ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಶಾಸಕರು ರಾಜೀನಾಮೆ ನೀಡಲಿ:ಡಿವಿಎಸ್

|
Google Oneindia Kannada News

ಮಂಗಳೂರು, ಜನವರಿ 19: ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟು, ಬಿಡಿ, ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಶಾಸಕರು ರಾಜೀನಾಮೆ ನೀಡಲಿ, ಸುಮ್ಮನೆ ದೊಂಬರಾಟ ಮಾಡಿ ರಾಜಕೀಯ ಹಿತಾಸಕ್ತಿ ಬಲಿಕೊಡಬೇಡಿ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ತಿಳಿಸಿದ್ದಾರೆ.

ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ ಹಿಂಬಾಲಕರನ್ನು ಬಿಟ್ಟು ಸರ್ಕಾರವ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ.

ಯಡಿಯೂರಪ್ಪ ನುಡಿದಂತೆ ನಡೆಯಲಿ: ಸಿದ್ದರಾಮಯ್ಯ ಸಲಹೆಯಡಿಯೂರಪ್ಪ ನುಡಿದಂತೆ ನಡೆಯಲಿ: ಸಿದ್ದರಾಮಯ್ಯ ಸಲಹೆ

ಒಂದೆಡೆಯಿಂದ ಸಮಾಧಾನ ಮಾಡುವ ನಾಟಕ ಮತ್ತೊಂದೆಡೆ ಒಳಗಿಂದೊಳಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ಗೆ ಇನ್ನೂ ಕಾಡುತ್ತಿದೆ 'ಆಪರೇಷನ್' ಭಯ: ಇಂದು ಶಾಸಕರೊಂದಿಗೆ ಮತ್ತೆ ಸಭೆಕಾಂಗ್ರೆಸ್‌ಗೆ ಇನ್ನೂ ಕಾಡುತ್ತಿದೆ 'ಆಪರೇಷನ್' ಭಯ: ಇಂದು ಶಾಸಕರೊಂದಿಗೆ ಮತ್ತೆ ಸಭೆ

ಇದರ ಮಧ್ಯೆ ಜನರಿಗೆ ಆಗುತ್ತಿರುವ ಅನ್ಯಾಯ ಯಾರಿಗೂ ಕಾಣುತ್ತಿಲ್ಲ, ಕಾಂಗ್ರೆಸ್ ರಾಜ್ಯದ ರಾಜಕಾರಣವನ್ನು ನಗೆಪಾಟಲನ್ನಾಗಿ ಮಾಡಿದೆ. ಏಡಿಗಳನ್ನು ತಟ್ಟೆಯಲ್ಲಿ ಹಾಕಿದರೆ ಪರಸ್ಪರ ಕೈ-ಕಾಲು ಎಳೆಯುವ ರೀತಿಯಲ್ಲಿ ಕಾಂಗ್ರೆಸ್​ ಕಚ್ಚಾಟವಿದೆ.

ಇವರು ಕರ್ನಾಟಕದ ರಾಜಕಾರಣವನ್ನು ಹೇಸಿಗೆಯ ತಾಣವಾಗಿ ಪರಿವರ್ತನೆ ಮಾಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ನನೆಗುದಿಗೆ ಬಿದ್ದಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸದಾನಂದಗೌಡ ಎಂದು ಹೇಳಿದರು.

Siddaramaiah is behind this political drama: DVS

ಜನರಿಗೆ ಆಗುತ್ತಿರುವ ಅನ್ಯಾಯವನ್ನು ನೋಡಲು ಆಗುತ್ತಿಲ್ಲ, ನಿಮಗೆ ಅಧಿಕಾರ ನಡೆಸಲು ಸಾಧ್ಯವಾಗದಿದ್ದಾರೆ ಬಿಟ್ಟುಬಿಡಿ, ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಲಿ ಎಂದರು.

English summary
Central minister DV Sadananda gowda opines that Siddaramaiah is the main reason for the present political situation and drama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X