ಮಂಗಳೂರಲ್ಲಿ ಸೆಲ್ಫಿ ಬೂತ್, ಫೋಟೋ ಕ್ಲಿಕ್ಕಿಸಿ ಫಟಾಫಟ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು,ಮಾರ್ಚ್,12: ನಾವೀಗ ಸೆಲ್ಫಿ ಜಮಾನದಲ್ಲಿದ್ದೇವೆ, ಕೈಯಲ್ಲೊಂದು ಮೊಬೈಲ್ ಹಿಡಿದು ಯಾರೇ ಕಂಡರೂ, ಯಾವುದೇ ಕಂಡರೂ ಸೆಲ್ಫಿ ಎಂದು ಹೇಳಿ ಒಂದು ಕ್ಲಿಕ್ ಕ್ಲಿಕ್ಕಿಸಿಯೇ ಬಿಡ್ತೇವೆ, ಇಂತಹ ಸೆಲ್ಫೀ ಪ್ರಿಯರಿಗೊಂದು ಸಂತಸದ ಸುದ್ದಿ.

ಸೆಲ್ಫಿ ಪ್ರಿಯರಿಗಾಗಿ ಮಂಗಳೂರಿನ ಸ್ಟೆರ್ಲಿಂಗ್ ಚೇಂಬರ್ ನಲ್ಲಿ ನೂತನ ಸೆಲ್ಫಿ ಬೂತ್ ತೆರೆಯಲಾಗಿದ್ದು, ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷರಾದ ರಾಮ್ ದಾಸ್ ಕಾಮತ್ ಶನಿವಾರ ಉದ್ಘಾಟಿಸಿದರು.[ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ - ಮನಶ್ಶಾಸ್ತ್ರಜ್ಞರು]

Mangaluru

ಸೆಲ್ಫಿ ಬೂತ್ ಉದ್ಘಾಟಿಸಿ ಮಾತನಾಡಿದ ರಾಮ್ ದಾಸ್ ಕಾಮತ್ ಅವರು, 'ಸೆಲ್ಫಿ ಬೂತ್ ಅತ್ಯುತ್ತಮ ತಂತ್ರಜ್ಞಾನ ಹೊಂದಿದ ವ್ಯವಸ್ಥೆಯಾಗಿದ್ದು, ಸ್ಥಳದಲ್ಲೇ ಫೋಟೋ ಕಾಪಿ ನೀಡುವ ವ್ಯವಸ್ಥೆಯೂ ಇದರಲ್ಲಿದೆ. ಇದನ್ನು ವಿವಾಹ, ಕಾನ್ಫರೆನ್ಸ್ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಉಪಯೋಗಿಸಬಹುದಾಗಿದೆ' ಎಂದರು. [ಸೆಲ್ಫಿ ಹುಚ್ಚಿಗೆ ನಾಲ್ಕು ವೈದ್ಯರು ಬಲಿ]

ಅಲ್ಲದೇ ಈ ಸೆಲ್ಫಿ ಬೂತ್ ನಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಅಲ್ಲಿಂದಲೇ ಫೇಸ್ ಬುಕ್, ವಾಟ್ಸಾಪ್, ಹಾಗೂ ಮೈಲ್ ಮಾಡಿಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ಹನುಮಾನ್ ಗ್ರೂಪ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕ ಪಿ.ವಿಲಾಸ್ ನಾಯಕ್, ಅನ್ನು ಮಂಗಳೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Selfie booth to open in Mangaluru on Saturday, March 12th. This booth was inaugurated by Ramdas Kamath, Senior vice president of Infosys.
Please Wait while comments are loading...