ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಯೋಧ್ಯೆಯಲ್ಲಿರುವುದು ಕಳ್ಳತನದಿಂದ ತಂದಿಟ್ಟ ರಾಮನ ವಿಗ್ರಹ: ಇಲಿಯಾಸ್ ತುಂಬೆ

|
Google Oneindia Kannada News

ಮಂಗಳೂರು, ಡಿಸೆಂಬರ್ 04:ಬಿಜೆಪಿ ಒಂದೆಡೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವೇದಿಕೆ ಸಿದ್ಧಪಡಿಸುತ್ತಿದೆ. ಆದರೆ ಇನ್ನೊಂದೆಡೆ ಎಸ್ ಡಿಪಿಐ ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕಾಗಿ ಹೋರಾಟ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ ಬೃಹತ್ ಸಭೆಯನ್ನು ಎಸ್ ಡಿಪಿಐ ಆಯೋಜಿಸಿತ್ತು.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಎಸ್ ಡಿಪಿಐ ಮುಖಂಡ‌ ಇಲಿಯಾಸ್ ತುಂಬೆ ಮಾತನಾಡಿ, ಅಯೋಧ್ಯೆಯಲ್ಲಿರುವುದು ಕಳ್ಳತನದಿಂದ ತಂದಿಟ್ಟ ರಾಮನ ವಿಗ್ರಹ. ಅದನ್ನು ಆ ಸ್ಥಳದಿಂದ ತೆರವುಗೊಳಿಸಬೇಕು. ಮಸೀದಿ ನಿರ್ಮಾಣಕ್ಕೂ ಮುನ್ನ ಮೂರ್ತಿಗಳನ್ನು ಕಿತ್ತೊಗೆಯಬೇಕು.

ಜನಾರ್ಧನ ಪೂಜಾರಿ ವಿರುದ್ಧ ತಿರುಗಿಬಿದ್ದ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟಜನಾರ್ಧನ ಪೂಜಾರಿ ವಿರುದ್ಧ ತಿರುಗಿಬಿದ್ದ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟ

ಕಳ್ಳತನ ಮಾಡಿದ ವಿಗ್ರಹಗಳನ್ನು ಮಸೀದಿಯಲ್ಲಿ ಇಟ್ಟಿದ್ದಾರೆ. ಹಿಂದೂ- ಮುಸ್ಲಿಮರ ನಡುವೆ ಬಿರುಕು ಮೂಡಿಸಲು ಬ್ರಿಟೀಷರು ರಾಮಮಂದಿರ ವಿಚಾರ ಪ್ರಾರಂಭಿಸಿದರು.ಅದಕ್ಕಾಗಿಯೇ ಸುಳ್ಳು ದಾಖಲೆ ಸೃಷ್ಟಿಸಲಾಗಿತ್ತು. ಹಿಂದೂ ಸಂಘಟನೆಗಳು ಮುಸ್ಲಿಮರ ಅಭಿಮಾನದ ಸಂಕೇತವಾದ ಬಾಬರಿ ಮಸೀದಿ ಧ್ವಂಸ ಮಾಡಿದರು ಎಂದು ಕಿಡಿಕಾರಿದರು.

SDPI leader Ilias Thumbe made controversial statement

ಒಂದು ಲಕ್ಷ ಕರಸೇವಕರೊಂದಿಗೆ ರಾಮಮಂದಿರ ನಿರ್ಮಾಣ ಮಾಡ್ತೇವೆ ಅಂತಾರೆ. ಆದರೆ ರಾಮ ಮಂದಿರ ನಿರ್ಮಾಣ ಸಾಧ್ಯವಿಲ್ಲ. ನಾವು ಹಿಂದೂ, ಮುಸ್ಲಿಂ, ಕ್ರೈಸ್ತರನ್ನು ಸೇರಿಸಿ ಮತ್ತೆ ಬಾಬರಿ ಮಸೀದಿ ನಿರ್ಮಾಣ ಮಾಡ್ತೇವೆ.

ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಬೇಡ: ಬಿ.ಜನಾರ್ಧನ ಪೂಜಾರಿರಾಮ ಮಂದಿರ ವಿಚಾರದಲ್ಲಿ ರಾಜಕೀಯ ಬೇಡ: ಬಿ.ಜನಾರ್ಧನ ಪೂಜಾರಿ

ಪ್ರಧಾನಿ ನರೇಂದ್ರ ಮೋದಿ ಈವರೆಗೆ ನೀಡಿದ ಭರವಸೆಗಳೆಲ್ಲ ಸುಳ್ಳೆಂದು ಸಾಬೀತಾದಾಗ ಈಗ ರಾಮಮಂದಿರ ವಿಚಾರ ತೆಗೆದುಕೊಂಡಿದ್ದಾರೆ. ಮುಸ್ಲಿಮರ ವಿರುದ್ಧ ಮಾತನಾಡುತ್ತಿದ್ದ ಪ್ರಭಾಕರ್ ಭಟ್ ಮೂಲೆ ಗುಂಪಾಗಿದ್ದಾರೆ. ಯಾವೆಲ್ಲಾ ಆರ್‌ಎಸ್‌ಎಸ್ ಶಾಖೆಯಲ್ಲಿ ಖಡ್ಗದ ತರಬೇತಿ ನೀಡುತ್ತಾರೆಂದು ತಿಳಿದಿದೆ. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.

'ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರೂ ವಿರೋಧ ವ್ಯಕ್ತಪಡಿಸುವುದಿಲ್ಲ''ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರೂ ವಿರೋಧ ವ್ಯಕ್ತಪಡಿಸುವುದಿಲ್ಲ'

SDPI leader Ilias Thumbe made controversial statement

ಬಾಬರಿ ಮಸೀದಿಯಿದ್ದ ಸ್ಥಳದಲ್ಲೇ ರಾಮಮಂದಿರ ನಿರ್ಮಾಣ ಮಾಡಹೊರಟಿದ್ದಾರೆ. ನಿಮಗೆ ರಾಮಮಂದಿರ ನಿರ್ಮಾಣಕ್ಕೆ ಜಮೀನು ಬೇಕಿದ್ದರೆ ಕೇಳಿ 5 ಎಕರೆ ನಾವೇ ಖರೀದಿಸಿ ಕೊಡ್ತೇವೆ. ಆದರೆ, ಮಸೀದಿಯಿರುವ ಯಾವ ಜಾಗದಲ್ಲೂ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಲ್ಲ ಎಂದು ಅವರು ಆಗ್ರಹಿಸಿದರು.

English summary
SDPI organised protest in Mangaluru on December 04. Addressing the protest SDPI leader Ilias Thumbe made controversial statement over Rama Mandir,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X