ಚಿತ್ರಗಳು : ಮಂಗಳೂರು ಕೋಟೆಕಾರ್ ಬಳಿ ಸರಣಿ ಅಪಘಾತ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 29 : ಮಂಗಳೂರಿನ ಕೋಟೆಕಾರ್ ಬಳಿ ಶುಕ್ರವಾರ ಬೆಳಗ್ಗೆ ಸರಣಿ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರು, ಬೈಕ್ ಮತ್ತು ಖಾಸಗಿ ಬಸ್ಸಿನ ನಡುವೆ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಬೈಕ್‌ನಲ್ಲಿದ್ದ ಮಾಡೂರು ಹರಿಬಡಾವಣೆಯ ನಿವಾಸಿ ನವೀನ್ (55) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. [ದಕ್ಷಿಣ ಕನ್ನಡದಲ್ಲಿ 6 ತಿಂಗಳಲ್ಲಿ 530 ಅಪಘಾತ]

ಮಂಗಳೂರಿನಿಂದ ಕೇರಳಕ್ಕೆ ತೆರೆಳುತ್ತಿದ ಟೊಯೋಟಾ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ವಿರುದ್ಧ ದಿಕ್ಕಿನ ರಸ್ತೆಯ ಮಧ್ಯಭಾಗಕ್ಕೆ ಬಂದು ನಿಂತಿದೆ. ಕಾರಿನಲ್ಲಿದ್ದವರು ಅಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.[ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ]

ಸರಣಿ ಅಪಘಾತದಲ್ಲಿ ಮೃತಪಟ್ಟ ನವೀನ್ ಪ್ರೆಸ್ಟೀಜ್ ಶಾಲೆಯಲ್ಲಿ, ಈಜು ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಸರಣಿ ಅಪಘಾತ, 1 ಸಾವು

ಸರಣಿ ಅಪಘಾತ, 1 ಸಾವು

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರ್ ಬಳಿ ಶುಕ್ರವಾರ ಬೆಳಗ್ಗೆ ಸರಣಿ ಅಪಘಾತ ನಡೆದಿದೆ, ಬೈಕ್ ಸವಾರ ಈ ಅಪಘಾತದಲ್ಲಿ ಗಾಯಗೊಂಡಿದ್ದು, ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀತರವಾಗಿದೆ.

ಅಪಘಾತದಲ್ಲಿ ಶಿಕ್ಷಕ ಸಾವು

ಅಪಘಾತದಲ್ಲಿ ಶಿಕ್ಷಕ ಸಾವು

ಸರಣಿ ಅಪಘಾತದಲ್ಲಿ ಮೃತಪಟ್ಟವರನ್ನು ಮಾಡೂರು ಹರಿಬಡಾವಣೆಯ ನಿವಾಸಿ ನವೀನ್ (55) ಎಂದು ಗುರುತಿಸಲಾಗಿದೆ. ನವೀನ್ ಪ್ರೆಸ್ಟೀಜ್ ಶಾಲೆಯಲ್ಲಿ, ಈಜು ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು.

ಅತಿವೇಗದಿಂದ ನುಗ್ಗಿದ ಕಾರು

ಅತಿವೇಗದಿಂದ ನುಗ್ಗಿದ ಕಾರು

ಮಂಗಳೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಟೊಯೋಟಾ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ, ಬಳಿಕ ವಿರುದ್ಧ ದಿಕ್ಕಿನ ರಸ್ತೆಯ ಮಧ್ಯಭಾಗಕ್ಕೆ ಬಂದು ನಿಂತಿದೆ. ಆಗ ಬೈಕ್‌ನಲ್ಲಿ ಬಂದ ನವೀನ್ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ನವೀನ್ ಹಿಂಬಂದಿ ಬರುತ್ತಿದ್ದ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಸ್ಥಳದಲ್ಲೇ ಮೃತಪಟ್ಟ ನವೀನ್

ಸ್ಥಳದಲ್ಲೇ ಮೃತಪಟ್ಟ ನವೀನ್

42 ನಂಬರ್‌ನ ರವಿರಾಜ್ ಬಸ್ಸು ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ನವೀನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರು ಅಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Serial accident at Kotekar under Ullal police station limits, Mangaluru on Friday July 29, 2016. Naveen Udaya Kumar (53)resident of Haribadavana near Madoor killed in accident.
Please Wait while comments are loading...