಯಾರ್ಥಿನಿ

Posted By:
Subscribe to Oneindia Kannada

ಮಂಗಳೂರು : ಕಾರ್ ಸ್ಟ್ರೀಟಿನ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ಚಿಂಚನ ಎಂಬಾಕೆ ಶಾಲೆಯ ವತಿಯಿಂದ ನೀಡಲಾದ 'ಬೆಂಗಳೂರಿಗೆ ಹೋಗುವ ಉಚಿತ ಫ್ಲೈಟ್ ಟಿಕೆಟ್' ಬಹುಮಾನಕ್ಕೆ ಪಾತ್ರಳಾಗಿದ್ದಾಳೆ.

ಶಾಲೆಯಲ್ಲಿ ಓದುತ್ತಿರುವ ಬಡ ಹೆಣ್ಣು ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸುವ ಮಾಡಿದ ವಿದ್ಯಾರ್ಥಿನಿಯೊಬ್ಬರಿಗೆ ಬೆಂಗಳೂರಿಗೆ ತೆರಳುವ ವಿಮಾನವೊಂದರ ಟಿಕೆಟ್ ನೀಡುವುದಾಗಿ ಶಾಲೆಯ ಪ್ರಾಂಶುಪಾಲರು ಘೋಷಿಸಿದ್ದರು.

SSLC topper gets free flight ticket to Bengaluru from her school

ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಈ ಶಾಲೆಯ ಫಲಿತಾಂಶ ಗಣನೀಯ ಪ್ರಮಾಣದಲ್ಲಿ ಕುಗ್ಗಿದ ಹಿನ್ನೆಲೆಯಲ್ಲಿ ಆಫರ್ ನೀಡಲಾಗಿತ್ತು.

ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 93ರಷ್ಟು ಫಲಿತಾಂಶ ಶಾಲೆಗೆ ಸಿಕ್ಕಿದೆ. ಆದರೆ, ಅತಿ ಹೆಚ್ಚು ಅಂಕ ಗಳಿಸಿದ ಚಿಂಚನ, ಶಾಲೆಯ ಬಹುಮಾನಕ್ಕೆ ಪಾತ್ರಳಾಗಿದ್ದಾಳೆ.

ಆಕೆಯೊಂದಿಗೆ, ಶಾಲೆಯ ಒಬ್ಬ ಶಿಕ್ಷಕಿಯನ್ನು ಬೆಂಗಳೂರಿಗೆ ವಿಮಾನದಲ್ಲಿ ಕಳುಹಿಸಲಾಗುತ್ತದೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A SSLC topper of Government Girls high school in Mangaluru wins free flight ticket to Bengaluru from her school authorities. The offer was given to the students last year to encourage them. Chinchana who scored more than 90 percent in recent SSLC result wins the race.
Please Wait while comments are loading...