ಲಾರಿ ಕ್ಯಾಬಿನ್ ನಲ್ಲಿ ಅಡಗಿಕೊಂಡಿತ್ತು ವಿಷ ಸರ್ಪ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 18: ಚಲಿಸುತ್ತಿದ್ದ ಅನಿಲ ಸಾಗಾಟ ಟ್ಯಾಂಕರ್ ನ ಕ್ಯಾಬಿನ್ ನಲ್ಲಿ ಫ್ರೀ ಟ್ರಿಪ್ ಹೊರಟಿದ್ದ ಅತಿಥಿ ಯೊಬ್ಬರನ್ನು ಕಂಡಾಗ ಆತಂಕದಿಂದ ಚಾಲಕ ಮಾಡಿದ್ದೇನು ಗೊತ್ತಾ ಈ ಸ್ಟೋರಿ ಓದಿ .

ಮಂಗಳೂರಿನ ಸುರತ್ಕಲ್ ಕಾನ ಎಂಬಲ್ಲಿ ಅನಿಲ ತುಂಬಿಸಿದ ಬುಲೆಟ್ ಟ್ಯಾಂಕರ್ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಾಗುತ್ತಿತ್ತು. ದಾರಿ ಮಧ್ಯೆ ಟ್ಯಾಂಕರ್ ನ ಚಾಲಕನಿಗೆ ಕಾಲಿನ ಬಳಿ ಏನೋ ಬಿಗಿದು ಕೂಡಿರುವಂತೆ ಭಾಸವಾಗಿದೆ. ಈ ಸಂದರ್ಭದಲ್ಲಿ ಕಾಲಿಗೆ ನಾಗರ ಹಾವು ಸುತ್ತಿ ಕೊಂಡಿರುವುದುವುದನ್ನು ಕಂಡ ಚಾಲಕ ಹೌಹಾರಿದ್ದಾನೆ . ಆತಂಕದಿಂದ ಟ್ಯಾಂಕರ್ ನ ಸ್ಟೇರಿಂಗ್ ಕೈಬಿಟ್ಟಿದ್ದಾನೆ .

Snake found inside the cabin of Gas Tanker truck at Uppinangady

ಕೆಲವು ಕ್ಷಣಗಳ ಬಳಿಕ ಸುಧಾರಿಸಿಕೊಂಡ ಚಾಲಕ ಅನಿಲ ತುಂಬಿದ ಟ್ಯಾಂಕರ್ ನ್ನು ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಬಳಿ ನಿಲ್ಲಿಸಿ ಒಂದೇ ಸಮನೆ ಟ್ಯಾಂಕರ್ ನಿಂದ ಕೆಳಗೆ ಬಿದ್ದಿದ್ದಾನೆ .

Snake found inside the cabin of Gas Tanker truck at Uppinangady

ಈ ಹಿನ್ನೆಲೆಯಲ್ಲಿ ಕೆಲ ಹೊತ್ತು ದಾರಿ ಮಧ್ಯೆ ಟ್ಯಾಂಕರ್ ನಿಂತ ಕಾರಣ ಟ್ರಾಫಿಕ್ ಜಾಮ್ ಉಂಟಾಗಿದೆ. ಕ್ಯಾಬಿನ್ ನಿಂದ ಸರ್ರನೆ ಸಾಗಿದ ನಾಗರಾಜ ಟ್ಯಾಂಕರ್ ನ ಇಂಜಿನ್ ಪ್ರವೇಶಿಸಿದ್ದಾನೆ ಈ ಸಂದರ್ಭದಲ್ಲಿ ಉರಗ ತಜ್ಞರಿಗೆ ಬುಲಾವ್ ಹೋಗಿದೆ .

Snake found inside the cabin of Gas Tanker truck at Uppinangady

ಸುಮಾರು ಒಂದು ಗಂಟೆಗಳ ಕಾಲ ಅವಿರತ ಶ್ರಮ ಹಾಗೂ ಸಾಹಸದಿಂದ ನಾಗರಹಾವನ್ನು ಹಿಡಿಯುವಲ್ಲಿ ಉರಗತಜ್ಞರು ಯಶಸ್ವಿಯಾಗಿದ್ದಾರೆ. ಹಿಡಿದ ನಾಗರಹಾವನ್ನು ದೂರದ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a shocking incident a Snake was found inside the cabin of a Gas tanker truck at Uppinangady here on Aug 18.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X