ಪ್ರಯಾಣಿಕರೆ ಗಮನಿಸಿ : ಮಂಗಳೂರು-ಮುಂಬೈ ವಿಶೇಷ ಎಸಿ ರೈಲು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 27: ಮಂಗಳೂರು-ಮುಂಬಯಿ ನಡುವಿನ ಪ್ರಯಾಣಿಕರ ಒತ್ತಡವನ್ನು ನಿಭಾಯಿಸಲು ಕೊಂಕಣ ರೈಲು ಮಾರ್ಗದಲ್ಲಿ ಮುಂಬಯಿಯ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ)- ಮಂಗಳೂರು ಜಂಕ್ಷನ್- ಎಲ್‌ಟಿಟಿ ನಡುವೆ ತಾತ್ಕಾಲಿಕ ಎಸಿ ರಿಸರ್ವ್ ವಿಶೇಷ ರೈಲನ್ನು ಮೇ 31 ಹಾಗೂ ಜೂ.7ರಂದು ಓಡಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ. [ತತ್ಕಾಲ್ ಟಿಕೆಟ್ ಪಡೆದು, ಹೆಚ್ಚು ಹಣಕ್ಕೆ ಮಾರುತ್ತಿದ್ದವರ ಬಂಧನ]

ರೈಲು ನಂ.02133 ವಿಶೇಷ ರೈಲು ಮೇ 31- ಜೂ.7ರಂದು ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಮಧ್ಯರಾತ್ರಿ 12:45ಕ್ಕೆ ಹೊರಡಲಿದ್ದು, ಅದೇ ದಿನ ಸಂಜೆ 6:00 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ. [ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಲು 139ಕ್ಕೆ ಡಯಲ್ ಮಾಡಿ]

 Special AC train to Mumbai to run for three more weeks

ಮರು ಪ್ರಯಾಣದಲ್ಲಿ ರೈಲು ನಂ.02134 ಮಂಗಳೂರು ಜಂಕ್ಷನ್‌ನಿಂದ ಅದೇ ದಿನ ಗಳಂದು ರಾತ್ರಿ 8:30ಕ್ಕೆ ನಿರ್ಗಮಿಸಲಿದ್ದು, ಮರುದಿನ ಅಪರಾಹ್ನ 1:15ಕ್ಕೆ ಮುಂಬಯಿ ತಲುಪಲಿದೆ. [ರೈಲ್ವೆ ಬಜೆಟ್‌ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?]

ಈ ರೈಲು 17 ಕೋಚ್‌ಗಳನ್ನು ಹೊಂದಿದ್ದು, ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಲುಣ್, ರತ್ನಗಿರಿ, ಕುಡಲ್, ಸಾವಂತವಾಡಿ ರೋಡ್, ತೀವಿಂ, ಕರ್ಮಿಲಿ, ಮಡಂಗಾವ್, ಕಾರವಾರ, ಕುಮಟಾ, ಭಟ್ಕಳ, ಮೂಕಾಂಬಿಕಾ ರೋಡ್, ಬೈಂದೂರು, ಕುಂದಾಪುರ, ಉಡುಪಿ ಹಾಗೂ ಮುಲ್ಕಿ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The special air-conditioned weekly train – introduced between Mangaluru and Mumbai Lokmanya Tilak Terminus to clear the rush of passengers – has been extended for three weeks, starting May 24.
Please Wait while comments are loading...