1031ಕಿ.ಮೀ ಈಜಿ ಗಿನ್ನಿಸ್ ದಾಖಲೆ ಬರೆದ ವೀರರು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್. 09 : ನವೆಂಬರ್ 26, 2008ರ ಮುಂಬೈ ಭಯೋತ್ಫಾದಕರ ದಾಳಿಯಲ್ಲಿ ಮೃತ ಪಟ್ಟ ಯೊಧರ ಸ್ಮರಣಾರ್ಥವಾಗಿ 'ದೇಶಕ್ಕಾಗಿ ಈಜು 'ಎಂಬ ಧ್ಯೇಯದೊಂದಿಗೆ 6ಜನರ 'ಸೀ ಹ್ಯಾಕ್ ' ತಂಡ 1031ಕಿ.ಮೀ ಈಜುವ ಮೂಲಕ ಗಿನ್ನಿಸ್ ದಾಖಲೆ ಮಾಡಿದೆ.

ನ.26ರಂದು ಅರಬ್ಬಿ ಸಮುದ್ರದಲ್ಲಿ ಈಜುತ್ತಾ ಮುಂಬಯಿಂದ ಹೊರಟ ಯೋಧರ ಸಹಿತ 6ಜನರ 'ಸೀ ಹ್ಯಾಕ್ ' ತಂಡ ಮುಂಬಯಿ-ಮಂಗಳೂರು ನಡುವಿನ 1031 ಕಿಲೋ ಮೀಟರ್ ಈಜುವ ಮೂಲಕ ಈ ಹಿಂದಿನ ಗಿನ್ನಿಸ್ ದಾಖಲೆಯನ್ನು ಮುರಿದರು.

2009ರಲ್ಲಿ ಉತ್ತರ ಐರ್ಲೆಂಡಿನಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಸುಮಾರು 200 ಈಜುಗಾರರು 684.75 ಕಿ. ಮೀ ಈಜಿ ಗಿನ್ನಿಸ್ ದಾಖಲೆ ಮಾಡಿದ್ದರು. [1000ಕಿ.ಮೀ ಈಜಿ 2008ರ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಕೆ]

ಮುಂಬಯಿಂದ ಗುರುವಾರ ಸಂಜೆ ಗೋವಾ ಮೂಲಕ ಮಂಗಳೂರು ತಲುಪಿದ್ದಾರೆ. ಇಂಡಿಯನ್ ಸ್ವಿಮ್ಮಿಂಗ್ ಫೆಡರೇಶನ್ನಿನ ಅಧಿಕೃತ ವೀಕ್ಷಕರು ಈ ದಾಖಲೆಯನ್ನು ದೃಢೀಕರಿಸಿರುವುದರಿಂದ ಈ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಪಡೆಯಲಿದೆ ಎಂದು ಈಜು ತಂಡದ ನೇತೃತ್ವ ವಹಿಸಿದ್ದ ವಿಂಗ್ ಕಮಾಂಡರ್ ಪರಮವೀರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಈ ತಂಡ ನ. 26ರ 2008ರಲ್ಲಿ ಮುಂಬೈಯಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರದವರಿಗೆ ಗೌರವದ ಕಾಣಿಕೆ ಸಲ್ಲಿಸುವ ಸಲುವಾಗಿ ಇಂತಹ ದಾಖಲೆ ಸೃಷ್ಟಿಸುವಂತಹ ಸಾಹಸ ಕೈಗೊಂಡಿತ್ತು.

ನ. 26,2008ರ ದಾಳಿಯಲ್ಲಿ ಹುತಾತ್ಮರಿಗೆ ಅರ್ಪಣೆ

ನ. 26,2008ರ ದಾಳಿಯಲ್ಲಿ ಹುತಾತ್ಮರಿಗೆ ಅರ್ಪಣೆ

ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ಬಳಿಯಿಂದ ಸಮುದ್ರದ ಮೂಲಕ ಈಜಿ ಮಂಗಳೂರಿನ ತಣ್ಣೀರು ಬಾವಿ ತಲುಪಿದ ತಂಡ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ . ಈ ಸಾಧನೆಯನ್ನು ಮುಂಬಯಿಯಲ್ಲಿ ನ. 26,2008ರಲ್ಲಿ ನಡೆದ ದಾಳಿಯಲ್ಲಿ ಮೃತ ಪಟ್ಟ ಯೋಧರ,ನಾಗರಿಕರ ಕುಟುಂಬಗಳಿಗೆ ಅರ್ಪಿಸುವುದಾಗಿ ಸಿಂಗ್ ತಿಳಿಸಿದರು.

6ಜನರ ‘ಸೀ ಹ್ಯಾಕ್ ’ ತಂಡ

6ಜನರ ‘ಸೀ ಹ್ಯಾಕ್ ’ ತಂಡ

ಈ ತಂಡದಲ್ಲಿ ಪರಮ ವೀರ ಸಿಂಗ್,ಮುಂಬಯಿಯ ಪ್ರತಿನಿಧಿ ರಾಹುಲ್ ಚಿಪ್ಲೂಣ್ ಕರ್ ,ಮುಂಬೈ ಪೊಲೀಸ್ ಪ್ರತಿನಿಧಿ (ಎಎಸ್ಐ ವರ್ಲಿ)ಶ್ರೀಕಾಂತ ಪಲಾಂಡೆ, ಭಾರತೀಯ ವಾಯುಸೇನಾ ವಿಭಾಗದ ಪ್ರತಿನಿಧಿ ವಿಕ್ಕಿ ಟೋಕಸ್, ಮಾಜಿ ವಾಯು ಸೇನಾ ವಿಭಾಗದ ಪ್ರತಿನಿಧಿ ಗುಲ್ಲು ಪಿಲ್ಲಿ ನರಹರಿ, ಮುಂಬೈಯ ವಿದ್ಯಾರ್ಥಿ ಪ್ರತಿನಿಧಿ ಮಾನವ್ ಮೆಹ್ತಾ ಮೊದಲಾದವರ ತಂಡ 1031 ಕಿ.ಮೀ ಈಜಿ ದಾಖಲೆ ನಿರ್ಮಿಸಿದ್ದಾರೆ.

ಭಾರತೀಯ ಈಜುಗಾರರ ಒಕ್ಕೂಟದ ಪ್ರತಿನಿಧಿ

ಭಾರತೀಯ ಈಜುಗಾರರ ಒಕ್ಕೂಟದ ಪ್ರತಿನಿಧಿ

ಸ್ವತಂತ್ರ ವೀಕ್ಷಕರಾಗಿ ಭಾರತೀಯ ಈಜುಗಾರರ ಒಕ್ಕೂಟದ ಪ್ರತಿನಿಧಿ ಶೇಖರ್ ಕಾಳೆ,ಮಾರ್ಗದರ್ಶಕರಾಗಿ ಸುಭೋದ್ ಸುಳೆ ಜೊತೆಗಿದ್ದರು ಎಂದು ಪರಮವೀರ್ ಸಿಂಗ್ ಮಾಹಿತಿ ನೀಡಿದರು.

ಐಡಿಬಿಐ ಬ್ಯಾಂಕ್‌ ಪ್ರಾಯೋಜಕತ್ವ

ಐಡಿಬಿಐ ಬ್ಯಾಂಕ್‌ ಪ್ರಾಯೋಜಕತ್ವ

ಪ್ರಾಯೋಜಕತ್ವ ವಹಿಸಿದ ತಂಡದ ಐಡಿಬಿಐ ಬ್ಯಾಂಕ್‌ನ ಡಿಎಂಡಿ ಕೆ.ಪಿ.ನಾಯರ್ ಹಾಗೂ ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇತರೆ ಸಂಸ್ಥೆಗಳು ಸಾಥ್

ಇತರೆ ಸಂಸ್ಥೆಗಳು ಸಾಥ್

ಮುಂದೆಯೂ ಇಂತಹ ಉದ್ದೇಶಗಳಿಗಾಗಿ ನಮ್ಮ ಚಟುವಟಿಕೆ ಮುಂದುವರಿಯಲಿದೆ.ಈ ಕಾರ್ಯಕ್ರಮಕ್ಕೆ ಐಡಿಬಿಐ ಬ್ಯಾಂಕ್ ಪ್ರಾಯೋಜಕತ್ವ ವಹಿಸಿದೆ.ರೋಟರಿ ಸಂಸ್ಥೆ,ತಾಜ್ ಸಮೂಹ ಸಂಸ್ಥೆ ಕೈ ಜೋಡಿಸಿದೆ ಎಂದು ಪರಮವೀರ ಸಿಂಗ್ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
‘Sea Hawks’ -the Swim Team paying tribute to 26/11 victims which commenced from Gateway of India-Mumbai on 26 November at 6:20 pm swam 1031 km non-stop day and night in the Arabian Sea, and reached Tannirbhavi Beach- Kudla on 8 December at 3:56 pm.
Please Wait while comments are loading...