ಕಂಕನಾಡಿಯಲ್ಲಿ ಅನಾಥವಾಗಿ ಬಿದ್ದಿದ್ದ ವಿಜ್ಞಾನಿ ರಾಜೇಶ್ ರಕ್ಷಣೆ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಆತ ವಿಜ್ಞಾನಿ. ಮಕ್ಕಳಿಗೆ ವಿಜ್ಞಾನ ಕಲಿಸಿಕೊಡುವ 'ಮಿಶನ್ ಆವಿಷ್ಕಾರ್' ಹೆಸರು ರಾಜೇಶ್ ನಾರಾಯಣ ಅಗಳೆ. ಮಹಾರಾಷ್ಟ್ರದ ಕೊಲ್ಹಾಪುರ ಊರು. ಅಲ್ಲಿಯೇ ಎಂ.ಎಸ್ಸಿ ಎಲೆಕ್ಟ್ರಾನಿಕ್ಸ್ ಮುಗಿಸಿ, ಮಿಷನ್ ಆವಿಷ್ಕಾರ್ ಸೈನ್ಸ್ ಸೆಂಟರ್ ಸ್ಥಾಪಿಸಿದರು. ಅಂದಿನ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅವಿಷ್ಕಾರ ಸಂಸ್ಥೆಗೆ ಭೇಟಿ ನೀಡಿ ಮಕ್ಕಳ ಜತೆ ಸಂವಾದ ಕೂಡಾ ನಡೆಸಿ, ರಾಜೇಶ್ ಬೆನ್ನು ತಟ್ಟಿದ್ದರು.

ಕಳೆದ ವರ್ಷ, ಅಂದರೆ 2015ರ ಇಂತಹುದೇ ಸುಡುಬಿಸಿಲಿನ ಮೇ ತಿಂಗಳ ಕೆಟ್ಟದಿನ. ಕೊಲ್ಹಾಪುರದ ರೈಲು ನಿಲ್ದಾಣದಲ್ಲಿ ರಾಜೇಶ್‌ನ ಲ್ಯಾಪ್‌ಟಾಪ್ ಕಳವಾಯಿತು. ಅದರಲ್ಲಿ ಅಮೂಲ್ಯ ದಾಖಲೆಗಳಿದ್ದವು. ಇದೇ ನೋವಲ್ಲಿ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದರು. ಈಗ ಇವಷ್ಟೇ ರಾಜೇಶ್‌ಗೆ ಗೊತ್ತಿರುವುದು.

Scientist who turned pauper rescued by Snehalaya, Mangaluru

ಮಂಡೆಬಿಸಿ ಹೆಚ್ಚಾಗಿ ಹುಚ್ಚನಂತಾಗಿದ್ದ ರಾಜೇಶ್ ಮಂಗಳೂರಿಗೆ ಹೇಗೆ ಬಂದಿಳಿದರೋ, ಯಾವಾಗ ಬಂದಿಳಿದರೋ ಗೊತ್ತಿಲ್ಲ.ಎರಡು ತಿಂಗಳ ಹಿಂದೆ, 'ಕಂಕನಾಡಿಯಲ್ಲಿ ಹುಚ್ಚನೊಬ್ಬ ಆನಾರೋಗ್ಯಪೀಡಿತನಾಗಿ ಮಲಗಿದ್ದಾನೆ, ಬಂದು ನೋಡಿ' ಎಂದು ಸ್ನೇಹಾಲಯ ಟ್ರಸ್ಟ್‌ನ ಸ್ಥಾಪಕ ಜೋಸೆಫ್ ಕ್ರಾಸ್ತ ರಿಗೆ ಯಾರೋ ಕರೆ ಮಾಡಿದ್ದರು. ಯುವಕನನ್ನು ಕ್ರಾಸ್ತರು ತಕ್ಷಣ ಯೇನೆಪೋಯ ಆಸ್ಪತ್ರೆಗೆ ದಾಖಲಿಸಿದ್ದರು.

ಮನುಷ್ಯ ಎಲ್ಲಿಂದ ಎಲ್ಲಿಗೋ ಹೋಗಬಹುದು ಎಂಬುದಕ್ಕೆ ಉದಾಹರಣೆಯಾಗಿದೆ ಈ ಘಟನೆ.. ಶ್ರೇಷ್ಠ ವಿಜ್ಞಾನಿಯಾಗಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಶಹಬ್ಬಾಸ್'ಗಿರಿ ಪಡೆದಿದ್ದ ವ್ಯಕ್ತಿ ಮಾನಸಿಕ ವ್ಯಕ್ತಿಯಾಗಿ ಮಂಗಳೂರು ಕಂಕನಾಡಿಯ ರಸ್ತೆ ಬಳಿ ಮರದಡಿ ಮಲಗಿದ್ದರು..

Scientist who turned pauper rescued by Snehalaya, Mangaluru

ಮಂಜೇಶ್ವರ ಬಳಿಯ ಸ್ನೇಹಾಲಯ ಸೈಕೋ-ಸೋಶಿಯಲ್ ಪುನರ್ವಸತಿ ಕೇಂದ್ರ ನಡೆಸುತ್ತಿರುವ ಸ್ನೇಹಾಲಯ ಟ್ರಸ್ಟ್'ನ ಸ್ಥಾಪಕ ಜೋಸೆಫ್ ಕ್ರಾಸ್ತಾ ಅವರ ಮಾನವೀಯ ಆರೈಕೆ, ವೈದ್ಯಕೀಯ ಚಿಕಿತ್ಸೆಯಿಂದ ವಿಜ್ಞಾನಿಯ ನೆನಪು ಮರುಕಳಿಸಿದ್ದು, ತವರೂರನ್ನು ತಲುಪುವ ಹಂತದಲ್ಲಿದ್ದಾರೆ..

ಎರಡು ತಿಂಗಳ ಚಿಕಿತ್ಸೆ, ಆರೈಕೆಯಿಂದ ಚೇತರಿಸಿಕೊಂಡ ರಾಜೇಶ್ ಅವರಲ್ಲಿ ಮನೆ ವಿಳಾಸ, ವೃತ್ತಿ ಬಗ್ಗೆ ವಿಚಾರಿಸಿದಾಗ, ತಾನು ಔರಂಗಾಬಾದ್'ನ ಕೊಲ್ಲಾಪುರದ ಮಿಷನ್ ಆವಿಷ್ಕಾರ ಸೈನ್ಸ್ ಸೆಂಟರ್'ನ ಸ್ಥಾಪಕ ಮತ್ತು ನಿರ್ದೇಶಕನಾಗಿದ್ದು, ಈ ಸಂಸ್ಥೆ ಗೋವಾದಲ್ಲಿಯೂ ಇರುವುದಾಗಿ ಹೇಳಿದರು.. ತಾನು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡಿರುವುದಾಗಿ ತಿಳಿಸಿ, ಮನೆಯ ವಿಳಾಸ ನೀಡಿದ್ದರು..

Scientist who turned pauper rescued by Snehalaya, Mangaluru

ಅವರು ನೀಡಿದ ವಿಳಾಸ ಪರಿಶೀಲಿಸಿದಾಗ, ರಾಜೇಶ್ ಅವರು ನೀಡಿದ ಮಾಹಿತಿ ಎಲ್ಲವೂ ಸತ್ಯ ಹಾಗೂ ಅವರು ಮಹಾರಾಷ್ಟ್ರದ ಔರಂಗಾಬಾದ್'ನ ವಿಜ್ಞಾನಿ ಎಂದೂ ತಿಳಿದುಬಂತು.. ಅವರಿಗೆ ಇಬ್ಬರು ಸಹೋದರಿಯರು ಹಾಗೂ ಸಹೋದರನೊಬ್ಬ ಇರುವುದಾಗಿ ಗೊತ್ತಾಯಿತು..

ಮನೆಯವರನ್ನು ಸಂಪರ್ಕಿಸಿದಾಗ ರಾಜೇಶ್ ಅವರ ಹಳೆಯ ಹಾಗೂ ರಾಷ್ಟ್ರಪತಿ ಜತೆಗಿನ ವಿದ್ಯಾರ್ಥಿಗಳೊಂದಿಗಿನ ಮತ್ತು ರಾಷ್ಟ್ರಪತಿ ಬರೆದಿರುವ ಪತ್ರಗಳ ಫೋಟೋಗಳನ್ನು ವಾಟ್ಸ್ಯಾಪ್ ಮೂಲಕ ಕಳುಹಿಸಿಕೊಟ್ಟರು..

ಕಲಾಂ ಭೇಟಿ ನೀಡಿದ್ದರು: ಡಾ. ಕಲಾಂ ಅವರು 2010 ರ ಫೆಬ್ರವರಿಯಲ್ಲಿ ರಾಜೇಶ್ ಅವರ ಆವಿಷ್ಕಾರ್ ಸಂಸ್ಥೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು.. ಅವರ ಈ ಸ್ಥಿತಿ ಬಗ್ಗೆ ರಾಜೇಶ್ ಆವರಲ್ಲೇ ವಿಚಾರಿಸಿದಾಗ, ನನ್ನ ಅಮೂಲ್ಯ ದಾಖಲೆಗಳ ಲ್ಯಾಪ್-ಟಾಪ್ ಕಳೆದು ಹೋಗಿತ್ತು.. ಇದರಿಂದ ತಾನು ಮಾನಸಿಕ ಜರ್ಜರಿತನಾಗಿದ್ದೆ.. ಆದರೆ, ತಾನೆಂದೂ ಬಾರದ ಮಂಗಳೂರಿಗೆ ಹೇಗೆ ತಲುಪಿದೆ ಎಂಬ ಬಗ್ಗೆ ಗೊತ್ತಿಲ್ಲ ಎಂದರು..

Scientist who turned pauper rescued by Snehalaya, Mangaluru

ಅವರ ಆವಿಷ್ಕಾರ್ ವಿಜ್ಞಾನ ಕೇಂದ್ರದಲ್ಲಿ ಯಾರೋ ಒಬ್ಬರು ಮೋಸದಿಂದ ಅವರನ್ನು ಬದಲಾಯಿಸಿ ಆ ಸ್ಥಳದಲ್ಲಿ ಬೇರೊಬ್ಬರನ್ನು ನೇಮಿಸಿದ್ದರಿಂದ ಮನೆಗೆ ಬಂದು ತುಂಬಾ ಖಿನ್ನರಂತೆ ಕಾಣಿಸಿಕೊಂಡು, 2014 ರ ಡಿಸೆಂಬರ್'ನಿಂದ ನಾಪತ್ತೆಯಾಗಿದ್ದರು..ನಂತರ ಎಷ್ಟೇ ಹುಡುಕಾಡಿದರೂ ಸಿಕ್ಕಿಲ್ಲ, ಪೋಲೀಸ್ ಠಾಣೆಗೆ ದೂರು ನೀಡಿದರೂ ಅವರು ಕೇಸು ದಾಖಲಿಸದೆ ಸೂಕ್ತ ಸ್ಪಂದನ ಸಿಕ್ಕಿರಲಿಲ್ಲ..

2009 ರಲ್ಲಿ ಸ್ನೇಹಾಲಯ ಪುನರ್ವಸತಿ ಕೇಂದ್ರ ಸ್ಥಾಪಿಸಿರುವ ಜೋಸೆಫ್, ರಸ್ತೆಯಲ್ಲಿ ಬಿದ್ದಿರುವ ನೂರಾರು ಮಂದಿ ಮಾನಸಿಕ ಅಸ್ವಸ್ಥರನ್ನು ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.. ಎಷ್ಟೋ ಮಂದಿ ಚೇತರಿಸಿಕೊಂಡು ಮನೆ ಸೇರಿದ್ದಾರೆ.. ಈಗ ಒಟ್ಟು 80 ಮಂದಿ ಅವರ ಸಂಸ್ಥೆಯಲ್ಲಿ ಪುನರ್ವಸತಿ ಪಡೆದಿದ್ದಾರೆ..

ಇಂಥ ಅತ್ಯುತ್ತಮ ಕಾರ್ಯಗಳನ್ನು ಮಾಡಿ, ಬಹುತೇಕ ಮಂದಿಯನ್ನು ಗುಣ ಮುಖರನ್ನಾಗಿ ಮಾಡಿ, ಅವರವರ ಮನೆಗಳನ್ನು ಸೇರಿಸಿದ ನಮ್ಮ ಜೋಸೆಫ್ ಕ್ರಾಸ್ತಾ'ರನ್ನು ನಾವು ಅಭಿನಂದಿಸೋಣ.. ಅವರ ಈ ನಿಷ್ಕಕ್ಷಪಾತವಾದ ಕಾರ್ಯಕ್ಕೆ ದೇವರು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆಶೀರ್ವಾದವನ್ನು ಬೀರಲಿ.. ಹಾಗೂ ಅವರಂತಯೇ ನಾವು ಕೂಡಾ ಇತರರ ಕಷ್ಟ-ದುಃಖಗಳಿಗೆ ಸ್ಪಂದಿಸಿ, ಅವರಿಗೆ ಸಹಾಯವನ್ನು ಮಾಡಿ, ಒಳ್ಳೆತನದಿಂದ ಜೀವಿಸಲು ಮುಂದಾಗೋಣ.. ನಮಗೆಲ್ಲರಿಗೂ ಒಳ್ಳೆಯದಾಗಲಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Scientist Rajesh Narayan Agale who turned pauper and lying on the street near Kankanady was secured by Snehalaya Charitable Trust. Rajesh was claimed to be worked with Late Dr APJ Abdul Kalam with his Mission Avishkar Centre.
Please Wait while comments are loading...