ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವನ್ನೇ ಹೂವಿನ ರೀತಿ ಕುತ್ತಿಗೆಗೆ ಹಾರ ಹಾಕಿಕೊಳ್ಳುವ ಪೋರ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಹಾವು ಅಂದ ಕೂಡಲೇ ಹೌಹಾರುವವರೇ ಜಾಸ್ತಿ. ಹಾವು ಕಂಡರಂತೂ ಹೆದರಿ ಓಡಿ ಹೋಗುತ್ತಾರೆ. ಆದರೆ ಇಲ್ಲೊಬ್ಬ ಪುಟ್ಟ ಪೋರ ಹಾವಿನ ಜೊತೆಗೇ ಆಟವಾಡುತ್ತಾನೆ. ಹಾವನ್ನೇ ಹೂವಿನ ರೀತಿ ಕುತ್ತಿಗೆಗೆ ಹಾರ ಹಾಕಿಕೊಳ್ತಾನೆ. ಹಾವಿನ ಜೊತೆ ಸಲುಗೆಯಿಂದ ಇರುವ ಪುಟ್ಟ ಬಾಲಕನ ಬಗೆಗಿನ ವರದಿ ಇದು.

ಅರೆರೇ, ಇನ್ನೂ ಅಂಬೆಗಾಲಿಡುತ್ತಿರುವ ಈ ಪುಟ್ಟ ಬಾಲಕ ಹಾವನ್ನು ಹಿಡಿದು ಗಿರಗಿರನೇ ತಿರುಗಿಸುತ್ತಾನೆ. ಕೈಯಲ್ಲಿ ಆಟಿಕೆ ಇದ್ದರೆ ಮಕ್ಕಳು ಸಂತೋಷದಲ್ಲಿ ಆಟವಾಡುವಂತೆ ಹಾವಿನ ಬಾಲವನ್ನು ಹಿಡಿದುಕೊಂಡು ಕೊಂಚವೂ ಭಯವಿಲ್ಲದೆ ವಿನೋದ ತೋರಿಸುತ್ತಾನೆ. ಹೌದು, ಈ ಬಾಲಕನ ಕೈ ಚಳಕ ನೋಡಿದರೆ ಸಾಮಾನ್ಯರು ಹೌಹಾರಬೇಕು ಅಷ್ಟೇ. ಆದರೆ ಈ ಬಾಲಕನ ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಇದು ಅಚ್ಚರಿಯೇ ಅಲ್ಲ.

ಸ್ನೇಕ್ ಆರೀಫ್ ಮಾತು ಕೇಳಿ ಮೊಟ್ಟೆ ಹೊರತೆಗೆಯಿತೇ ಹಾವು?ಸ್ನೇಕ್ ಆರೀಫ್ ಮಾತು ಕೇಳಿ ಮೊಟ್ಟೆ ಹೊರತೆಗೆಯಿತೇ ಹಾವು?

ಮಂಗಳೂರಿನ ಹೊರವಲಯದ ಬೈಕಂಪಾಡಿಯಲ್ಲಿರುವ ಈತನ ಹೆಸರು ಮಹಮ್ಮದ್ ಶಾಕೀರ್. ಇನ್ನೂ ಮೂರು ವರ್ಷ ತುಂಬಿಲ್ಲ. ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬಾಲ ಚೇಷ್ಟೆಯನ್ನಾಡುವ ವಯಸ್ಸಲ್ಲಿ ಹಾವನ್ನು ಹಿಡಿದು ಕೊರಳಿಗೆ ಹಾಕಿಕೊಳ್ತಾನೆ. ಮಂಗಳೂರಿನ ಬೈಕಂಪಾಡಿಯಲ್ಲಿರುವ ಗಣೇಶ್ ಮೆಂಡನ್ ಎಂಬುವರು ಹಾವು ಹಿಡಿಯುವ ಹವ್ಯಾಸ ಹೊಂದಿದ್ದಾರೆ.

ಗಣೇಶ್ ಮೆಂಡನ್ ಬಳಿ ಬಿಟ್ಟು ಹೋಗುತ್ತಾರೆ

ಗಣೇಶ್ ಮೆಂಡನ್ ಬಳಿ ಬಿಟ್ಟು ಹೋಗುತ್ತಾರೆ

ಮನೆ ಬಳಿಯಲ್ಲೇ ವಾಸವಿದ್ದ ಉತ್ತರ ಕರ್ನಾಟಕ ಮೂಲದ ಮುಸ್ಲಿಂ ಬಡ ಕುಟುಂಬವೊಂದರ ಬಾಲಕ ಮಹಮ್ಮದ್ ಶಾಕೀರ್ ಕಳೆದ ಎರಡು ವರ್ಷಗಳಲ್ಲಿ ಗಣೇಶ್ ಮೆಂಡನ್ ಮನೆಯ ಸದಸ್ಯನಾಗಿದ್ದಾನೆ. ಮಗುವಿನ ತಾಯಿ ದುಡಿಮೆಗೆ ತೆರಳುವುದರಿಂದ ಹುಡುಗನನ್ನು ಮೆಂಡನ್ ಬಳಿ ಬಿಟ್ಟು ಹೋಗುತ್ತಾರೆ.

ಹಾವೆಂದರೆ ಶಾಕೀರ್ ಪಾಲಿಗೆ ಆಟದ ವಸ್ತು

ಹಾವೆಂದರೆ ಶಾಕೀರ್ ಪಾಲಿಗೆ ಆಟದ ವಸ್ತು

ಗಣೇಶ್ ಮೆಂಡನ್ ಅಕ್ಕ ಪಕ್ಕದಲ್ಲಿ ಹಾವು ಹಿಡಿಯುವುದಕ್ಕೆ ತೆರಳುವಾಗ ಇತರೆ ಮಕ್ಕಳೊಂದಿಗೆ ಹುಡುಗನನ್ನೂ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲಕ ಶಾಕೀರ್ ಪಾಲಿಗೆ ಹಾವು ಕೂಡ ಆಟದ ವಸ್ತುವಾಗಿಬಿಟ್ಟಿದೆ. ಸಮುದ್ರ ತೀರದಲ್ಲಿ ವಾಸ ಇರುವುದರಿಂದ ಹಾವುಗಳ ಸಂಚಾರವೂ ಸಹಜವಾಗಿದ್ದು, ಬಾಲಕ ಹಾವಿನ ಭಯವೇ ಇಲ್ಲದಂತೆ ವರ್ತಿಸುತ್ತಾನೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮನೆ ಮಗನಂತೆ ಆಗಿದ್ದಾನೆ

ಮನೆ ಮಗನಂತೆ ಆಗಿದ್ದಾನೆ

ಇನ್ನು ತೀರ ಬಡ ಕುಟುಂಬದ ಹುಡುಗನಾಗಿರುವ ಮಹಮ್ಮದ್ ಶಾಕೀರ್, ಸದ್ಯಕ್ಕೆ ಗಣೇಶ್ ಮೆಂಡನ್ ಮನೆಯಲ್ಲೇ ಬೆಳೆಯುತ್ತಿದ್ದಾನೆ. ಮತ- ಧರ್ಮ ಭೇದದ ಹಂಗಿಲ್ಲದೆ ಬದುಕುತ್ತಿರುವ ಶಾಕೀರ್ ನನ್ನು ತಾವೇ ಓದಿಸುತ್ತೇವೆ ಅನ್ನುವ ಮಾತು ಗಣೇಶ್ ಮೆಂಡನ್ ಕುಟುಂಬದ್ದು. ತಮ್ಮ ಮಗನಂತೆ ಮುದ್ದಿನಿಂದ ಸಾಕುತ್ತಿರುವ ಈ ಕುಟುಂಬಕ್ಕೆ ಶಾಕೀರ್ ಕೂಡ ಮತ್ತೊಬ್ಬ ಮಗನಿದ್ದಂತೆ.

ವಿಷದ ಹಾವನ್ನು ಕೊಡುವುದಿಲ್ಲ

ವಿಷದ ಹಾವನ್ನು ಕೊಡುವುದಿಲ್ಲ

ಶಾಕೀರ್ ಸಣ್ಣ ಮಗು ಆಗಿರುವುದರಿಂದ ವಿಷದ ಹಾವನ್ನು ಕೈಗೆ ಕೊಡುವುದಿಲ್ಲ. ವಿಷ ಇಲ್ಲದ ಹಾವುಗಳ ಜೊತೆ ಮಾತ್ರ ಆಟಕ್ಕೆ ಬಿಡುತ್ತಾರೆ. ಹಾವುಗಳಲ್ಲಿ ಕೇವಲ ಏಳರಿಂದ ಎಂಟು ಹಾವುಗಳಷ್ಟೇ ವಿಷದ ಹಾವಾಗಿದ್ದು, ಉಳಿದವೆಲ್ಲ ವಿಷರಹಿತ ಹಾವುಗಳು. ಹೀಗಾಗಿ ಹಾವಿನ ಜೊತೆಗೆ ಆಟವಾಡಿದರೆ ತಪ್ಪಲ್ಲ ಅನ್ನೋದು ಕುಟುಂಬದ ನುಡಿ. ಒಟ್ಟಿನಲ್ಲಿ ಸಣ್ಣ ಪ್ರಾಯದಲ್ಲೇ ಹಾವಿನ ಸ್ನೇಹ ಗಳಿಸಿರುವ ಶಾಕೀರ್ ಅಚ್ಚರಿಗೆ ಕಾರಣನಾಗಿದ್ದಾನೆ.

English summary
Shakir- A 3 year old boy from Bykampadi, Mangaluru. Snake is like toy for this boy. He plays with snakes. Here is the interesting story of Muslim boy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X