• search
For mangaluru Updates
Allow Notification  

    ಲೈಂಗಿಕ ಕಿರುಕುಳ: ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಆರೋಪ

    By ಮಂಗಳೂರು ಪ್ರತಿನಿಧಿ
    |

    ಮಂಗಳೂರು ಜುಲೈ 06: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಉಮೇಶ್ ನಾಯ್ಕ್ ವಿದ್ಯಾರ್ಥಿಗಳಿಗೆ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯ ನೀಡಿದ್ದಾರೆ ಎಂದು ಅರೋಪಿಸಲಾಗಿದೆ.

    ಡಾ. ಉಮೇಶ್ ನಾಯ್ಕ್ ವಿರುದ್ಧ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು ವಿಶ್ವ ವಿದ್ಯಾನಿಲಯದ ಉಪಕುಲಪತಿ, ರಿಜಿಸ್ಟ್ರಾರ್, ಮತ್ತು ಸ್ಪರ್ಶ್ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಕಿರುಕುಳ ನೀಡುತ್ತಿರುವ ಪ್ರಾಧ್ಯಾಪಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

    Sexual harassment allegation against assistant Professor of Mangaluru University

    ಲೈಬ್ರರಿ ಮತ್ತು ಲ್ಯಾಬ್ ಗಳಲ್ಲಿ ಡಾ. ಉಮೇಶ್ ನಾಯ್ಕ್ ವಿದ್ಯಾರ್ಥಿನಿಯರ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅದರೆ ಮಂಗಳೂರು ವಿಶ್ವ ವಿದ್ಯಾಲಯ ಮಾತ್ರ ಈ ಘಟನೆಯ ಕುರಿತು ಜಾಣ ಮೌನ ವಹಿಸಿದೆ. ವಿಶ್ವ ವಿದ್ಯಾಲಯದ ಈ ನಿರ್ಲಕ್ಷ ಧೋರಣೆ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೂಡಬಿದಿರೆ: ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ತಂದೆ

    ಈ ನಡುವೆ ದೂರು ಕೊಟ್ಟಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಡಾ.ಉಮೇಶ್ ನಾಯ್ಕ್ ದೂರವಾಣಿ ಕರೆ ಮಾಡಿ ಅಟ್ರಾಸಿಟಿ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾರೆ. ಇದೀಗ ಈ ದೂರವಾಣಿ ಕರೆಗಳ ಆಡಿಯೋ ರೆಕಾರ್ಡ್ ಮಾಧ್ಯಮಗಳಿಗೆ ದೊರೆತಿದೆ.

    Sexual harassment allegation against assistant Professor of Mangaluru University

    ಈ ಹಿನ್ನೆಲೆಯಲ್ಲಿ ಘಟನೆಯ ಸಮಗ್ರ ತನಿಖೆ ನಡೆಯಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    ಇನ್ನಷ್ಟು ಮಂಗಳೂರು ಸುದ್ದಿಗಳುView All

    English summary
    Sexual harassment allegation on Mangaluru University library and information science dept's Assistant Professor Dr, Umesh Naik . Students of the library and information science dept demanded strict action against Dr.Umesh Naik

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more