ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.20ರಿಂದ ಶಿರಾಡಿ ಘಾಟ್ ಬಂದ್, ಪರ್ಯಾಯ ಮಾರ್ಗಗಳು

|
Google Oneindia Kannada News

ಮಂಗಳೂರು, ಜನವರಿ 17 : ಬೆಂಗಳೂರು-ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್‌ ರಸ್ತೆಯಲ್ಲಿ ಜ.20ರಿಂದ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ. ಪರ್ಯಾಯ ಮಾರ್ಗಗಳನ್ನು ಜಿಲ್ಲಾಡಳಿತ ಸಿದ್ಧಗೊಳಿಸಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕೆಂಪುಹೊಳೆ ಗೆಸ್ಟ್‌ ಹೌಸ್‌ನಿಂದ ಅಡ್ಡಹೊಳೆವರೆಗಿನ ರಸ್ತೆಯನ್ನು ಕಾಂಕ್ರೀಟ್‌ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕಾಗಿ ವಾಹನ ಸಂಚಾರವನ್ನು ಬಂದ್ ಮಾಡಲಾಗುತ್ತದೆ.

ಚಿತ್ರಗಳು : ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ-ಮುಕ್ತಚಿತ್ರಗಳು : ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ-ಮುಕ್ತ

ಶಿರಾಡಿ ಘಾಟ್ ರಸ್ತೆಯನ್ನು ಸಂಪೂರ್ಣವಾಗಿ ಕಾಂಕ್ರಿಟ್‌ ರಸ್ತೆಯಾಗಿ ಅಭಿವೃದ್ಧಿ ಮಾಡಲು ಎರಡು ಹಂತದಲ್ಲಿ ಸರ್ಕಾರ ಕಾಮಗಾರಿ ಕೈಗೊಂಡಿದೆ. ಮೊದಲ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.

Shiradi Ghat road to be closed on January 20, alternative roads

ಈಗ ಎರಡನೇ ಹಂತದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಂಪುಹೊಳೆ ಸೇತುವೆಯಿಂದ ದಕ್ಷಿಣಕನ್ನಡ ಜಿಲ್ಲೆಯ ಅಡ್ಡಹೊಳೆ ಸೇತುವೆ ತನಕ 12.37 ಕಿ.ಮೀ.ರಸ್ತೆಯನ್ನು ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿ ಮಾಡುವ ಕಾಮಗಾರಿ ನಡೆಯಲಿದೆ.

ಜನವರಿಯಿಂದ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಬಂದ್ಜನವರಿಯಿಂದ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಬಂದ್

ಪರ್ಯಾಯ ಮಾರ್ಗಗಳು


* ಲಘು ವಾಹನ : ಹಾಸನ-ಬೇಲೂರು, ಮೂಡಿಗೆರೆ-ಚಾರ್ಮಾಡಿ ಘಾಟ್-ಬೆಳ್ತಂಗಡಿ-ಉಜಿರೆ-ಬಿ.ಸಿ.ರೋಡ್-ಮಂಗಳೂರು, ಹಾಸನ-ಸಕಲೇಶಪುರ-ಆನೆಮಹಲ್, ಹಾನ್‌ಬಾಳ್-ಜೆನ್ನಾಪುರ, ಮೂಡಿಗೆರೆ-ಚಾರ್ಮಾಡಿ ಘಾಟ್-ಬೆಳ್ತಂಗಡಿ-ಉಜಿರೆ, ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ-ಕಳಸ-ಕುದುರೆಮುಖ-ಮಾಲಘಾಟ್, ಪುತ್ತೂರು-ಮಡಿಕೇರಿ-ಹುಣಸೂರು, ಶಿವಮೊಗ್ಗ-ಆಯನೂರು-ಹೊಸನಗರ-ಮಾಸ್ತಿಕಟ್ಟೆ-ಹೊಸಂಗಡಿ-ಸಿದ್ದಾಪುರ-ಕುಂದಾಪುರ ಮಾರ್ಗದಲ್ಲಿ ಸಂಚರಿಸಬಹುದು.

* ಭಾರಿ ವಾಹನಗಳು : ಮಂಗಳೂರು-ಬಿ.ಸಿ.ರೋಡ್-ಮಾಣಿ, ಪುತ್ತೂರು-ಮಡಿಕೇರಿ-ಹುಣಸೂರು, ಕೆ.ಆರ್.ನಗರ-ಹೊಳೆನರಸೀಪುರ-ಹಾಸನ, ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು, ಬೆಂಗಳೂರು-ಶಿವಮೊಗ್ಗ-ಾಆಯನೂರು-ಹೊಸನಗರ, ಬೆಂಗಳೂರು-ನೆಲಮಂಗಲ-ಶಿವಮೊಗ್ಗ-ಸಾಗರ-ಹೊನ್ನಾವರ-ಮುರುಡೇಶ್ವರ-ಕುಂದಾಪುರ-ಉಡುಪಿ-ಮಂಗಳೂರು ಮಾರ್ಗದಲ್ಲಿ ಸಂಚಾರ ನಡೆಸಬಹುದಾಗಿದೆ.

English summary
Shiradi Ghat stretch connecting Bengaluru and Mangaluru will be closed on January 20, 2018 to allow the improvement of the 12 km-long road. Here is a list of alternative roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X