ಕ್ರಿಸ್ಮಸ್, ಹೊಸ ವರ್ಷಕ್ಕೆ ಮುಂಬೈ- ಮಂಗಳೂರು ವಿಶೇಷ ರೈಲು

Posted By: Ramesh
Subscribe to Oneindia Kannada

ಮಂಗಳೂರು, ಡಿಸೆಂಬರ್. 21 : ಪಶ್ಚಿಮ ರೈಲ್ವೆ (ಡಬ್ಲುಆರ್) ಇಲಾಖೆಯು ಕ್ರಿಸ್ ಮಸ್ ಮತ್ತು ಹೊಸ ವರ್ಷ ರಜಾ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಬೈ ಸೆಂಟ್ರಲ್ ನಿಂದ ಮಂಗಳೂರು ಜಂಕ್ಚನ್ ಗೆ ವಿಶೇಷ ರೈಲು ಓಡಿಸಲು ಮುಂದಾಗಿದೆ.

ಈ ರೈಲು ವಸಾಯಿ ಮಾರ್ಗವಾಗಿ ಮುಂಬೈನಿಂದ ಮಂಗಳೂರಿಗೆ ಚಲಿಸಲಿದೆ. ಮುಂಬೈನಿಂದ ಇದೇ ಡಿಸೆಂಬರ್ 28ರಿಂದ 4 ಜನವರಿ 2017ರ ವರೆಗೆ ಸಂಚರಿಸಲಿದ್ದು. ಮಂಗಳೂರು-ಮುಂಬೈ ಡಿಸೆಂಬರ್ 29ರಿಂದ 5ಜನವರಿ ವರೆಗೆ ಸಂಚರಿಸಲಿದೆ.

ಪ್ರತಿ ಬುಧವಾರ ಮುಂಬೈನಿಂದ ಸೆಂಟ್ರಲ್ ನಿಂದ ರಾತ್ರಿ 11.15PMಗೆ ಹೊರಟು ಮಾರನೇ ದಿನ(ಗುರುವಾರ) 7.30PMಗೆ ಮಂಗಳೂರು ಜಂಕ್ಷನ್ ತಲುಪಲಿದೆ.

ಇನ್ನು ಈ ರೈಲು ಪ್ರತಿ ಗುರುವಾರದಂದು ಮಂಗಳೂರು ಜಂಕ್ಷನ್ ನಿಂದ 10.30PMಗೆ ಹೊರಟು ಮಾರನೇ ದಿನ(ಶುಕ್ರವಾರ) 5.50PMಗೆ ಮುಂಬೈ ಸೆಂಟ್ರಲ್ ತಲುಪಲಿದೆ.

Special train between Mumbai Central-Mangalore to cater rush

ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಡಿಸೆಂಬರ್ 22ರಿಂದಲೇ ಕೌಂಟರ್ಸ್ ಗಳ ಮೂಲಕ ಅಥವಾ ಭಾರತೀಯ ರೈಲ್ವೆ ಇಲಾಖೆ ವೆಬ್ ಸೈಟ್ ನಿಂದ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಇನ್ನು ಬಾಂದ್ರಾ ಟರ್ಮಿನಸ್ ದಿಂದ ಗೋರಖ್ ಪುರಕ್ಕೆ ವಾರಕ್ಕೊಮ್ಮೆ ಓಡಾಡುತ್ತಿದ್ದ ಎಕ್ಸ್ ಪ್ರೆಸ್ ರೈಲು ಇವತ್ತಿನಿಂದ(ಡಿ.21) ಪ್ರತಿದಿನ ಸಂಚಾರ ಮಾಡಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಗೋರಖ್ ಪುರದಿಂದ ಪ್ರತಿದಿನ ಬೆಳಗ್ಗೆ 5. 30AMಗೆ ಹೊರಟು 8.05PMಗೆ ಬಾಂದ್ರಾ ಟರ್ಮಿನಸ್ ತಲುಪಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
With a view to meet travel demand of passengers during Christmas holidays, Western Railway (WR) will run four trips of special train between Mumbai Central and Mangalore Junction via Vasai Road.
Please Wait while comments are loading...