ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಸಾ.ರಾ. ಅಬೂಬಕ್ಕರ್, ವಿನಯಾ ಪ್ರಸಾದ್ ಆಯ್ಕೆ

|
Google Oneindia Kannada News

ಮಂಗಳೂರು, ಜನವರಿ 19: ಪ್ರತಿ ವರ್ಷ ನಡೆಯುವ ವೀರ ರಾಣಿ ಅಬ್ಬಕ್ಕ ಉತ್ಸವ ಈ ಬಾರಿ ಫೆಬ್ರವರಿ 3 ಮತ್ತು 4 ರಂದು ಮಂಗಳೂರಿನಲ್ಲಿ ನಡೆಯಲಿದೆ.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ಹೋರಾಟಗಾರ್ತಿ ಎಂದೇ ಪರಿಗಣಿಸಲಾಗುವ ಉಳ್ಳಾಲದ ಅಬ್ಬಕ್ಕ ರಾಣಿ ಸ್ಮರಣಾರ್ಥ ಈ ಉತ್ಸವ ಪ್ರತೀ ವರ್ಷ ಮಂಗಳೂರಿನಲ್ಲಿ ನಡೆಯುತ್ತದೆ. ನಗರ ಹೊರವಲಯದ ಸೋಮೇಶ್ವರ ಗ್ರಾಮದ ಕೊಲ್ಯದಲ್ಲಿ ಈ ಉತ್ಸವ ಜರುಗಲಿದೆ.

Sara Abubakar and Vinaya Prasad Chosen ೵For Rani Abbakka Award

ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಈ ಬಾರಿ ನಡೆಯುವ ಉತ್ಸವದಲ್ಲಿ ವೀರ ರಾಣಿ ಅಬ್ಬಕ್ಕ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ.ಸಾ.ರಾ. ಅಬೂಬಕ್ಕರ್ ಹಾಗು ಹಿರಿಯ ಕಲಾವಿದೆ ವಿನಯಾ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವೀರ ರಾಣಿ ಅಬ್ಬಕ್ಕ ಪ್ರಶಸ್ತಿಯು ತಲಾ 30 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ಫೆಬ್ರವರಿ 4 ರಂದು ಕೊಲ್ಯದ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಜರಗುವ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಅವರು ಹೇಳಿದರು.

English summary
Veera Rani Abbakka Utsav will be celebrating on February 3 and 4 in Mangaluru. Renowned writer and thinker Sara Abubakar and popular film actress Vinaya Prasad have been chosen for Veera Rani Abbakka award said the minister for food and civil supplies U T Khader here in Mangaluru on January 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X