ಮಂಗಳೂರು: ಶೂಟೌಟ್, ಭೂಗತ ಪಾತಕಿ ಕಲಿ ಯೋಗೀಶ್ ಸಹಚರರ ಬಂಧನ

Posted By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 29 : ಮಹತ್ವದ ಕಾರ್ಯಚರಣೆಯೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಇತ್ತೀಚೆಗೆ ನಡೆದ ಶೂಟೌಟ್ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಶೂಟೌಟ್ ಪ್ರಕರಣಕ್ಕೆ ಸಂಭಂಧಿಸಿದಂತೆ ಭೂಗತ ಪಾತಕಿ ಕಲಿ ಯೋಗಿಶ್ ನ ಇಬ್ಬರು ಸಹಚರದನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಕಾರ್ ಸ್ಟ್ರೀಟ್ ನ ಬಟ್ಟೆಯಂಗಡಿಯಲ್ಲಿ ಶೂಟೌಟ್

ಬಂಧಿತರನ್ನು ಚಂದ್ರಶೇಖರ್ ಹಾಗೂ ಮನೋಜ್ ಕುಂದರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲು, ಸಜೀವಗುಂಡು, ದ್ವಿಚಕ್ರ ವಾಹನ ಸೇರಿದಂತೆ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Serial shootouts in Mangaluru- CCB arrested two accused

ಮಂಗಳೂರಿನ ಹೃದಯ ಭಾಗದ ಕಾರ್ ಸ್ಟ್ರೀಟ್ ನಲ್ಲಿರುವ ಸಂಜೀವ ಶೆಟ್ಟಿ ಬಟ್ಟೆ ಮಳಿಗೆ ಹಾಗೂ ಮುಲ್ಕಿಯಲ್ಲಿ ಉದ್ಯಮಿ ನಾಗರಾಜ್ ಅವರ ಮನೆಯ ಮೇಲೆ ಇತ್ತಿಚೆಗೆ ಶೂಟೌಟ್ ನಡೆಸಲಾಗಿತ್ತು.

ಈ 2 ಪ್ರಕರಣ ಸೇರಿದಂತೆ ಕಿನ್ನಿಗೋಳಿಯ ಆಭರಣ ಮಳಿಗೆಗೆ ಸಜೀವ ಗುಂಡುಗಳನ್ನು ಎಸೆದ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಕೃತ್ಯಗಳನ್ನು ಭೂಗತ ಪಾತಕಿ ಕಲಿ ಯೋಗಿಶ್ ಗ್ಯಾಂಗ್ ಎಸಗಿರುವುದು ಈಗ ಬಯಲಾಗಿದೆ.

ಈ ಶೂಟೌಟ್ ಕೃತ್ಯಗಳನ್ನು ಭೂಗತ ಪಾತಕಿ ಕಲಿ ಯೋಗೀಶ್ ನ ಆದೇಶದಂತೆ ನಡೆಸಲಾಗಿತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಶೂಟೌಟ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೋಲಿಸರು ಕಲಿ ಯೋಗೀಶ್ ಗ್ಯಾಂಗ್ ನ ಇಬ್ಬರು ಸಹಚರನನ್ನು ಈಗ ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru CCB police have arrested two accused in connection with three shootouts carried out on the orders of underworld fugitive, Kali Yogish.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ