ಮಂಗಳೂರಲ್ಲಿ ಮುಸ್ಲಿಂ ಮಹಿಳೆಯರ ಬೃಹತ್ ಸಮಾವೇಶ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್, 19 : ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ದಕ್ಷಿಣ ಕನ್ನಡ, ಉಡುಪಿಯ ವಿವಿಧ ಮುಸ್ಲಿಂ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಮಂಗಳೂರಿನ ಪುರಭವನದಲ್ಲಿ ಬೃಹತ್ ಶರಿಯತ್ ಸಂರಕ್ಷಣಾ ಮಹಿಳಾ ಸಮಾವೇಶ ನಡೆಯಲಿದೆ.

ಡಿಸೆಂಬರ್ 20ರಂದು ಬೆಳಗ್ಗೆ 9.30ಕ್ಕೆ ಆರಂಭವಾಗಲಿರುವ ಸಮಾವೇಶ ಮಧ್ಯಾಹ್ನ 1.30ಕ್ಕೆ ಸಮಾರೋಪಗೊಳ್ಳಲಿದೆ. 'ತಲಾಖ್ ಕಾನೂನು' ವಿಷಯದಲ್ಲಿ ಸಲಫಿ ಗರ್ಲ್ಸ್ ಆಂಡ್ ವುಮೆನ್ಸ್ ಮೂವ್ ಮೆಂಟ್ ನ ಮುಮ್ತಾಜ್ ಬಿಂತ್ ಶಂಸುದ್ದೀನ್ ವಿಚಾರ ಮಂಡಿಸಲಿದ್ದಾರೆ.

'ಏಕರೂಪ ನಾಗರಿಕ ಸಂಹಿತೆ' ವಿಷಯದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ವುಮೆನ್ಸ್ ವಿಂಗ್ ನ ಸಬೀಹಾ ಫಾತಿಮಾ, 'ಇಸ್ಲಾಂನಲ್ಲಿ ಕೌಟುಂಬಿಕ ಜೀವನ' ಎಂಬ ವಿಷಯದಲ್ಲಿ ಮರಿಯಂ ಶಫೀನಾ, 'ಇಸ್ಲಾಂ ಮತ್ತೆ ಮಹಿಳೆ' ವಿಷಯದಲ್ಲಿ ಅಲ್ ಹಕ್ ಫೌಂಡೇಶನ್ ನ ವುಮೆನ್ಸ್ ವಿಂಗ್ ನ ಮಸೀರಾ ಅಬ್ದುಲ್‌ ಲತೀಫ್ ಭಾಷಣ ಮಾಡಲಿದ್ದಾರೆ.

Shariah Protection Conference for Women in Mangaluru

'ಭಾರತದಲ್ಲಿ ಮಹಿಳೆಯ ಸ್ಥಿತಿಗತಿ' ಎಂಬ ವಿಷಯದಲ್ಲಿ ಯುನಿವೆಫ್ ವುಮೆನ್ ವಿಂಗ್ ನ ಯು.ಸುನೈನಾ ಆಸೀಫ್, 'ಇಸ್ಲಾಂನಲ್ಲಿ ತಲಾಖ್' ಎಂಬ ವಿಷಯದಲ್ಲಿ ಎಚ್ ಐಎಫ್ ವುಮೆನ್ ವಿಂಗ್ ನ ರೈಹಾನ ಬಿಂತ್ ಹಕೀಂ ವಿಚಾರ ಮಂಡನೆ ಮಾಡಲಿದ್ದಾರೆ.

'ದಿ ಸೆಕ್ಯುಲರ್ ಇಂಡಿಯಾ ಆಂಡ್ ವುಮೆನ್' ಎಂಬ ವಿಷಯದಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್ ನ ಶಾಹೀದಾ ಅಸ್ಲಾಂ ಹಾಗೂ ಹಿದಾಯ ಅರೇಬಿಕ್ ಟೀಚರ್ಸ್ ಟ್ರೈನಿಂಗ್ ಸೆಂಟರ್ ನ ಶಹನಾಝ್ ಅಹ್ಮದ್ 'ಸ್ಟೇಟಸ್ ಆಫ್ ವುಮೆನ್ ಇನ್ ಇಸ್ಲಾಂ' ಎಂಬ ವಿಷಯದಲ್ಲಿ ಭಾಷಣ ಮಾಡಲಿದ್ದಾರೆ.

ಕಳೆದ ತಿಂಗಳಲ್ಲಿ ಮುಸ್ಲಿಮ್‌ ಸೆಂಟ್ರಲ್‌ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ ಹಾಗೂ ಉಭಯ ಜಿಲ್ಲೆಯ ವಿವಿಧ ಮುಸ್ಲಿಂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಬೃಹತ್‌ ಶರಿಯತ್‌ ಸಂರಕ್ಷಣಾ ಸಮಾವೇಶ ನಡೆದಿತ್ತು. ಈ ವೇಳೆ ಏಕರೂಪ ನಾಗರಿಕ ಸಂಹಿತೆ ವಿರುದ್ಧ ದೇಶದಾದ್ಯಂತ ಇರುವ ಎಲ್ಲ ಮುಸ್ಲಿಂ ಸಂಘಟನೆಗಳು ಒಗ್ಗಟ್ಟಿನ ಹೋರಾಟ ನಡೆಸಲು ಸಮಾವೇಶದ ಮೂಲಕ ಕರೆ ನೀಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Muslim Central Committee, Dakshina Kannada and Udupi in coordination with Various Muslim Organizations of the two districts have organized Shariah Protection Conference for Women on 20th December to discuss about Islam and women security.
Please Wait while comments are loading...