ಮಂಗಳೂರಿಗೆ ಬಂದಿದೆ ಸೈನ್ಸ್ ಎಕ್ಸ್‌ಪ್ರೆಸ್ ರೈಲು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 28 : ಹವಾಮಾನ ವೈಪರೀತ್ಯದ ಪರಿಣಾಮಗಳು, ಸೂಕ್ಷ್ಮ ಮತ್ತು ಸ್ಥೂಲ ಬ್ರಹ್ಮಾಂಡ ದರ್ಶನ ನೀಡುವ 'ವೈಜ್ಞಾನಿಕ ರೈಲು' ಮಂಗಳೂರಿಗೆ ಬಂದಿದೆ. ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರು ಉಚಿತವಾಗಿ ಇದನ್ನು ವೀಕ್ಷಣೆ ಮಾಡಬಹುದಾಗಿದೆ.

ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಯ ಕುರಿತು ತಿಳಿಸುವ ಧ್ಯೇಯವಾಕ್ಯದೊಂದಿಗೆ ಹೊರಟಿರುವ ವೈಜ್ಞಾನಿಕ ರೈಲು (ಸೈನ್ಸ್ ಎಕ್ಸ್‌ಪ್ರೆಸ್ ಕ್ಲೈಮೆಂಟ್ ಆಕ್ಷನ್ ಸ್ಪೆಷಲ್) 2015-16ನೇ ಸಾಲಿನಲ್ಲಿ ಈಗಾಗಲೇ ದೇಶದ ಪ್ರಮುಖ 51 ನಗರಗಳಲ್ಲಿ ಪ್ರದರ್ಶನ ನೀಡಿದ್ದು ಮಾ. 28ರವರೆಗೆ ಮಂಗಳೂರಿನಲ್ಲಿರಲಿದೆ. [ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 'ಕಾಯಕಲ್ಪ' ಪ್ರಶಸ್ತಿ ಗರಿ]

science

ಪರಿಸರದ ಕುರಿತು ಜನರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ಈ ರೈಲಿನಲ್ಲಿ ಒಟ್ಟು 11 ಬೋಗಿಗಳಿವೆ. ಬರಹ-ಚಿತ್ರಗಳು, ಟಿವಿ ಸ್ಕ್ರೀನ್ ನಲ್ಲಿ ದೃಶ್ಯಗಳು, ಮಾಹಿತಿಗಳು, ಪ್ರಾತ್ಯಕ್ಷಿಕೆಗಳನ್ನು ರೈಲಿನಲ್ಲಿ ವೀಕ್ಷಿಸಬಹುದಾಗಿದೆ. ಮಾಹಿತಿಯನ್ನು ಸರಳವಾಗಿ ವಿವರಿಸಲು ಪ್ರತಿ ಬೋಗಿಯಲ್ಲಿಯೂ ಇಬ್ಬರು ಮಾಹಿತಿದಾರರಿದ್ದಾರೆ. [ಅಮೆರಿಕದಲ್ಲಿ ಶತಮಾನದ ದಾಖಲೆ ಬರೆದ ಹಿಮಮಾರುತ]

50 ಸಿಬ್ಬಂದಿಗಳ ವಿವರಣೆ : ವಿಕ್ರಮ ಎ. ಸಾರಾಬಾಯಿ ಕಮ್ಯುನಿಟಿ ಸೈನ್ಸ್ ಸೆಂಟರ್ ಸಿಬ್ಬಂದಿಗಳು ಈ ರೈಲಿನಲ್ಲಿ ಮಾಹಿತಿ ನೀಡುತ್ತಿದ್ದಾರೆ. 'ರೈಲಿನಲ್ಲಿ ಒಟ್ಟೂ 50 ಸಿಬ್ಬಂದಿಗಳಿದ್ದೇವೆ, ಊಟ ನಿದ್ದೆ, ಕೆಲಸ ಎಲ್ಲಾ ರೈಲಿನಲ್ಲಿಯೇ' ಎನ್ನುತ್ತಾರೆ ರಾಜಸ್ತಾನ್ ನ ದಿನೇಶ್ ಕುಮಾರ್ ಹಾಗೂ ಪಶ್ಚಿಮ ಬಂಗಾಳದ ಅಮಲ್ ಕುಂದ್. [ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಭಾಷಣದ ಹೈಲೈಟ್ಸ್]

science express

ವೈಜ್ಞಾನಿಕ ರೈಲಿನಲ್ಲಿ 16 ಬೋಗಿಗಳಿವೆ. ಇವುಗಳ ಪೈಕಿ 11 ಬೋಗಿಗಳಲ್ಲಿ ವಸ್ತು ಪ್ರದರ್ಶನವಿದ್ದರೆ, ಉಳಿದ ಬೋಗಿಗಳಲ್ಲಿ ನಮ್ಮ ವಸತಿ ಹಾಗೂ ಇತರ ವ್ಯವಸ್ಥೆಗಳಿವೆ. ರೈಲಿನ ಹೊರಗಡೆಯೂ ಪ್ರದರ್ಶನ ಕುರಿತು ಮೈಕ್‌ನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ.

ಈ ರೈಲು 30 ರಾಜ್ಯಗಳ 64 ಕಡೆಗಳಲ್ಲಿ ಪ್ರದರ್ಶನ ನೀಡಲಿದೆ. ಒಟ್ಟು 19,800 ಕಿ.ಮೀ. ಸಂಚಾರದ ಮೂಲಕ ಹವಾಮಾನ ಬದಲಾವಣೆಯ ಕುರಿತು ಸಂದೇಶ ನೀಡಲಿದೆ. ಈವರೆಗೆ ರೈಲು 1,22,000 ಕಿ.ಮೀ.ಗಳನ್ನು ಸಂಚರಿಸಿದ್ದು, 1.33 ಕೋಟಿಗೂ ಅಧಿಕ ವೀಕ್ಷಕರು ರೈಲಿನಲ್ಲಿ ಪ್ರದರ್ಶನ ವೀಕ್ಷಿಸಿದ್ದಾರೆ. 1,404 ದಿನಗಳಲ್ಲಿ ಈ ರೈಲು 391 ರೈಲ್ವೆ ಜಂಕ್ಷನ್‌ಗಳಲ್ಲಿ ವಾಸ್ತವ್ಯ ಹೂಡಿ ಪ್ರದರ್ಶನ ನೀಡಿದೆ.

mangaluru

ವಿದ್ಯಾರ್ಥಿಗಳ ದಂಡು : ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಮೊದಲ ದಿನವೇ ವಿದ್ಯಾರ್ಥಿಗಳ ಸಾರ್ವಜನಿಕರ ದಂಡು ಹರಿದುಬಂದಿತ್ತು. ಹಲವಾರು ಬಸ್‌ಗಳಲ್ಲಿ ಶಾಲಾ-ಕಾಲೇಜುಗಳಿಂದ ಮಕ್ಕಳನ್ನು ಕರೆ ತರಲಾಗಿತ್ತು. ಪ್ರದರ್ಶನ ವೀಕ್ಷಿಸಿದವರು ಇದೊಂದು ಅದ್ಭುತ ಪ್ರದರ್ಶನ ಪ್ರತಿಯೊಬ್ಬರು ವೀಕ್ಷಿಸಬೇಕಾದ ಅಪರೂಪದ ಪ್ರದರ್ಶನವಿದು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Science Express Climate Change Special Train remains at Mangaluru Junction till March 28, 2016. The Science Express Climate Action Special (SECAS) flagged off from Delhi on October 15, 2016, with a plan to halt at 64 locations in 20 States, covering 19,800 kilometres. Its focus would be on generating an interest and starting a dialogue with children about climate change.
Please Wait while comments are loading...