ಕದ್ರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ ಆ 24ಕ್ಕೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 20: ಶ್ರೀಕೃಷ್ಣ ಜನ್ಮಾಷ್ಟಮಿ ಬಂದೇ ಬಿಟ್ಟಿತು. ಎಲ್ಲೆಲ್ಲೂ ಶ್ರೀಕೃಷ್ಣ ವೇಷ ಸ್ಪರ್ಧೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಎಲ್ಲಾ ಸ್ಪರ್ಧೆಗಳಿಗೂ ಮೂಲ ಎಂದೇ ಹೆಗ್ಗಳಿಕೆ ಪಡೆದ ಕಲ್ಕೂರ ಪ್ರತಿಷ್ಠಾನದ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ 'ಶ್ರೀ ಕೃಷ್ಣ ವೇಷ ಸ್ಪರ್ಧೆ' ಕದ್ರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ಆ. 24ರಂದು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ನಿರಂತರ 12 ಗಂಟೆಗಳ ಕಾಲ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.

Krishna

ಕಂದ ಕೃಷ್ಣ: ಈ ವಿಭಾಗದಲ್ಲಿ 1 ವರ್ಷದ ಕೆಳಗಿನ ಪುಟಾಣಿಗಳು ಭಾಗವಹಿಸಬಹುದು. ಕಂದಮ್ಮಗಳ ಜತೆ ತಾಯಂದಿರು ಕೂಡಾ ವೇದಿಕೆಗೆ ಬರಬಹುದು. ಮುದ್ದು ಕೃಷ್ಣ : ಈ ವಿಭಾಗದಲ್ಲಿ 1 ವರ್ಷಕ್ಕಿಂತ ಮೇಲ್ಪಟ್ಟ 2 ವರ್ಷಕ್ಕಿಂತ ಕೆಳಗಿನ ಕಂದಮ್ಮಗಳು ಪಾಲ್ಗೊಳ್ಳಬಹುದು. ಇವರೊಂದಿಗೆ ತಾಯಂದಿರು ವೇದಿಕೆಗೆ ಬರಬಹುದು. ತುಂಟ ಕೃಷ್ಣ: ಈ ವಿಭಾಗದಲ್ಲಿ 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 3 ವರ್ಷಕ್ಕಿಂತ ಕೆಳಗಿನ ಪುಟಾಣಿಗಳು ಭಾಗವಹಿಸಬಹುದು.[ಭಾನುವಾರ ಮಂಗಳೂರಿಗೆ ಅಮಿತ್ ಶಾ, ಕಾರ್ಯಕ್ರಮಗಳು]

ಕಿಶೋರ ಕೃಷ್ಣ: ಯುಕೆಜಿ ಮತ್ತು ಒಂದನೇ ತರಗತಿ ಪುಟಾಣಿಗಳು ಭಾಗವಹಿಸಬಹುದು. ಶ್ರೀಕೃಷ್ಣ: 2, 3, 4ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು. ಗೀತಾಕೃಷ್ಣ: (ವೇಷಭೂಷನದೊಂದಿಗೆ ಗೀತೋಪದೇಶ ಚಿತ್ರಣ ಗೀತೆ ಯಾವುದಾದರೂ ಶ್ಲೋಕದ ಪಠಣದೊಂದಿಗೆ) 7ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು.

Janmashtami

ಯಕ್ಷ ಕೃಷ್ಣ: ಜಿಲ್ಲೆಯ ವಿಶೇಷ ಸಾಂಪ್ರದಾಯಿಕ ಶೈಲಿಯಾದ ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಯಕ್ಷ ಕೃಷ್ಣ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಬಹುದು. ಈ ವಿಭಾಗದಲ್ಲಿ ಭಾಗವಹಿಸುವ ಮಕ್ಕಳು ಸಾಂಪ್ರದಾಯಿಕ ಯಕ್ಷಗಾನ ವೇಷ-ಭೂಷಣ ಹಾಕಬಹುದು.

ರಾಧಾಕೃಷ್ಣ: ವಿಭಾಗದಲ್ಲಿ ಏಳನೇ ತರಗತಿಯ ವರೆಗಿನ ಮಕ್ಕಳು ಭಾಗವಹಿಸಬಹುದು. ಯೊಶೋದ ಕೃಷ್ಣ: ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೆ ಮಹಿಳೆ ಯಶೋದೆಯಾಗಿ ಯಾವುದೇ ಮಗು ಕೃಷ್ಣನಾಗಿ ಅಭಿನಯಪೂರ್ವಕವಾಗಿ ಭಾಗವಹಿಸಬಹುದು. ದೇವಕಿಕೃಷ್ಣ: ಈ ಹಿಂದೆ ಕದ್ರಿ ಶ್ರೀಕ್ಷೇತ್ರದಲ್ಲಿ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣ ವೇಷ ಸ್ಪರ್ಧಾಳುಗಳಾಗಿ ಭಾಗವಹಿಸಿದ ತಾಯಂದಿರು ದೇವಕಿಯಾಗಿ, ಮಗು ಕೃಷ್ಣನಾಗಿ ಭಾಗವಹಿಸಬಹುದು.[ಚಿತ್ರಗಳು : ಮಂಗಳೂರಿನಲ್ಲಿ ಎಬಿವಿಪಿಯಿಂದ ಬೃಹತ್ ಪ್ರತಿಭಟನೆ]

ವಸುದೇವ ಕೃಷ್ಣ: ಪುರುಷ ವಸುದೇವನಾಗಿ ಮಗುವನ್ನು ಪ್ಲಾಸ್ಟಿಕ್ ರಹಿತವಾದ ಯಾವುದೇ ಬೆತ್ತ ಅಥವಾ ಬೀಳು ಇನ್ನಿತರ ಬುಟ್ಟಿಗಳಲ್ಲಿ ತಲೆಯಲ್ಲಿ ಹೊತ್ತು ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಬಹುದು.

ನಂದಗೋಕುಲ: ಕೃಷ್ಣನ ಯಾವುದೇ ಸನ್ನಿವೇಶವನ್ನು ಗುಂಪಿನಲ್ಲಿ ಸ್ತಬ್ಧ ಚಿತ್ರ ದೃಶ್ಯ ಸ್ವರೂಪದೊಂದಿಗೆ ಪ್ರದರ್ಶಿಸಲು ಅವಕಾಶ, ವಯೋಮಿತಿ ನಿರ್ಬಂಧವಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Krishna fancy dress national level competition for childrens organised by Kalkura pratishtana on August 24th at Kadri manjunatha temple.
Please Wait while comments are loading...