ಶಾಲಾ ಮಕ್ಕಳ ಹರಕೆಗೆ ಕೊಡ್ತಾನಂತೆ 100 ಪರ್ಸೆಂಟ್ ಫಲಿತಾಂಶ

Posted By:
Subscribe to Oneindia Kannada

ಮಂಗಳೂರು, ನವೆಂಬರ್ 29 : ಹಲವಾರು ವರ್ಷದಿಂದ ದೈವವೊಂದು ಸರ್ಕಾರಿ ಶಾಲೆಯನ್ನು ಕಾಯುತ್ತಿದೆ. ಶಾಲಾ ಮಕ್ಕಳ ಹರಕೆಗೆ ಕೊಡ್ತಾನಂತೆ 100 ಪರ್ಸೆಂಟ್ ಫಲಿತಾಂಶ .ಬೇಡಿದ ಇಷ್ಟಾರ್ಥವನ್ನ ಸಿದ್ಧಿಸಿ ತೋರುತ್ತಿದೆ ನೆಲ್ಲಿರಾಯ ದೈವದ ಪವಾಡ.

ಮಧ್ಯಪ್ರದೇಶ : ಹಾಜರಾತಿಗೆ ಎಸ್ ಸರ್, ಎಸ್ ಮೇಡಂ ಬದಲಿಗೆ "ಜೈ ಹಿಂದ್' ಎನ್ನಿ

ದೈವಗಳ ನೆಲೆವೀಡು ತುಳುನಾಡಿನಲ್ಲಿ ಪ್ರತಿ ಮನೆ,ಪ್ರತಿ ಗ್ರಾಮ , ಊರು, ಕೇರಿಗಳಲ್ಲಿ ದೈವಾರಾಧನೆ ನಡೆಯುತ್ತದೆ. ಆದರೆ ಶಾಲೆ ಯೊಂದರಲ್ಲಿ ಶಾಲಾ ಮಕ್ಕಳಿಂದಲೇ ದೈವಾರಾಧನೆ ವಿಶೇಷ ವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶಾಲೆಯ ಆವರಣದಲ್ಲೇ ದೈವಾರಾಧನೆ ನಡೆಯುತ್ತದೆ. ಶಾಲಾ ಮಕ್ಕಳೇ ಈ ದೈವಕ್ಕೆ ಪೂಜೆ ಪುರಸ್ಕಾರ ನೆರವೇರಿಸುತ್ತಾರೆ.

School children's perfome Daivaradhane in Bantwal

ಈ ದೈವದ ಬಗ್ಗೆ ಶಾಲಾ ಮಕ್ಕಳಿಗೆ ಮಾತ್ರವಲ್ಲ ಊರ ಜನರಿಗೂ ಭಾರಿ ನಂಬಿಕೆ. ಆ ದೈವದ ಇಚ್ಚೆಯಂತೆಯೇ ಅಲ್ಲಿ ಎಲ್ಲವೂ ನಡೆಯೋದು,ತಪ್ಪಿದರೆ ಶಿಕ್ಷಿಸುವ,ನಂಬಿ ಬಂದರೆ ವರ ಕೊಡುವ ದೈವ ಆ ಶಾಲೆಯ ರಕ್ಷಕ ಎಂದು ಹೇಳಲಾಗುತ್ತದೆ .

ಶಾಲಾ ಮಕ್ಕಳ ಭಾರದ ಬ್ಯಾಗ್ ಸಮಸ್ಯೆಗೆ ಪರಿಹಾರ ಸಿಕ್ಕೀತೆ?

ಈ ಶಾಲೆಯ ಶೇಕಡಾ 100% ರಷ್ಟು ಫಲಿತಾಂಶ ದಾಖಲಿಸಲು ಈ ದೈವ ಕಾರಣ ಎಂದು ಹೇಳಲಾಗುತ್ತದೆ. ಶಾಲೆಯ ವಿದ್ಯಾರ್ಥಿಗಳಿಂದಲೇ ಆರಾಧಿಸಲ್ಪಡುವ ಆ ದೈವಕ್ಕೆ ಶಾಲಾ ವಾರ್ಷಿಕೋತ್ಸವದಂದೇ ನೇಮೋತ್ಸವ ವನ್ನೂ ನಡೆಸಲಾಗುತ್ತದೆ.

School children's perfome Daivaradhane in Bantwal

ಈ ಶಾಲೆ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಯಿಲಾ ಎಂಬಲ್ಲಿ. ಈ ಕೊಯಿಲದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲೇ ರಕ್ತೇಶ್ವರಿಯ ಇನ್ನೊಂದು ಸ್ವರೂಪವಾದ ನೆಲ್ಲಿರಾಯ ದೈವದ ಸ್ಥಾನವಿದ್ದು ಅಲ್ಲಿ ಈ ದೈವದ ಆರಾಧನೆ ನಡೆಯುತ್ತಿದೆ.

ಸರ್ಕಾರಿ ಶಾಲೆಯಲ್ಲೇ ಕಡ್ಡಾಯ ಕಲಿಕೆ : ಮಸೂದೆ ಮುಂದಕ್ಕೆ

25 ವರ್ಷದ ಹಿಂದೆ ದಾನವಾಗಿ ಸಿಕ್ಕಿದ್ದ ಈ ಜಾಗದಲ್ಲಿ ಶಾಲೆ ನಿರ್ಮಾಣ ಮಾಡಲು ಊರಿನವರು ತಯಾರಿ ನಡಸಿದ್ದರು.ಅಂದು ಜಾಗ ಸಮತಟ್ಟು ಮಾಡುವಾಗ ಸಂದರ್ಭದಲ್ಲಿ ಅಲ್ಲಿಲ್ಲ ನಾಗರಹಾವುಗಳು ಕಾಣಿಸಿ ಕೊಂಡಿದ್ದವು, ಮಾತ್ರವಲ್ಲ ಹತ್ತು ಹಲವು ಅಡೆತಡೆಗಳು ಆಗಿದ್ದವು.

School children's perfome Daivaradhane in Bantwal

ಈ ವಿಚಾರದಲ್ಲಿ ಊರ ಹಿರಿಯರು ಜೋತಿಷಿಗಳಲ್ಲಿ ಕೇಳಿದಾಗ ಆ ಜಾಗದಲ್ಲಿ ನೆಲ್ಲಿರಾಯ ದೈವಕ್ಕೆ ಸೇರಿದ್ದಾಗಿದೆ ಎಂದು ತಿಳಿದುಬಂತು. ಈ ಹಿನ್ನೆಲೆಯಲ್ಲಿ ಅದನ್ನು ಆರಾಧನೆ ಮಾಡಬೇಕೆಂಬ ಸೂಚನೆ ಸಿಕ್ಕಿತ್ತು. ಹೀಗಾಗಿ ಅಂದಿನ ಆಡಳಿತ ಮಂಡಳಿ ನೆಲ್ಲಿರಾಯ ದೈವವನ್ನು ಇದೇ ಜಾಗದಲ್ಲಿ ಪ್ರತಿಷ್ಟಾಪಿಸಿದರು. ಅಂದಿನಿಂದ ಇಂದಿನವರೆಗೂ ನೆಲ್ಲಿರಾಯ ದೈವದ ಆರಾಧನೆ ಈ ಶಾಲೆಯನ್ನು ನಡೆಯುತ್ತಿದೆ.

ಶಾಲೆಯ ಆವರಣದಲ್ಲೇ ಇರುವ ಈ ದೈವದ ಆರಾಧನೆ ಮಾಡುವುದಾದರೂ ಯಾರು ಎಂಬ ಪ್ರಶ್ನೆ ಎದುರಾದಾಗ ಆ ಶಾಲೆಯ ಮಕ್ಕಳೆ ನೆಲ್ಲಿರಾಯ ದೈವದ ಸೇವೆ,ಪೂಜೆ ಪುನಸ್ಕಾರಗಳನ್ನು ಮಾಡಬೇಕೆಂದು ನಿರ್ಣಯಿಸಲಾಯಿತು. ಈ ಹಿನ್ನೆಲೆಯಲ್ಲಿ ಕಳೆದ 25 ವರ್ಷಗಳಿಂದ ಶಾಲೆಯ ವಿದ್ಯಾರ್ಥಿಗಳು ಪ್ರತಿ ದಿನ ದೈವಕ್ಕೆ ದೀಪ ಇಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ.

School children's perfome Daivaradhane in Bantwal

ಈ ಶಾಲೆಯಲ್ಲಿರುವ ಎಲ್ಲಾ ಜಾತಿ ಧರ್ಮದ,ಅದರಲ್ಲೂ ಹಿಂದೂ ಮುಸ್ಲಿಂ ಕ್ರೈಸ್ತ ವಿದ್ಯಾರ್ಥಿಗಳೂ ನೆಲ್ಲಿರಾಯ ದೈವಕ್ಕೆ ದೀಪ ಇಡೋಡು ಪೂಜೆ ಸಲ್ಲಿಸೋದು ಇಲ್ಲಿಯ ವಿಶೇಷ. ಮಾತ್ರವಲ್ಲ ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪ್ರತಿ ದಿನ ಶಾಲೆಗೆ ಆಗಮಿಸಿ ಮೊದಲು ನೆಲ್ಲಿರಾಯ ದೈವಕ್ಕೆ ಪ್ರಾರ್ಥನೆ ಸಲ್ಲಿಸಿಯೇ ಶಾಲೆಯೊಳಗೆ ಪ್ರವೇಶಿಸುತ್ತಾರೆ.

ಪರೀಕ್ಷಾ ಸಂದರ್ಭದಲ್ಲಂತೂ ವಿದ್ಯಾರ್ಥಿಗಳು ನೆಲ್ಲಿರಾಯ ದೈವರ ಮೊರೆ ಹೋಗುತ್ತಾ ಹೆಚ್ಚಿನ ಅಂಕಗಳನ್ನು ನೀಡೆಂದು ಬೇಡುತ್ತಾರೆ.ಅದರಂತೆ ಕಳೆದ ಹತ್ತಾರು ವರ್ಷಗಳಿಂದಲೂ ಈ ಸರ್ಕಾರಿ ಶಾಲೆ ಶೇಕಡಾ 100 ಫಲಿತಾಂಶಗಳನ್ನು ಪಡೆಯುತ್ತಿದೆ.ಇದಕ್ಕೆಲ್ಲಾ ತಮ್ಮ ಆರಾಧ್ಯ ದೈವ ನೆಲ್ಲಿರಾಯನೇ ಕಾರಣ ಎಂದು ನಂಬಲಾಗಿದೆ.

School children's perfome Daivaradhane in Bantwal

ಈ ಶಾಲೆಯ ವಾರ್ಷಿಕೋತ್ಸವದಂದು ಈ ನೆಲ್ಲಿರಾಯ ದೈವಕ್ಕೂ ವಾರ್ಷಿಕ ಸೇವೆ ನಡೆಯುತ್ತದೆ. ವಿದ್ಯಾರ್ಥಿಗಳ ನೇತೃತ್ವದಲ್ಲೇ ನಡೆಯುವ ಈ ವಾರ್ಷಿಕ ಸೇವೆಗೆ ಅರ್ಚಕರನ್ನೂ ಕರೆಸಿ ಕ್ರಮಬದ್ದವಾಗಿ ಸೇವೆ ಸಲ್ಲಿಸಲಾಗುತ್ತದೆ.ಜೊತೆಗೆ ವಿದ್ಯಾರ್ಥಿಗಳೆಲ್ಲಾ ವಾರ್ಷಿಕ ಸೇವೆಗೆ ಬೇಕಾದ ಹೂ,ಹಣ್ಣು,ಎಳನೀರು ಸೇರಿದಂತೆ ಎಲ್ಲಾ ವಸ್ತುಗಳನ್ನು ಸೇವಾರೂಪದಲ್ಲಿ ತರುತ್ತಾರೆ.ಹೀಗೆ ವಿದ್ಯಾರ್ಥಿಗಳು, ಶಿಕ್ಷಕರು ಊರಿನವರು ಸೇವೆ ವಾರ್ಷಿಕ ಸೇವೆಯನ್ನು ಸಲ್ಲಿಸಿ ನೆಲ್ಲಿರಾಯ ದೈವದ ಕೃಪೆಗೆ ಪಾತ್ರರಾಗುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The school children perform Daivaradhane and worship Nelli Raya Daiva in Bantwal of DK district . There is a great belief that to get 100% result this Daiva is responsible .this belief is not only in the school children but the people of the town.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ