ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ನೀರೆಯರಿಗಾಗಿ ಸೀರೆಯಲ್ಲೇ ಓಡುವ ಸ್ಪರ್ಧೆ!

|
Google Oneindia Kannada News

ಮಂಗಳೂರು, ಜುಲೈ 27: ಇತ್ತೀಚಿನ ದಿನಗಳಲ್ಲಿ ದೇಶದಲ್ಲೆಲ್ಲಾ ಫಿಟ್ ನೆಸ್ ನದ್ದೇ ಹವಾ. ಎಲ್ಲರೂ ಫಿಟ್ ನೆಸ್ ಕಾನ್ಶಿಯಸ್ ಆಗಿ ಬಿಟ್ಟಿದ್ದಾರೆ. ಪ್ರಧಾನಿ ಮೋದಿ ಆದಿಯಾಗಿ ಸಚಿವರು, ಕ್ರೀಡಾಪಟುಗಳು, ಚಿತ್ರ ತಾರೆಯರು ಫಿಟ್ ನೆಸ್ ಚಾಲೆಂಜ್ ಹಾಕುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.

ಆದರೆ ಸಾಮಾನ್ಯವಾಗಿ ಸೀರೆಯುಟ್ಟು ಮನೆಗೆಲಸದಲ್ಲೇ ತಲ್ಲೀನರಾಗಿರುವ ಮಹಿಳೆಯರಲ್ಲಿ ಫಿಟ್ ನೆಸ್ ಬಗ್ಗೆ ಜಾಗೃತಿ ಮೂಡುವುದಾದರೂ ಯಾವಾಗ? ಈ ಹಿನ್ನೆಲೆಯಲ್ಲಿ ಆಗಸ್ಟ್ 12 ರಂದು ಮಂಗಳೂರಿನಲ್ಲಿ ಸೀರೆಯುಟ್ಟ ನಾರಿಯರಿಗಾಗಿ ಓಟ - ನಡಿಗೆ ಹಮ್ಮಿಕೊಳ್ಳಲಾಗಿದೆ. ಮಂಗಳೂರು ಮಹಿಳಾ ರನ್ ತಂಡ ನಗರದಲ್ಲಿ ಮೊದಲ ಬಾರಿಗೆ ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಸೀರೆಯ ನಾರಿಯರಿಗೆ ಜಾಗಿಂಗ್ , ವಾಕಿಂಗ್ ಸ್ಥೈರ್ಯ ತುಂಬಲು ಓಟ ಹಮ್ಮಿಕೊಳ್ಳಲಾಗಿದೆ.

ಏರ್‌ಪೋರ್ಟ್ ರನ್‌ವೇ ಮೇಲೆ ಮ್ಯಾರಥಾನ್: ಭಾರತದಲ್ಲಿ ಮೊದಲುಏರ್‌ಪೋರ್ಟ್ ರನ್‌ವೇ ಮೇಲೆ ಮ್ಯಾರಥಾನ್: ಭಾರತದಲ್ಲಿ ಮೊದಲು

ಈಗ ಮಹಿಳೆಯರು ಕೂಡ ಪುರುಷರ ರೀತಿ ದೈಹಿಕ ಫಿಟ್ ನೆಸ್ ಕಾಪಾಡಿಕೊಳ್ಳಲು ಜಾಂಗಿಂಗ್, ವಾಕಿಂಗ್ ಮಾಡುತ್ತಿದ್ದಾರೆ. ಆದರೆ ಜಾಂಗಿಂಗ್ ಮತ್ತು ವಾಂಕಿಂಗ್ ತೆರಳುವ ಮಹಿಳೆಯರು ಆಧುನಿಕ ಟ್ರ್ಯಾಕ್ ಸೂಟ್, ಟಿ ಶರ್ಟ್ ಧರಿಸಿ ತೆರಳುತ್ತಾರೆ.

Saree Run event organized in Mangaluru

ಆದರೆ ಸೀರೆಯನ್ನು ಧರಿಸುವ ಮಹಿಳೆಯರು ಮಾತ್ರ ಇದೆಲ್ಲದರಿಂದ ವಿಮಖರಾಗಿದ್ದು, ಆಧುನಿಕ ದಿರಿಸು ಇಲ್ಲದಿದ್ದರೆ ಜಾಗಿಂಗ್ ತೆರಳಿದರೆ ಯಾರಾದರೂ ಕೀಳಾಗಿ ಭಾವಿಸಬಹುದು ಎನ್ನುವ ಮುಜುಗರವೂ ಮಹಿಳೆಯರಲ್ಲಿ ಇರುತ್ತದೆ. ಹೀಗಾಗಿ ಆನೇಕ ಮಹಿಳೆಯರು ಇಂತಹ ಓಟ ಅಥವಾ ನಡಿಗೆಯತ್ತ ಆಸಕ್ತಿ ತೋರುವುದಿಲ್ಲ.

ಇಂತಹ ಮಹಿಳೆಯರಿಗಾಗಿಯೇ ಮಂಗಳೂರು ಮಹಿಳಾ ರನ್ ತಂಡ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ಮಂಗಳೂರಿನಲ್ಲಿ ಆಗಸ್ಟ್ 12 ರಂದು ಸೀರೆ ತೊಟ್ಟ ಮಹಿಳೆಯರ ಓಟ ಅಥವಾ ನಡಿಗೆ ಆಯೋಜಿಸಲಾಗಿದೆ.
ನಗರದ ಮಹತ್ಮಾಗಾಂಧಿ ಉದ್ಯಾನವನದ ಸಮೀಪದ ಮಣ್ಣಗುಡ್ಡೆ ರಸ್ತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಮಹಿಳೆಯರ ಸೀರೆ ನಡೆ ಮತ್ತು ಸೀರೆ ಓಟಗಳಿಗೆ 2 ಕಿಲೋ ಮೀಟರ್ ದೂರ ನಿಗದಿ ಮಾಡಲಾಗಿದೆ. ಸೀರೆ ನಡೆ ಮತ್ತು

ಓಟದಲ್ಲಿ ಪಾಲ್ಗೊಂಡು ಉತ್ತಮ ಪ್ರತಿಭೆ ತೋರಿಸಿದವರಿಗೆ ಆಕರ್ಷಕ ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಪಾಲ್ಗೊಂಡ ಎಲ್ಲಾ ಸ್ಪರ್ಧಾಳುಗಳಿಗೆ ಪದಕ ಹಾಗು ಪ್ರಮಾಣ ಪತ್ರ ನೀಡಲು ಆಯೋಜಕರು ತೀರ್ಮಾನಿಸಿದ್ದಾರೆ.

English summary
2 km Saree Run is organized in Managluru on August 12. This event is organized by Mahila Run Team near Mannagudda Gandhi park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X