ಕಡಲ್ಕೊರೆತ : ಕಂಗಾಲಾದ ಸಮುದ್ರ ತೀರದ ಜನರು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 05 : ಸೋಮೇಶ್ವರ, ಉಚ್ಚೀಲದಂತೆ ಉಳ್ಳಾಲದಲ್ಲೂ ಈ ವರ್ಷ ಸಮುದ್ರ ರೌದ್ರಾವತಾರವನ್ನು ತೋರಿಸುತ್ತಿದೆ. ಕಿಲೆರಿಯಲ್ಲಿ ಸಮುದ್ರದ ಅಲೆಗಳಿಂದಾಗಿ ಜನರು ಆತಂಕಗೊಂಡಿದ್ದಾರೆ.

ಕಳೆದ 33 ವರ್ಷಗಳಿಂದ ಉಳ್ಳಾಲವನ್ನು ಕಡಲ್ಕೊರೆತ ಭಾದಿಸುತ್ತಿದೆ. ಹಲವಾರು ಮನೆಗಳು, ಬೋಟ್, ಜಟ್ಟಿಗಳು, ಗೋದಾಮುಗಳು ಸಮುದ್ರದ ಪಾಲಾಗಿವೆ. ಆದರೆ, ಕಳೆದ ಮೂರು ವರ್ಷಗಳಿಂದ ಉಳ್ಳಾಲ ಸಮುದ್ರ ಶಾಂತವಾಗಿತ್ತು. [ಭಾರೀ ಕಡಲ್ಕೊರೆತ, ಜನರಿಗೆ ಆತಂಕ]

rain

ಕಿಲೆರಿಯಾದಲ್ಲಿ ತುಂಬಿರುವ ನೀರನ್ನು ಹೊರಹಾಕಲು ಕಳೆದ ಮೂರು ದಿನಗಳಿಂದ ಅಗ್ನಿಶಾಮಕ ದಳದವರು ಪ್ರಯತ್ನ ನಡೆಸುತ್ತಿದ್ದಾರೆ. ಒಂದೆಡೆ ನೀರು ತೆಗೆಯುವ ಕಾರ್ಯ ಮುಂದುವರಿದರೆ ಇನ್ನೊಂದೆಡೆ ಮಳೆಯಿಂದಾಗಿ ಸಮುದ್ರ ನೀರು ಓಣಿಯಲ್ಲಿ ಶೇಖರಣೆಯಾಗುತ್ತಿದೆ. [ಕಡಲಕಿನಾರೆಯ ಕಥಾ ಪ್ರಸಂಗಗಳು]

ಕಿಲೆರಿಯಾದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ನೀರು ಶೇಖರಣೆಗೆ ಕಾರಣವಾಗಿದ್ದು, ಸ್ಥಳೀಯವಾಗಿ ಖಾಸಗಿ ಭೂಮಿಯಿಂದಾಗಿ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ಚರಂಡಿ ನಿರ್ಮಾಣ ಮಾಡಲು ಮನಸ್ಸು ಮಾಡಬೇಕಾಗಿದೆ.

ಕಿಲೆರಿಯಾದಲ್ಲಿ ಮನೆಗೆ ಬಡಿಯುವ ಬೃಹತ್ ಆಕಾರದ ಅಲೆಗಳ ನೀರು ಓಣಿಗಳಲ್ಲಿ ಹರಿದು ಮನೆಗಳ ಒಳಗೆ ನುಗ್ಗುತ್ತವೆ. ನೀರು ಸರಿಯಾಗಿ ಹರಿಯಲು ಬೇಕಾದ ಚರಂಡಿ ವ್ಯವಸ್ಥೆ ಇಲ್ಲದೆ ಎಲ್ಲಾ ರಸ್ತೆಗಳು ಕೆಸರು ಮಯವಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sea erosion continued in Ullal, Mangaluru. More than 10 houses were damaged.
Please Wait while comments are loading...