ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ ಮಂಗಳಮುಖಿಯರ ಅಸಲಿಯತ್ತು ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತ

|
Google Oneindia Kannada News

ಮಂಗಳೂರು, ಅಕ್ಟೋಬರ್. 05 : ಮಂಗಳೂರಿನಲ್ಲಿ ನಕಲಿ ಮಂಗಳಮುಖಿಯರ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಗಳ ಮುಖಿಯರಂತೆ ವೇಷಧರಿಸಿ ಕಂಠ ಪೂರ್ತಿ ಕುಡಿದು ಹಣಕ್ಕಾಗಿ ಜನರನ್ನು ಪೀಡಿಸುತ್ತಿರುವ ದೃಶ್ಯಗಳು ಎಲ್ಲೆಂದರಲ್ಲಿ ಕಂಡುಬರುತ್ತಿವೆ.

ಇವರ ಕಾಟದಿಂದ ಕಂಗೆಟ್ಟು ಬೇಸತ್ತ ಮಂಗಳೂರಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಕೊನೆಗೆ ನಕಲಿ ಮಂಗಳ ಮುಖಿಯರ ಜನ್ಮಜಾಲಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ ವೈರಲ್ ಆಗಿದ್ದು, ನಕಲಿ ಮಂಗಳಮುಖಿಯರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಕೊಕ್ಕರೆ ಬೆಳ್ಳೂರಲ್ಲಿ ನಕಲಿ ವೈದ್ಯೆ ಪತ್ತೆ:ದಾಳಿ ವಿಷಯ ತಿಳಿದು ಪರಾರಿಕೊಕ್ಕರೆ ಬೆಳ್ಳೂರಲ್ಲಿ ನಕಲಿ ವೈದ್ಯೆ ಪತ್ತೆ:ದಾಳಿ ವಿಷಯ ತಿಳಿದು ಪರಾರಿ

ಸ್ವಚ್ಛ ಮಂಗಳೂರು ಅಭಿಯಾನಕ್ಕೆ ತಮ್ಮದೇ ವಿಶಿಷ್ಟ ರೀತಿಯ ಕ್ರಮಗಳ ಮೂಲಕ ಕೊಡುಗೆ ನೀಡಿ ಗುರುತಿಸಿಕೊಂಡಿರುವ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಸೌರಜ್ ಈಗ ನಕಲಿ ಮಂಗಳ ಮುಖಿಯರ ಅಸಲಿಯತ್ತು ಬಯಲು ಮಾಡಿದ್ದಾರೆ.
ನಗರದ ಕದ್ರಿ ಹಾಗೂ ಟಾಗೋರ್ ಉದ್ಯಾನವನಕ್ಕೆ ಬರುವ ಪ್ರವಾಸಿಗರನ್ನು ಕಾಡುವ ಈ ನಕಲಿ ಮಂಗಳಮುಖಿಯರನ್ನು ಹಿಡಿದು ಅವರ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ.

 ಮಂಗಳಮುಖಿಯರನ್ನು ಬೆನ್ನತ್ತಿದ್ದ ಸೌರಜ್

ಮಂಗಳಮುಖಿಯರನ್ನು ಬೆನ್ನತ್ತಿದ್ದ ಸೌರಜ್

ಮಂಗಳಮುಖಿಯರು ಬಂದಾಕ್ಷಣ ಅವರಿಗೆ ಸಾರ್ವಜನಿಕರು ಹಣ ಕೊಡುವುದು ಸಾಮಾನ್ಯ. ಇದರ ಲಾಭವನ್ನು ಪಡೆದ ಕೆಲವು ಹೊರ ರಾಜ್ಯದ ಯುವಕರು ಮಂಗಳಮುಖಿಯರಂತೆ ವೇಷ ಧರಿಸಿ ಸಾರ್ವಜನಿಕ ರಿಗೆ‌ ಕಾಟ ಕೊಡುತ್ತಿದ್ದರು. ಕದ್ರಿ ಪಾರ್ಕ್ ನಲ್ಲಿ ಮಂಗಳಮುಖಿಯರನ್ನು ಬೆನ್ನತ್ತಿದ್ದ ಸೌರಜ್ ಈ ನಕಲಿ ಮುಂಗಳ ಮುಖಿಯರ ಅಸಲಿಯತ್ತನ್ನು ಬಯಲು ಮಾಡಿದ್ದಾರೆ.

ಯುಎಸ್‌ ಕಾನ್ಸುಲೇಟ್‌ ಕಚೇರಿಯಲ್ಲಿ ಸಲಿಂಗ,ಅಂತರ್ಲಿಂಗ ಕಾಮಿಗಳ ಮಾಸಾಚರಣೆಯುಎಸ್‌ ಕಾನ್ಸುಲೇಟ್‌ ಕಚೇರಿಯಲ್ಲಿ ಸಲಿಂಗ,ಅಂತರ್ಲಿಂಗ ಕಾಮಿಗಳ ಮಾಸಾಚರಣೆ

 ತಲೆಗೆ ಬಣ್ಣ ಬಣ್ಣದ ವಿಗ್

ತಲೆಗೆ ಬಣ್ಣ ಬಣ್ಣದ ವಿಗ್

ತಲೆಗೆ ಟೋಪನ ಇಟ್ಟು ಮಂಗಳಮುಖಿಯರಂತೆ ವೇಷ ಧರಿಸಿ ಸಾರ್ವಜನಿಕರನ್ನು ಲೂಟಿ ಮಾಡುವುದನ್ನು ಸೌರಜ್ ಬಯಲು ಮಾಡಿದ್ದಾರೆ. ತಲೆಗೆ ಬಣ್ಣ ಬಣ್ಣದ ವಿಗ್ ಹಾಕಿ ಯುವತಿಯರಂತೆ ಡ್ರೆಸ್ ಮಾಡಿಕೊಂಡು ಬರುವ ಈ ನಕಲಿ ಮಂಗಳ ಮುಖಿಯರ ನಿಜಾಂಶ ಈಗ ಬಯಲಾಗಿದೆ.

ಸ್ಯಾಂಡಲ್ ವುಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಪಡೆದ ತೃತೀಯ ಲಿಂಗಿಸ್ಯಾಂಡಲ್ ವುಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಪಡೆದ ತೃತೀಯ ಲಿಂಗಿ

 ಕ್ಯಾಮೆರಾದಲ್ಲಿ ಸೆರೆ

ಕ್ಯಾಮೆರಾದಲ್ಲಿ ಸೆರೆ

ಕದ್ರಿ ಪಾರ್ಕ್ಗೆ ದಾಳಿ ಇಟ್ಟ ಸೌರಜ್, ಕುಡಿದು ತೂರಾಡುತ್ತಿದ್ದ ಜನರನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಇಬ್ಬರು ನಕಲಿ ಮಂಗಳ ಮುಖಿಯರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅಲ್ಲದೇ ಈ ನಕಲಿ ಮಂಗಳ ಮುಖಿಯರ ಅಸಲಿಯತ್ತನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ.

 ಇಬ್ಬರೂ ಪುರುಷರೇ

ಇಬ್ಬರೂ ಪುರುಷರೇ

ಸೌರಜ್ ಪತ್ತೆ ಹಚ್ಚಿದ ಈ ನಕಲಿ ಮಂಗಳ ಮುಖಿಯರಲ್ಲಿ ಇಬ್ಬರು ಪುರುಷರಾಗಿದ್ದು, ಈ ಪೈಕಿ ಒಬ್ಬಾತನ ಹೆಸರು ಗೋಪಿ ಎಂದಾಗಿದೆ. ಮತ್ತೊಬ್ಬ ತಮ್ಮ ಸತ್ಯಾಂಶ ಬಯಲಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ನಕಲಿ ಮಂಗಳ ಮುಖಿಯರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

English summary
Social activist Sowraj Exposed fake Transgender in Mangaluru, Sworaj caught men dressed like Transgender and looting money in Kadri park. Related to this video viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X