ಮಂಗಳೂರಿನ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 11: ಕ್ಷುಲ್ಲಕ ಕಾರಣಕ್ಕೆ ಯುವಜನಾಂಗ ಆತ್ಮಹತ್ಯೆ ಶರಣಾಗುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.

ಇದಕ್ಕೆ ಪೂರಕವೆಂಬಂತೆ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಂಗಳೂರಿನಲ್ಲಿ ನಡೆದಿದೆ.

SDM college student commits suicide in Mangaluru

ನಗರದ ಎಸ್ ಡಿ ಎಂ ಕಾಲೇಜಿನ ಬಿಬಿಎ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿ ಅಭಿಷೇಕ್ ಇಂದು (ಸೆ.11) ಅತ್ತಾವರ ಆರ್ ಬಿ ಲೇಔಟ್ ನಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಂದು ಮುಂಜಾನೆ ತನ್ನ ತಾಯಿ ಆಶಾಲತಾಗೆ ಹಣ ನೀಡುವಂತೆ ಅಭಿಷೇಕ್ ಬೇಡಿಕೆ ಇಟ್ಟಿದ್ದ ಈ ವೇಳೆ ತಾಯಿ ಹಣ ನೀಡದೆ ಬುದ್ಧಿವಾದ ಹೇಳಿದ್ದಾರೆ.

ನಂತರ ತನ್ನ ತಾಯಿಯನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಮತ್ತೆ ಮನೆಗೆ ಕರೆತಂದ ಬಳಿಕ ಅಭಿಷೇಕ್ ತನ್ನ ರೂಮಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ .

ವಿಷಯ ತಿಳಿದ ಬಳಿಕ ಅಭಿಷೇಕ್ ನನ್ನು ಸ್ಥಳಿಯರು ಆಸ್ಪತ್ರೆಗೆ ಕೊಂಡೊಯ್ದರೂ ಪ್ರಯೋಜನ ವಾಗಿಲ್ಲ. ಅಭಿಷೇಕ್ ತಂದೆ ಚಿದಾನಂದ್ ವಿದೇಶದಲ್ಲಿ ಕೆಲಸದಲ್ಲಿದ್ದಾರೆ.

ಅಭಿಷೇಕ್ ತನ್ನ ಸಹೋದರ ಅಶ್ವಿನ್ ಹಾಗು ತಾಯಿ ಯೊಂದಿದೆ ಮಂಗಳೂರಿನಲ್ಲಿ ನೆಲೆಸಿದ್ದರು. ಘಟನೆ ನಡೆದ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
18 year-old Abhishek C H, commits suicide by hanging himself in his resident of R B layout, Attavar-Mangaluru, on Sept 11. He studying in 1st Year Business Administration at SDM College Mangaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ