ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಸಲ್ಲಿ ಸಿದ್ದರಾಮಯ್ಯ, ವಾಸ್ತವದಲ್ಲಿ ಯಡಿಯೂರಪ್ಪ ಸಿಎಂ ಆಗ್ತಾರೆ:ಶೋಭಾ

|
Google Oneindia Kannada News

Recommended Video

ಸಿದ್ದರಾಮಯ್ಯ ಹಾಗು ಬಿ ಎಸ್ ಯಡಿಯೂರಪ್ಪ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿಕೆ | Oneindia Kannada

ಮಂಗಳೂರು, ಡಿಸೆಂಬರ್ 03: ರಾಜ್ಯ ಸರ್ಕಾರ ಹಂಪಿ ಉತ್ಸವ ರದ್ದು ಪಡಿಸಿರುವ ಕ್ರಮವನ್ನು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಹಂಪಿ ಉತ್ಸವ ಇಡೀ ರಾಜ್ಯದಲ್ಲಿ ನಡೆಯುವುದಿಲ್ಲ. ಹಂಪಿಯಲ್ಲಿ ಮಾತ್ರ ನಡೆಯೋದು. ಸರ್ಕಾರ ಬರಗಾಲದ ಕಾರಣ ನೀಡಿದೆ. ಆದರೆ ಹಂಪಿ ಉತ್ಸವದಿಂದ ಸ್ಥಳೀಯ ಜನರಿಗೆ ಉದ್ಯೋಗ ಸಿಗುತ್ತದೆ.

ಈ ಬಾರಿ ಹಂಪಿ ಉತ್ಸವ ಇಲ್ಲ, ಸರ್ಕಾರ ಅಧಿಕೃತ ಘೋಷಣೆಈ ಬಾರಿ ಹಂಪಿ ಉತ್ಸವ ಇಲ್ಲ, ಸರ್ಕಾರ ಅಧಿಕೃತ ಘೋಷಣೆ

ಟಿಪ್ಪು ಜಯಂತಿ ಮಾಡೋಕೆ ಸರ್ಕಾರದ ಬಳಿ ಹಣ ಇದೆ. ಹಂಪಿ ಉತ್ಸವ ಮಾಡೋಕೆ ಹಣವಿಲ್ಲ. ರಾಜ್ಯ ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸಿದೆ. ಸರ್ಕಾರ ಹಂಪಿ ಉತ್ಸವವನ್ನು ಮಾಡಲೇಬೇಕು ಎಂದು ಆಗ್ರಹಿಸಿದರು.

Shobha Karanlaje slams State Government

ಸಿದ್ದರಾಮಯ್ಯ ಕನಸಲ್ಲಿ ಮಾತ್ರ ಸಿಎಂ ಆಗೋದು. ವಾಸ್ತವದಲ್ಲಿ ಯಡಿಯೂರಪ್ಪ ಅವರೇ ಸಿಎಂ ಆಗುತ್ತಾರೆ. ಯಡಿಯೂರಪ್ಪ ಸಿಎಂ ಆಗಲಿ ಅನ್ನೋದು ರಾಜ್ಯದ ಜನರ ಅಪೇಕ್ಷೆ. ಮೈತ್ರಿ ಪಕ್ಷಗಳು ಕಿತ್ತಾಡೋದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ. ಸಿದ್ದರಾಮಯ್ಯ ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತಿದ್ದಾರೆ. ಅದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಫಾಲೋ ಅಪ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ತೋಟಬೆಂಗ್ರೆ ಗ್ಯಾಂಗ್ ರೇಪ್‌ ಪ್ರಕರಣ: ಪೊಲೀಸರ ವಿರುದ್ಧ ಕಿಡಿಕಾರಿದ ಶೋಭಾ ಕರಂದ್ಲಾಜೆತೋಟಬೆಂಗ್ರೆ ಗ್ಯಾಂಗ್ ರೇಪ್‌ ಪ್ರಕರಣ: ಪೊಲೀಸರ ವಿರುದ್ಧ ಕಿಡಿಕಾರಿದ ಶೋಭಾ ಕರಂದ್ಲಾಜೆ

ರಾಮಮಂದಿರ ನಿರ್ಮಾಣದ ಬಗ್ಗೆ ಜನಾರ್ಧನ ಪೂಜಾರಿ ನೀಡಿದ ಹೇಳಿಕೆ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ ಬಿ ಜನಾರ್ದನ ಪೂಜಾರಿ ಅವರ ಹೇಳಿಕೆ ಸ್ವಾಗತಾರ್ಹ. ಒಂದು ಕಾಲದಲ್ಲಿ ರಾಮಮಂದಿರ ಬಗ್ಗೆ ಪೂಜಾರಿ ಸಂಶಯ ವ್ಯಕ್ತಪಡಿಸಿದ್ದರು. ಆದರೆ ಈಗ ಅದರ ಬಗ್ಗೆ ಮಾತನಾಡಿದ್ದರೆ ಅಂದರೆ ರಾಮ ಮಂದಿರ ನಿರ್ಮಾಣವಾಗುತ್ತದೆ.

ಟಿಪ್ಪು ಜಯಂತಿಗೆ ಹಣವಿದೆ, ಹಂಪಿ ಉತ್ಸವಕ್ಕೆ ಮಾತ್ರ ಬರವೇ?: ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ ಟಿಪ್ಪು ಜಯಂತಿಗೆ ಹಣವಿದೆ, ಹಂಪಿ ಉತ್ಸವಕ್ಕೆ ಮಾತ್ರ ಬರವೇ?: ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಕೋರ್ಟ್ ನಲ್ಲಿ ರಾಮ ಮಂದಿರದ ವಿರುದ್ಧ ಹೋರಾಡುತ್ತಿದ್ದು, ಕೆಟ್ಟ ರಾಜನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ನಿಂದಾಗಿ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದೆ ಎಂದು ಅವರು ಆರೋಪಿಸಿದರು.

English summary
MP Shobha Karanlaje slams state Government over Hampi Uthsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X