ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡದಲ್ಲಿ ಡಿ.6ರಂದು ನಿಷೇಧಾಜ್ಞೆ ಜಾರಿ

|
Google Oneindia Kannada News

ಮಂಗಳೂರು, ಡಿಸೆಂಬರ್ 06 : ಬಾಬರಿ ಮಸೀದಿ ಧ್ವಂಸ ದಿನವಾದ ಡಿ.6ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಲಾಗಿದೆ. ಯಾವುದೇ ಸಭೆ, ಸಮಾರಂಭ ನಡೆಸಲು ಅವಕಾಶವಿಲ್ಲ.

ಎಸ್‌.ಡಿ.ಪಿ.ಐ ಮತ್ತು ಹಿಂದೂ ಸಂಘಟನೆಗಳು ಡಿ.6ರ ಬುಧವಾರ ಪ್ರತ್ಯೇಕ ಸಭೆಗಳನ್ನು ನಡೆಸಲು ಸಿದ್ಧತೆ ನಡೆಸಿವೆ. ಆದ್ದರಿಂದ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆಯ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಡಿಸೆಂಬರ್ 6 ಶೌರ್ಯ ದಿನವನ್ನಾಗಿ ಆಚರಿಸಲು ವಿಹಿಂಪ ಕರೆಡಿಸೆಂಬರ್ 6 ಶೌರ್ಯ ದಿನವನ್ನಾಗಿ ಆಚರಿಸಲು ವಿಹಿಂಪ ಕರೆ

Dakshina Kannada

ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಯಾವುದೇ ಸಭೆ, ಸಮಾರಂಭ, ಮೆರವಣಿಗೆ ಮಾಡದಂತೆ ಸೂಚನೆ ನೀಡಲಾಗಿದೆ.

ರಾಮ ಜನ್ಮಭೂಮಿ ವಿವಾದ:ಇಬ್ಬರು ಪರಿವೀಕ್ಷಕರ ನೇಮಕಕ್ಕೆ ಸುಪ್ರೀಂ ಸೂಚನೆರಾಮ ಜನ್ಮಭೂಮಿ ವಿವಾದ:ಇಬ್ಬರು ಪರಿವೀಕ್ಷಕರ ನೇಮಕಕ್ಕೆ ಸುಪ್ರೀಂ ಸೂಚನೆ

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರು ನಿಷೇಧಾಜ್ಞೆ ಹೇರಿ ಆದೇಶ ಹೊರಡಿಸಿದ್ದಾರೆ. ಎಸ್‌.ಡಿ.ಪಿ.ಐ ಬಂಟ್ವಾಳದ ಕೈಕಂಬದಲ್ಲಿ ಕರಾಳ ದಿನಾಚರಣೆ ಆಚರಣೆ ಮಾಡಲು ಸಿದ್ಧತೆ ನಡೆಸಿತ್ತು.

English summary
Section 144 was imposed in Dakshina Kannada district on December 6, 2017, after various organizations will observe Black Day to commemorate the demolition of Babri Masjid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X