ಮೂಡಬಿದಿರೆಯ ಎಸ್ ಬಿಐ ಎಟಿಎಂನಲ್ಲಿ ಅಗ್ನಿ ಅವಘಡ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ. 01 : ಮೂಡಬಿದಿರೆ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಮತ್ತು ಪುತ್ತಿಗೆಯಲ್ಲಿ ಮೋನಪ್ಪ ಪೂಜಾರಿ ಎನ್ನುವರ ಮನೆಯ ಹಟ್ಟಿಯಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ.

ಇದರಿಂದ ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿದೆ. ಮೂಡುಬಿದಿರೆ ಪೇಟೆಯಲ್ಲಿ ಮುಖ್ಯರಸ್ತೆಯ ಪಕ್ಕದಲ್ಲೇ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎರಡು ಎಟಿಎಂ ಯಂತ್ರಗಳು ಹಾಗೂ ಎಸಿ ಹಾನಿಗೀಡಾಗಿವೆ.

SBI ATM catches fire in Moodbidri machines burn down completely

ಈ ಸಂದರ್ಭ ಸ್ಥಳೀಯರು ಸ್ಥಳಕ್ಕಾಗಮಿಸಿ ಸಮಯ ಪ್ರಜ್ಞೆಯಿಂದ ಬೆಂಕಿಯನ್ನು ನಂದಿಸಿರುವುದರಿಂದ ಭಾರಿ ಪ್ರಮಾಣದ ದುರಂತ ಸಂಭವಿಸುವುದು ತಪ್ಪಿದಂತಾಗಿದೆ.

SBI ATM catches fire in Moodbidri machines burn down completely

ಬೆಂಕಿ ಆಕಸ್ಮಿಕದಿಂದಾಗಿ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಕಡದಲ್ಲಿರುವ ಮೋನಪ್ಪ ಪೂಜಾರಿ ಎಂಬವರ ಮನೆಯ ಹಟ್ಟಿ ಭಸ್ಮವಾಗಿದೆ. ಸ್ಥಳೀಯರು ಹಟ್ಟಿಯಲ್ಲಿದ್ದ ದನಗಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The ATM of State Bank of India Moodbidri suddenly caught fire on Tuesday January 31. Both the machines located inside the centre got burnt down in this fire.
Please Wait while comments are loading...