ಕಣ್ಣೂರಿನಲ್ಲಿ ಎಸ್ ಡಿಪಿಐ ಕಾರ್ಯಕರ್ತನ ಬರ್ಬರ ಹತ್ಯೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕಾಸರಗೋಡು, ಅಕ್ಟೋಬರ್. 14 : ಎಸ್ ಡಿಪಿಐ ಕಾರ್ಯಕರ್ತನೋರ್ವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಗುರುವಾರ ಕಣ್ಣೂರಿನಲ್ಲಿ ನಡೆದಿದೆ.

ಕಣ್ಣೂರು ನಿವಾಸಿಯಾಗಿರುವ ನೀರ್ಚಾಲ್ ಫಾರೂಕ್ (45) ಪುವಳ ಎಂಬಲ್ಲಿ ಅಡುಗೆ ಕಾರ್ಮಿಕರಾಗಿದ್ದರು. ಜತೆಗೆ ಎಸ್ ಡಿಪಿಐ ಬ್ರಾಂಚ್ ಕಾರ್ಯದರ್ಶಿಯಾಗಿದ್ದ ಫಾರುಖ್ ರನ್ನು ತಂಡವೊದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ ಎನ್ನಲಾಗಿದೆ. [ಕಣ್ಣೂರಿನಲ್ಲಿ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತನ ಕಗ್ಗೊಲೆ]

Farooq

ಗಂಭೀರ ಗಾಯಗೊಂಡ ಫಾರೂಕ್ ರನ್ನು ಚಿಕಿತ್ಸೆಗೆ ಕಣ್ಣೂರು ಎಕೆಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕೃತ್ಯಕ್ಕೆ ವೈಯಕ್ತಿಕ ದ್ವೇಷವೇ ಅಥವಾ ರಾಜಕೀಯ ಕಾರಣ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ. [ಬಿಜೆಪಿ ಕಾರ್ಯಕರ್ತನ ಹತ್ಯೆಗೆ ಸುಪಾರಿ ಕೊಟ್ಟಿದ್ದು ಸಿಎಂ']

ಈ ಘಟನೆಗೆ ಸಂಬಂಧಿಸಿದಂತೆ ಅಬ್ದುಲ್ ರೌಫ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ. ಫಾರೂಕ್ ರ ಹತ್ಯೆ ಹಿಂದೆ ಮುಸ್ಲಿಂ ಲೀಗ್ ಕಾರ್ಯಕರ್ತರ ಕೈವಾಡವಿರುವುದಾಗಿ ಆರೋಪಿಸಲಾಗಿದೆ. [ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತ ರಾಮಚಂದ್ರನ್ ಕೊಲೆ]

ಪಿಣರಾಯಿಯಲ್ಲಿ ಬಿಜೆಪಿ ಕಾರ್ಯಕರ್ತ ರೆಮಿತ್ ಅವರನ್ನು ದುಷ್ಕರ್ಮಿಗಳು ಹಾಡ ಹಗಲೇ ಕೊಚ್ಚಿ ಕೊಲೆ ಮಾಡಿದ್ದ ಬೆನ್ನಲ್ಲಿಯೇ ಈ ಘಟನೆ ನಡೆದಿದ್ದು ಜನರು ಬೆಚ್ಚಿ ಬಿದ್ದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
SDPI activist Farooq brutally murdered on the afternoon of Thursday, October 13.
Please Wait while comments are loading...