• search

ಯೋಗಿ, ಅಮಿತ್ ಶಾ ಬಂದರೂ ಬಿಜೆಪಿ ಗೆಲ್ಲುವುದಿಲ್ಲ : ಸಿದ್ದರಾಮಯ್ಯ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಯೋಗಿ, ಅಮಿತ್ ಶಾ ಬಂದರೂ ಬಿಜೆಪಿ ಗೆಲ್ಲುವುದಿಲ್ಲ : ಸಿದ್ದರಾಮಯ್ಯ | Oneindia Kannada

    ಮಂಗಳೂರು, ಮಾರ್ಚ್ 20 : 'ಕರ್ನಾಟಕ ಶಿಶುನಾಳ ಷರೀಫ, ಬಸವಣ್ಣ ಅವರ ನಾಡು. ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಎಷ್ಟು ಬಾರಿ ಬೇಕಾರೂ ಬರಲಿ, ಅವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

    ಮಂಗಳವಾರ ಸಂಜೆ ಮಂಗಳೂರಿನ ನೆಹರು ಮೈದಾನದಲ್ಲಿ ಜನಾಶೀರ್ವಾದ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ಬೃಹತ್ ಸಮಾವೇಶ ಕರಾವಳಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಆಯಿತು.

    ಕಾಂಗ್ರೆಸ್ ಪಾಂಡವರಂತೆ, ಬಿಜೆಪಿ ಕೌರವರಂತೆ : ರಾಹುಲ್ ಗಾಂಧಿ

    ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಉತ್ತರ ಪ್ರದೇಶದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

    Siddaramaiah

    'ಯೋಗಿ ಆದಿತ್ಯನಾಥ್ ಒಂದು ವರ್ಷದಲ್ಲಿ ಸಿಎಂ ಆಗಿ ಜನರ‌ ಭರವಸೆ ಕಳೆದುಕೊಂಡಿದ್ದೀರಿ. ಮುಖ್ಯಮಂತ್ರಿ,‌ ಉಪ ಮುಖ್ಯಮಂತ್ರಿ ಗೆದ್ದ ಸ್ಥಾನ ಕಳೆದುಕೊಂಡಿದ್ದೀರಿ. ಇನ್ನು ಇಲ್ಲಿಗೆ ಬಂದು ಜಾತಿ ವಿಷ ಬೀಜ ಬಿತ್ತು ಕೆಲಸ ಮಾಡುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

    In Pics: ಕರಾವಳಿಯಲ್ಲಿ ರಾಹುಲ್ ಗಾಂಧಿ ಮಿಂಚಿನ ಸಂಚಾರ

    'ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಲು ಹೇಳುವಾಗ ನಮ್ಮಲ್ಲಿ ದುಡ್ಡೆಲ್ಲಿಂದ ಎಂದು ಕೇಳಿದ್ದರು. ನಮ್ಮಲ್ಲಿ ದುಡ್ಡು ಪ್ರಿಂಟ್ ಮಾಡುವ ಮಷಿನ್ ಇಲ್ಲವೆಂದು ಹೇಳಿದ್ದರು. ಹಾಗೆ ಹೇಳಲು ಯಡಿಯೂರಪ್ಪ ಅವರಿಗೆ ನಾಚಿಕೆಯಾಗಬೇಕು' ಎಂದು ವಾಗ್ದಾಳಿ ನಡೆಸಿದರು.

    ಉಡುಪಿಯಲ್ಲಿ ಸೀಗಡಿ ಜೊತೆ ನೀರು ದೋಸೆ ಚಪ್ಪರಿಸಿದ ರಾಹುಲ್ ಗಾಂಧಿ

    'ಜಾವೇಡ್‌ಕರ್, ಯೋಗಿ ಆದಿತ್ಯನಾಥ್, ಯಡಿಯೂರಪ್ಪ, ಶೋಭಾರಿಗೆ ಬುದ್ಧಿ ಕಲಿಸಬೇಕೇ ಬೇಡವೇ?' ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ‌ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಮುಖ್ಯಮಂತ್ರಿ ಆಗಿದ್ದಾಗ ಒಂದು ದಿನವೂ ರೈತರ‌ಮನೆಗೆ ಯಡಿಯೂರಪ್ಪ ಹೋಗಿಲ್ಲ. ಪರಿಶಿಷ್ಟ ಜಾತಿಯವರ ಮನೆಗೆ ತಿಂಡಿ ತಿನ್ನಲು ಯಡಿಯೂರಪ್ಪ ಹೋಗಿ ಅವರಿಗೇ ಅವಮಾನ‌ ಮಾಡಿ ಬರುತ್ತಾರೆ. ಹೋಟೆಲ್ ನಿಂದ ತಿಂಡಿ ತಂದು ಯಡಿಯೂರಪ್ಪ, ಶೋಭಾ ತಿನ್ನುತ್ತಾರೆ. ಈ ಢೋಂಗಿತನ‌ ಬಿಡಿ,‌ ನಾಟಕ‌ ಬಿಡಿ' ಎಂದು ಟೀಕಿಸಿದರು.

    'ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಪಕ್ಷ. ಬಿಜೆಪಿಯವರು ಜನರ ಪರವಾಗಿಲ್ಲ. ಬಿಜೆಪಿಯವರು ಅವಕಾಶ ವಂಚಿತರಾಗಿರುವವರ, ಸಾಮಾಜಿಕ ನ್ಯಾಯದ ಪರವಾಗಿರುವವರಲ್ಲ. ಜನರು ಬಿಜೆಪಿಯವರ ಬಣ್ಣದ ಮಾತಿಗೆ‌ ಮರಳಾಗಬಾರದು' ಎಂದು ಸಿದ್ದರಾಮಯ್ಯ ಕರೆ ನೀಡಿದರು.

    'ಬಿಜೆಪಿ ನಾಯಕರು ಅನ್ನಭಾಗ್ಯದ ಬಗ್ಗೆ ವಿರೋಧ ವ್ಯಕ್ತಪಡಿಸತ್ತಿದ್ದರು. ಈಗ ಈ ಯೋಜನೆ ನಮ್ಮದು ಎಂದು ಹೇಳುತ್ತಾರೆ. ಆದರೆ, ಈ‌ ಯೋಜನೆ ಮಹಾರಾಷ್ಟ್ರ, ಗುಜರಾತ್ ನಲ್ಲಿ ಈ ವರೆಗೆ ಯಾಕೆ ಜಾರಿಗೆ ತಂದಿಲ್ಲ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    'ನರೇಂದ್ರ ಮೋದಿಯವರದ್ದು ಯು ಟರ್ನ್ ಸರಕಾರ. ಹಿಂದೆ ಆಧಾರ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದವರು ಈಗ ಹುಟ್ಟಿನಿಂದ ಸಾವಿನವರೆಗೆ ಆಧಾರ್ ಬೇಕೆನ್ನುತ್ತಾರೆ . ಕಪ್ಪು ಹಣ ತರುತ್ತೇವೆ, ಭ್ರಷ್ಟರ ನಿದ್ದೆಗೆಡಿಸುತ್ತೇವೆ ಎಂದಿದ್ದರು. ಆದರೆ, ನಿದ್ದೆಗೆಟ್ಟವರು, ಸತ್ತವರು ಬಡವರೇ ಹೊರತು ಶ್ರೀಮಂತರಲ್ಲ' ಎಂದು ಅವರು ಕಿಡಿಕಾರಿದರು.

    'ಕೈಗಾರಿಕೋದ್ಯಮಿಗಳ ಲಕ್ಷಾಂತರ ಹಣ ಮನ್ನಾ ಮಾಡಿದ ಕೇಂದ್ರ, ರೈತರ ಸಾಲ ಮನ್ನಾ ಮಾಡಲು ಆಲೋಚನೆ ಮಾಡುತ್ತಿದೆ. ನಾನು ಮತ್ತೆ ಜಿಲ್ಲೆಗೆ ಬಂದು ಬಿಜೆಪಿ ಬಣ್ಣ ಬಯಲು ಮಾಡುತ್ತೇನೆ' ಎಂದು ಹೇಳಿದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka Chief Minister addressed Janashirvada yatre in Nehru Maidan, Mangaluru on March 20, 2018. In his speech he attacked on BJP National President Amit Shah and Uttar Pradesh Chief Minister Yogi Adityanath.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more