ಜಲ್ಲಿಕಟ್ಟು ನಂತರ ಕಂಬಳಕ್ಕೆ ಕೇಂದ್ರ ಸರಕಾರದ ಪರೋಕ್ಷ ಸಮ್ಮತಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 24 : "ಜಲ್ಲಿಕಟ್ಟು ವಿರುದ್ಧದ ನಿಷೇಧ ತೆರವುಗೊಳಿಸಲು ತಮಿಳುನಾಡು ಸರ್ಕಾರ ಕೈಗೊಂಡ ಕ್ರಮಗಳ ರೀತಿಯಲ್ಲೇ ಕರ್ನಾಟಕವೂ ಕಂಬಳ ವಿರುದ್ಧ ತಡೆ ತೆರವುಗೊಳಿಸಲು ಪ್ರಯತ್ನ ಮಾಡಿದರೆ, ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಲಿದೆ" ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಭರವಸೆ ನೀಡಿದ್ದಾರೆ.

ಮಂಗಳೂರಿಗೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. "ಸ್ಥಳೀಯ ಜನಪದ ಆಚರಣೆಗಳ ಬಗ್ಗೆ ಕೇಂದ್ರ ಸರಕಾರ ಗೌರವ ಹೊಂದಿದೆ. ಕರ್ನಾಟಕದ ಕಂಬಳದ ಬಗ್ಗೆ ಮೋದಿ ಸರಕಾರ ಗೌರವ ಇರಿಸಿದೆ. ಈ ಬಗ್ಗೆ ರಾಜ್ಯ ಸರಕಾರ ಕೈಗೊಳ್ಳುವ ನಿರ್ಣಯಕ್ಕೆ ಕೇಂದ್ರ ಸರಕಾರ ಮುಕ್ತವಾಗಿ ಸ್ಪಂದಿಸಲಿದೆ," ಎಂದು ಅವರು ಹೇಳಿದರು. [ಕಂಬಳ ಎಂದರೇನು? ಕಂಬಳ ನಮಗೇಕೆ ಬೇಕು?]

Save Kambala: Central government will respond – Ravi Shankar Prasad

ನಿಷೇಧ ತೆರವಿಗೆ ಬಿಜೆಪಿ ನಾಯಕರಿಂದ ಮನವಿ

ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಬಂದಿದ್ದ ಕೇಂದ್ರ ಕಾನೂನು ಸಚಿವರನ್ನು ಬಿಜೆಪಿ ನಿಯೋಗ ಭೇಟಿಯಾಗಿ ಕಂಬಳದ ಮೇಲಿನ ನಿಷೇಧ ತೆರವುಗೊಳಿಸುವಂತೆ ಮನವಿ ಸಲ್ಲಿಸಿತು.

ಮನವಿಯಲ್ಲಿ, "ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ," ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಭಾರಿ ಪ್ರತಿಭಟನೆಗೆ ಸಿದ್ಧತೆ

"ಜನವರಿ 27ರಂದು ಮಂಗಳೂರಿನಲ್ಲಿ ಮಾನವ ಸರಪಳಿ ಮತ್ತು ಜನವರಿ 28ರಂದು ಮೂಡಬಿದ್ರೆಯಲ್ಲಿ ಕೋಣಗಳೊಂದಿಗೆ ಮತ್ತು ಕೋಣ ಓಡಿಸುವವರೊಂದಿಗೆ ಕಂಬಳ ಪ್ರೇಮಿಗಳು ಸಾಂಕೇತಿಕ ಪ್ರತಿಭಟನೆ ನಡೆಸುತ್ತೇವೆ," ಎಂದು ಬಂಗಾಡಿ-ಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ ಗೌಡ ಹೇಳಿದ್ದಾರೆ. ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಪ್ರತಿಭಟನೆಯ ನಂತರ ಜನವರಿ 30ರ ಕೋರ್ಟ್ ಆದೇಶ ನೋಡಿ ಮುಂದಿನ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಹಲವು ಕಂಬಳ ಸಮಿತಿಯ ಅಧ್ಯಕ್ಷರುಗಳು ಭಾಗಿಯಾಗಿದ್ದರು. [ಕಂಬಳ ಉಳಿಸಲು ಮಂಗಳೂರಲ್ಲಿ ಬೃಹತ್ ಹೋರಾಟಕ್ಕೆ ನಿರ್ಧಾರ!]

ದಿನೇ ದಿನೇ ಕಂಬಳ ಉಳಿಸಿ ಹೋರಾಟ ಬಲಗೊಳ್ಳುತ್ತಿದ್ದು, ಮೂಡುಬಿದಿರೆಯಲ್ಲಿ ಜನವರಿ 28 ರಂದು ಭಾರಿ ಪ್ರತಿಭಟನೆ ನಡೆಯುವ ನಿರೀಕ್ಷೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Central government will respond to Kambala if state government support like Tamil Nadu says central minister Ravi Shankar prasad at Mangaluru.
Please Wait while comments are loading...