ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾಡಿ ಘಾಟ್ ಭಾನುವಾರ ಸಂಚಾರಕ್ಕೆ ಮುಕ್ತ, ಮೈಮರೆತರೆ ಪ್ರಪಾತಕ್ಕೆ ಖಚಿತ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 14: ಮಂಗಳೂರು - ಬೆಂಗಳೂರು ಮಧ್ಯೆ ಸಂಚರಿಸುವ ವಾಹನ ಸವಾರರಿಗೊಂದು ಸಂತಸದ ಸುದ್ದಿ. ಆರು ತಿಂಗಳಿನಿಂದ ವಾಹನ ಸಂಚಾರ ಸಂಪೂರ್ಣ ನಿಷೇಧಗೊಂಡಿದ್ದ ಶಿರಾಢಿಘಾಟ್ ರಸ್ತೆ ಭಾನುವಾರದಿಂದ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಶಿರಾಡಿ ಘಾಟ್ ರಸ್ತೆಯ ಎರಡನೇ ಹಂತದ ಕಾಂಕ್ರೀಟ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಭಾನುವಾರದಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಆದರೆ ಈ ರಸ್ತೆಯಲ್ಲಿ ವಾಹನ ಸವಾರರು ಮೈ ಮರೆತೆರೆ ಪ್ರಪಾತಕ್ಕೆ ಉರುಳಿ ಬೀಳುವ ಅತಂಕ ಕೂಡ ಸೃಷ್ಟಿಯಾಗಿದೆ.

ಶಿರಾಡಿ ಘಾಟ್ ನಲ್ಲಿ ಸ್ಥಳೀಯರಿಂದ ಅಧಿಕಾರಿಗಳಿಗೆ ದಿಗ್ಬಂಧನಶಿರಾಡಿ ಘಾಟ್ ನಲ್ಲಿ ಸ್ಥಳೀಯರಿಂದ ಅಧಿಕಾರಿಗಳಿಗೆ ದಿಗ್ಬಂಧನ

ಸುರಕ್ಷತೆ ಕಾಮಗಾರಿ ಮುಗಿಸದೆ ತರಾತುರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಎಷ್ಟು ಸುರಕ್ಷಿತ ಎನ್ನುವ ಗೊಂದಲ ಈಗ ಕಾಡತೊಡಗಿದೆ.

Shiradi Ghat

ಪ್ರತಿ ಮಳೆಗಾಲದ ಸಂದರ್ಭದಲ್ಲೂ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಕೊಡುತ್ತಿದ್ದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಮಾಡುವ ಕೊನೆಯ ಹಂತಕ್ಕೆ ತಲುಪಿದೆ. ಶಿರಾಡಿಘಾಟ್ ನ 26 ಕಿಲೋಮೀಟರ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿಗಾಗಿ ಕೇಂದ್ರ ಸರಕಾರ ಸುಮಾರು 183 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಹಮ್ಮಿಕೊಂಡಿತ್ತು.

ಮೊದಲ ಹಂತದಲ್ಲಿ ಕೆಂಪುಹೊಳೆಯಿಂದ ಮಾರನಹಳ್ಳಿವರೆಗಿನ 13 ಕಿಲೋಮೀಟರ್ ಉದ್ದದ ರಸ್ತೆ ಕಾಮಗಾರಿಯನ್ನು ಈಗಾಗಲೇ ಮುಗಿಸಲಾಗಿದ್ದು, ಅಡ್ಡಹೊಳೆಯಿಂದ ಕೆಂಪುಹೊಳೆವರೆಗಿನ 13 ಕಿಲೋಮೀಟರ್ ರಸ್ತೆ ಕಾಮಗಾರಿ ಇದೀಗ ಮುಗಿಯುವ ಹಂತದಲ್ಲಿದೆ.

ಶಿರಾಡಿ ಘಾಟಿ ರಸ್ತೆಯಲ್ಲಿ ಜನಪ್ರತಿನಿಧಿಗಳ ಕಾರಿಗೆ ತಡೆಯೊಡ್ಡಿದ ಮರ!ಶಿರಾಡಿ ಘಾಟಿ ರಸ್ತೆಯಲ್ಲಿ ಜನಪ್ರತಿನಿಧಿಗಳ ಕಾರಿಗೆ ತಡೆಯೊಡ್ಡಿದ ಮರ!

ಕಾಮಗಾರಿ ಆರಂಭಗೊಂಡು 6 ತಿಂಗಳು ಕಳೆದಿದ್ದು, ಈ ರಸ್ತೆಯುದ್ದಕ್ಕೂ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವ ಹಿನ್ನೆಲೆಯಲ್ಲಿ ಜುಲೈ 15ರಿಂದಲೇ ವಾಹನ ಸಂಚಾರಕ್ಕೆ ಮುಕ್ತಗೊಳಲಿದೆ.

Shiradi Ghat

ಈ ಶಿರಾಡಿಘಾಟ್ ರಸ್ತೆಯು ಅಪಾಯಕಾರಿ ರಸ್ತೆಗಳಲ್ಲಿ ಒಂದು ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತನ್ನೂ ನೀಡಲಾಗಿದೆ. ರಸ್ತೆಯ ಎರಡೂ ಕಡೆ ಸಂಪೂರ್ಣ ಇಳಿಜಾರು ಪ್ರದೇಶವಾದ ಕಾರಣ ರಸ್ತೆಯ ಎರಡೂ ಭಾಗಕ್ಕೂ ತಡೆಗೋಡೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ಆದರೆ, ಈ ಹಂತದಲ್ಲಿ ರಸ್ತೆಯ ಹಲವಾರು ತಿರುವುಗಳಲ್ಲಿ ತಡೆಗೋಡೆಗಳು ಇನ್ನಷ್ಟೇ ನಿರ್ಮಾಣ ಆಗಬೇಕಿದೆ. ಇನ್ನು ಕೆಲವು ಕಡೆಗಳಲ್ಲಿ ಕಟ್ಟಿದ ತಡೆಗೋಡೆ ಕುಸಿದು ಬಿದ್ದಿದೆ.

ಅಲ್ಲದೆ ಮೂರು ಪದರದಲ್ಲಿ ಕಾಂಕ್ರೀಟ್ ಹಾಕಿರುವ ಕಾರಣ ರಸ್ತೆಯು ನೆಲದ ಮಟ್ಟದಿಂದ 1 ಅಡಿಯಷ್ಟು ಎತ್ತರದಲ್ಲಿದೆ. ಅದನ್ನು ಸಮತಟ್ಟಾಗಿಸಲು ಇಕ್ಕೆಲಗಳಲ್ಲೂ ಮಣ್ಣನ್ನು ತುಂಬುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಕೆಲವು ಕಡೆ ವಾಹನ ಚಾಲಕರು ಕೊಂಚ ಆಯ ತಪ್ಪಿದರೂ ಪಾತಾಳಕ್ಕೆ ಉರುಳಿ ಬೀಳುವ ಅಪಾಯವಿದೆ.

English summary
After six months of work Shiradi Ghat road open for public vehicles from July 15th. But there are some problems in this way. It has to be solved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X