ಶರತ್ ಕೊಲೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಆ. 8 ರಂದು ಪ್ರತಿಭಟನೆ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 6: ಅರ್. ಎಸ್ ಎಸ್ ನ ಕಾರ್ಯಕರ್ತ ಶರತ್ ಮಡಿವಾಳರ ಕೊಲೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ ಈವರೆಗೆ ಕೊಲೆಗಡುಕರನ್ನು ಬಂಧಿಸದೇ ಇರುವುದನ್ನು ಖಂಡಿಸಿ ಆಗಸ್ಟ್ 9 ರಂದು ಹಿಂದೂ ಹಿತರಕ್ಷಣಾ ಸಮಿತಿ ಮಂಗಳೂರಿನ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಿದೆ.

ಕಲ್ಲಡ್ಕದಲ್ಲಿ ಯುವಕರ ಎರಡು ಗುಂಪುಗಳ ನಡುವೆ ವೈಯುಕ್ತಿಕ ಕಾರಣಗಳಿಂದ ನಡೆದ ಗಲಾಟೆ ಅದಕ್ಕೆ ಕೋಮು ಬಣ್ಣ ಹಚ್ಚಿ ಜಿಲ್ಲೆಯ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಅದರ ಪರಿಣಾಮವಾಗಿ ಎರಡು ಕೊಲೆ ಯತ್ನ ಹಾಗೂ ಬೆಂಜನಪದವಿನಲ್ಲಿ ಅಶ್ರಪ್ ಕೊಲೆ ಹಾಗೂ ಬಿ.ಸಿ.ರೋಡ್ ನಲ್ಲಿ ಶರತ್ ಮಡಿವಾಳ ಹತ್ಯೆ ನಡೆಯಿತು.

Sharath Madiwala Murder Case: HHS To Hold Hunger Strike On Aug 8 at DC office Mangaluru

ಈ ಹಿಂದೆ ನಡೆದ ಕರೊಪಾಡಿಯ ಜಲೀಲ್ ಹಾಗೂ ಅಮ್ಮುಂಜೆ ನಿವಾಸಿ ಅಶ್ರಪ್ ಕೊಲೆ ಮಾಡಿದ ಅರೋಪಿಗಳನ್ನುಇಲಾಖೆ ಶೀಘ್ರವೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಆದರೆ ಅದೇ ಆಸಕ್ತಿ ಶರತ್ ಮಡಿವಾಳ ಪ್ರಕರಣ ಹಾಗೂ ಎರಡು ಕೊಲೆ ಯತ್ನ ಪ್ರಕರಣಗಳಲ್ಲಿ ಯಾಕೆ ಅಗಿಲ್ಲ? ಇದಕ್ಕೆ ರಾಜಕೀಯ ನಾಯಕರ ಒತ್ತಡ ಕೆಲಸ ಮಾಡಿದೆ ಎಂದು ಹಿಂದೂ ಹಿತರಕ್ಷಣಾ ಸಮಿತಿ ಆರೋಪಿಸಿದೆ.

ಅಲ್ಲದೆ, ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ನಡೆದ ಈ ಕೊಲೆ ಪ್ರಕರಣದ ಬಗ್ಗೆ ಸಚಿವರು ಆಸಕ್ತಿ ವಹಿಸದೇ ಇರುವುದನ್ನು ನೋಡಿದಾಗ ಸಚಿವ ರಮಾನಾಥ ರೈಯವರು ಅರೋಪಿಗಳಿಗೆ ರಕ್ಷಣೆ ನೀಡುತ್ತಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಉಸ್ತುವಾರಿ ಸಚಿವರ ಹಾಗೂ ಪೊಲೀಸರ ವೈಫಲ್ಯವನ್ನು ಖಂಡಿಸಿ ಇದೇ ತಿಂಗಳ 8 ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಎದುರು ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕಛೇರಿ ಎದುರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ. ಈ ನಂತರವು ಸರಕಾರ ಕೊಲೆ ಅರೋಪಿಗಳನ್ನು ಪತ್ತೆ ಹಚ್ಚದೆ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಾಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹಿಂದೂ ಹಿತರಕ್ಷಣಾ ಸಮಿತಿ ಎಚ್ಚರಿಸಿದೆ

Mangaluru : Sharath Madiwala RSS worker is no more | Oneindia Kannada

ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮೊನಪ್ಪ ಭಂಡಾರಿ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ ಇನ್ನಿತರ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On August 8, Hindu Hitarakshana Samiti will hold a hunger strike in front of the DC office Mangaluru as the police have still failed to arrest the accused in RSS worker Sharath Madiwala murder case.
Please Wait while comments are loading...