ಮಂಗಳೂರು: ಕಾಲೇಜು ಕ್ಯಾಂಪಸ್ ನಲ್ಲಿ ಅಂತರಿಕ್ಷ ವಾಹನ..!

By: ಶಂಶೀರ್ ಬುಡೋಳಿ
Subscribe to Oneindia Kannada

ಮಂಗಳೂರು, ಜನವರಿ 29: ಅಲ್ಲಿ ಅಂತರಿಕ್ಷ ವಾಹನ ಮಾದರಿಗಳಿದ್ದವು.. ಡ್ರೋನ್ ರೇಸ್ ಸೇರಿದಂತೆ ಇತರ ಹಲವು ಸ್ಪರ್ಧೆಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳ ಉತ್ಸಾಹ ಎಲ್ಲೆ ಮೀರಿತ್ತು.. ಒಟ್ಟಿನಲ್ಲಿ ಅಲ್ಲೊಂದು ಉತ್ಸಾಹಿ ಯುವ ಇಂಜಿನಿಯರುಗಳ ಬುದ್ದಿವಂತಿಕೆಯಿಂದ ತಯಾರಾದ ಅಂತರಿಕ್ಷ ವಾಹನಗಳ ಎಲ್ಲರ ಆಕರ್ಷಣೆಯಾಗಿತ್ತು.

ಹೌದು. ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಕ್ಯಾಂಪಸ್. ಜನವರಿ 27ರಿಂದ 28 ರವರೆಗೆ ರಾಷ್ಟ್ರೀಯ ಮಟ್ಟದ ಏರೋಫಿಲಿಯ 2017′ ಏರೋ ಮಾಡೆಲಿಂಗ್ ಸ್ಪರ್ಧೆಯನ್ನು ಇಲ್ಲಿ ಏರ್ಪಡಿಸಲಾಗಿತ್ತು. ವಿವಿಧ ರಾಜ್ಯಗಳ ಶಾಲಾ ಕಾಲೇಜುಗಳಿಂದ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು. [ಮಂಗಳೂರು: ಮದುವೆ ದಿನದಂದೇ ಮದುಮಗಳು ಸಾವು..!]

Science exhibition ‘Aerophilia 2017’ ended

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜೆ ಟಿ ರಾಧಾಕೃಷ್ಣ, "ಸಾಮಾನ್ಯವಾಗಿ ವಿದ್ಯಾರ್ಥಿಗಳು ವೈಮಾನಿಕ ಮತ್ತು ರೋಬೋಟಿಕ್ಸಿಗೆ ಅಷ್ಟೊಂದು ಮಹತ್ವ ನೀಡುವುದಿಲ್ಲ. ಇಲ್ಲಿ ಪ್ರಾರಂಭದ ಅಧ್ಯಯನದ ಸಂದರ್ಭ ವಿದ್ಯಾರ್ಥಿಗಳಿಗೆ ಸಾಕಷ್ಟು ತಾಳ್ಮೆ, ಸಹನೆ ಮತ್ತು ಏಕಾಗ್ರತೆ ಅತ್ಯಗತ್ಯವಾಗಿ ಬೇಕಾಗುತ್ತದೆ. ಒಂದು ಬಾರಿ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಂಡರೆ ಇದೊಂದು ಅತ್ಯತ್ತಮವಾದ ಮತ್ತು ಸವಾಲಿನ ವಿಷಯವಾಗಿದೆ," ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. [ಮಂಗಳೂರು: ವಿದ್ಯುತ್ ಅವಘಡ, ಮೂರು ಮಂದಿ ದಾರುಣ ಸಾವು]

ಏರ್ ಶೋವನ್ನು ದುಬೈ ಕಸ್ಟಮ್ಸ್ ಅಧಿಕಾರಿ ಅಬ್ದುಲ್ಲ ಘಸೆಮ್ ಸೇಲೆಂಝಾದ್ ಮೊರಾಫಿ ನಡೆಸಿಕೊಟ್ಟರು. ಏರ್ ಮೋಡೆಲಿಂಗ್ ಸಾಕಷ್ಟು ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಡ್ರೋನ್ ರೇಸ್ ಚಿತ್ತರಂಜಿಸಿತ್ತು. ಸಹ್ಯಾದ್ರಿ ಕ್ಯಾಂಪಸ್ಸಿನಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Science exhibition ‘Aerophilia 2017’ successfully happened in Sahyadri College Mangaluru.
Please Wait while comments are loading...