ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟಿಲು : ಯಕ್ಷಗಾನ ತಿರುಗಾಟಕ್ಕೆ ಚಾಲನೆ, ಪಟ್ಲ ಸತೀಶ್ 4ನೇ ಮೇಳದಲ್ಲಿ

|
Google Oneindia Kannada News

ಮಂಗಳೂರು, ನವೆಂಬರ್ 14 : ಶ್ರೀ ಕ್ಷೇತ್ರ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 6 ಯಕ್ಷಗಾನ ಮೇಳಗಳ ತಿರುಗಾಟ ಕ್ಕೆ ಚಾಲನೆ ನೀಡಲಾಗಿದೆ. 2017-18 ನೇ ಸಾಲಿನ
ಶ್ರೀ ಕ್ಷೇತ್ರದ ಸೇವೆ ಬಯಲಾಟಗಳ ತಿರುಗಾಟ ಆರಂಭಗೊಂಡಿದೆ.

ಯಕ್ಷಗಾನ ರಂಗದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಶ್ರೀ ಕ್ಷೇತ್ರದ ಮೇಳದಲ್ಲಿ ಸೇವೆ ಸಲ್ಲಿಸಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ 4 ನೇ ಮೇಳದಲ್ಲಿ ಹಿರಿಯ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ ಸೇವೆ ಸಲ್ಲಿಸಲಿದ್ದಾರೆ.

Shri Katilu Sri Durgaparameshwari Yakshayana thirugata start

ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತಪದ್ಮನಾಭ ಅಸ್ರಣ್ಣ 6 ಮೇಳಗಳ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಕಟೀಲಿನಲ್ಲಿ ನಿನ್ನೆ ಸಂಜೆ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಗೆಜ್ಜೆ ಮುಹೂರ್ತ ನಡೆದು ಎಲ್ಲಾ 6 ಮೇಳಗಳ ಹನ್ನೆರಡು ಮಂದಿ ವೇಷಧಾರಿಗಳು ಭಾಗವತಿಕೆ ಹಿಮ್ಮೇಳಗಳ ಸಹಿತ ಯಕ್ಷ ನಾಟ್ಯ ಪ್ರದಕ್ಷಿಣೆ, ಗಣಪತಿ ಸನ್ನಿಧಿಯಲ್ಲಿ ಯಕ್ಷಗಾನ ನಾಟ್ಯ ಸೇವೆ ನಡೆಸಿದರು.

ಶ್ರೀ ಕ್ಷೇತ್ರದ 6 ಮೇಳಗಳ ದೇವರ ಪೆಟ್ಟಿಗೆ ಚಿನ್ನ, ಬೆಳ್ಳಿಯ ಕಿರೀಟ ಹಾಗೂ ಆಯುಧಗಳನ್ನು ದೇವಸ್ಥಾನದಲ್ಲಿ ಪೂಜಿಸಿ ಬಳಿಕ ಸರಸ್ವತಿ ಸದನದಲ್ಲಿನ ಚೌಕಿಯಲ್ಲಿ ಪೂಜೆ ಸಲ್ಲಿಸಲಾಯಿತು. 6 ಯಕ್ಷಗಾನ ಮೇಳಗಳ ತಿರುಗಾಟ ಆರಂಭದ ಮೊದಲ ಹಂತವಾಗಿ ಕ್ಷೇತ್ರದ ರಥಬೀದಿಯಲ್ಲಿ ನಿರ್ಮಿಸಲಾಗಿದ್ದ 6 ಯಕ್ಷ ರಂಗಗಳಲ್ಲಿ ನಿನ್ನೆ ರಾತ್ರಿ ಬಯಲಾಟ ಪ್ರದರ್ಶನ ನಡೆಯಿತು.

Shri Katilu Sri Durgaparameshwari Yakshayana thirugata start

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದದಿಂದ ಹೊರಡುವ ಆರೂ ಮೇಳಗಳು ಈ ಬಾರಿ ಹೊಸ ರೂಪದಿಂದ ಹೊರಡಲಿದೆ. 6 ಮೇಳಗಳಿಗೆ ಸುಮಾರು 20 ವರ್ಷಕ್ಕಾಗುವಷ್ಟು ಯಕ್ಷಗಾನಗಳೂ ಈಗಾಗಲೇ ಬುಕ್ಕಿಂಗ್ ಆಗಿವೆ. ಇವುಗಳಲ್ಲಿ ಸುಮಾರು 500 ಯಕ್ಷಗಾನ ಪ್ರದರ್ಶನಗಳು ಖಾಯಂ ಆಡಿಸುವ ಯಕ್ಷಗಾನವಾಗಿದೆ.

Shri Katilu Sri Durgaparameshwari Yakshayana thirugata start

ಮೇಳಗಳ ತಿರುಗಾಟಕ್ಕಿದ್ದ ಬಸ್‍ಗಳೆಲ್ಲವೂ ಹಳೆಯದಾಗಿರುವುದರಿಂದ ಅವುಗಳ ಬದಲಿಗೆ ಈ ವರ್ಷದಿಂದ ಕಲಾವಿದರು ಹಾಗೂ ಸಿಬ್ಬಂದಿಗಳಿಗೆ ಉಪಯೋಗವಾಗುವಂತೆ ವಿಷೇಶವಾಗಿ ವಿನ್ಯಾಸಗೊಳಿಸಿದ ಹೊಸ ಬಸ್ಸುಗಳನ್ನು ಒದಗಿಸಲಾಗಿದೆ. ಜೊತೆಗೆ ಸಾಮಾಗ್ರಿಗಳ ಸಾಗಾಣಿಕೆಗೆ ಪ್ರತ್ಯೇಕ ಆರು ಲಾರಿಗಳನ್ನು ಮೇಳಕ್ಕೆ ನೀಡಲಾಗಿದ್ದು ಅದಲ್ಲದೇ ಸೇವಾದಾರರಿಗೆ ಉಪಯೋಗವಾಗುವಂತೆ ರಂಗಸ್ಥಳ ಮತ್ತು ಚೌಕಿಗೆ ವಿದ್ಯುದಲಂಕಾರ ಧ್ವನಿವರ್ಧಕಗಳನ್ನು, ಪ್ರತೀ ಮೇಳಕ್ಕೆ ಎರಡು ಹೊಸ ಜನರೇಟರ್ ಗಳನ್ನು ನೀಡಲಾಗಿದೆ.

English summary
Shri kshethra Katilu Sri Durgaparameshwari Dashavatara Yakshagana Board has been launched its Yakshagana thirugata. Shri Kshetra Kateel's priest Ananthapadmanabha Asranna set the stage for thirugata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X