ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡಲ್ಕೊರೆತ : ಡೇಂಜರ್ ಝೋನ್ ನಲ್ಲಿ ಸೋಮೇಶ್ವರದ ಕಿನಾರೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು ಜುಲೈ 14 : ಕರ್ನಾಟಕದ ಕರಾವಳಿಯಲ್ಲಿ ಮುಂಗಾರು ತೀವ್ರವಾಗುತ್ತಿದ್ದಂತೆ ಸಮುದ್ರ ಕಿನಾರೆಯಲ್ಲಿ ಕಡಲ ಕೊರೆತದ ಭೀತಿ ಆವರಿಸತೊಡಗುತ್ತದೆ.

ಮಂಗಳೂರು ಸುತ್ತಮತ್ತ ಕಡಲ ತಡಿಯ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಹಾಗು ಬ್ರೇಕ್ ವಾಟರ್ ನಿಂದಾಗಿ ಕಳೆದ 2 ವರ್ಷಗಳಿಂದ ಕಡಲ ಕೊರೆತದ ಭೀತಿ ತಗ್ಗಿತ್ತು. ಆದರೆ ಈ ಬಾರಿ ಮಳೆಯ ಅಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ ಮಂಗಳೂರು ಹೊರವಲಯದಲ್ಲಿ ಮತ್ತೆ ಕಡಲ ಕೊರೆತ ಆರಂಭವಾಗಿದೆ.

ಚಿಕ್ಕಮಗಳೂರು ಮಳೆ ರೌಂಡ್ ಅಪ್, 35 ವರ್ಷದಲ್ಲೇ ಇಂಥ ಮಳೆ ಕಂಡಿಲ್ಲ!ಚಿಕ್ಕಮಗಳೂರು ಮಳೆ ರೌಂಡ್ ಅಪ್, 35 ವರ್ಷದಲ್ಲೇ ಇಂಥ ಮಳೆ ಕಂಡಿಲ್ಲ!

ಮಂಗಳೂರು ಹೊರವಲಯದ ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಕಡಲಕೊರೆತ ತೀವ್ರಗೊಂಡಿದೆ. ಈ ಹಿನ್ನಲೆಯಲ್ಲಿ ಸೋಮೇಶ್ವರ ಕಡಲ ಕಿನಾರೆಯನ್ನು ಜಿಲ್ಲಾಡಳಿತ ಡೇಂಜರ್ ಝೋನ್ ಎಂದು ಘೋಷಿಸಿದೆ.

Sea Erosion in Mangaluru beaches intensifies

ಉಳ್ಳಾಲದ ಕೈಕೊ, ಸುಭಾಷ್ ನಗರ ಸೇರಿದಂತೆ ಉಚ್ಚಿಲ ಪ್ರದೇಶದಲ್ಲಿ ಆಳೆತ್ತರದ ಕಲೆಗಳು ಏಳುತ್ತಿದ್ದು ಕಡಲು ರೌದ್ರಾವತಾರ ತಾಳಿದೆ. ಸಮುದ್ರ ತೀರದ ಹಲವಾರು ಮರಗಳನ್ನು ಸಮುದ್ರ ಈಗಾಗಲೆ ಆಪೋಷನ ತೆಗೆದುಕೊಂಡಿದೆ. ಕಲಡ ತೀರದಲ್ಲಿ ವಾಸಿಸುವ ನೂರಾರು ಕುಟುಂಬಗಳು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರಿ ಮಳೆಗೆ 4 ತಿಂಗಳಲ್ಲಿ ರಾಜ್ಯದಲ್ಲಿ ಸಾವಿಗೀಡಾದವರು ಎಷ್ಟು ಮಂದಿ?ಭಾರಿ ಮಳೆಗೆ 4 ತಿಂಗಳಲ್ಲಿ ರಾಜ್ಯದಲ್ಲಿ ಸಾವಿಗೀಡಾದವರು ಎಷ್ಟು ಮಂದಿ?

Sea Erosion in Mangaluru beaches intensifies

ಈ ಪ್ರದೇಶದಲ್ಲಿ ಮರಳು ಕರಗಿ ಸಮುದ್ರ ಪಾಲಾಗುತಿದ್ದು ಭೂ ಪ್ರದೇಶ ಸಮುದ್ರದ ಒಡಲು ಸೇರುತ್ತಿದೆ. ಉಲ್ಲಾಳದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಅಪಾಯದ ಅಂಚಿನಲ್ಲಿವೆ. ಸಂಜೆ ಆಗುತ್ತಿದ್ದಂತೆ ಭಾರೀ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Sea Erosion in Mangaluru beaches intensifies

ಕಳೆದೊಂದು ವಾರದಿಂದ ಸೋಮೇಶ್ವರ - ಉಚ್ಚಿಲದಲ್ಲಿ ಭಾರೀ ಕಡಲ್ಕೊರೆತ ಆರಂಭವಾಗಿದ್ದು ಈ ಕುರಿತು ಜಿಲ್ಲಾಡಳಿತ ಸೇರಿದಂತೆ ಸ್ಥಳಿಯಾಡಳಿತಕ್ಕೆ ಮಾಹಿತಿ ನೀಡಿದ್ದರು ಈ ವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Monsoon 2018 in Karnataka : Sea erosion aggravated at Someshwara, Uchilla areas of Ullala region. Numbers of coconut tress and compound wall have washed away by the surging waves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X