ಪುತ್ತೂರಿನಲ್ಲಿ ಶ್ರೀಗಂಧ ಕಳವು ಆರೋಪಿಗಳು ಪೊಲೀಸರ ಸೆರೆಗೆ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 21: ಶ್ರೀಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಪುತ್ತೂರು ನಗರ ಪೊಲೀಸರು ರೂ. ಹತ್ತು ಸಾವಿರ ಮೌಲ್ಯದ ಶ್ರೀ ಗಂಧದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Sandalwood smugglers held red-hand at Puttur

ರಾಮಕುಂಜ ಗ್ರಾಮದ ಶಿವಪ್ಪ ಎಂಬವರ ಪುತ್ರ ಪೂವಪ್ಪ ಮತ್ತು ಆರ್ಯಾಪು ಗ್ರಾಮದ ಕುಂಜೂರು ಪಂಜ ಬಾಳಪ್ಪ ಮುಗೇರ್ ಎಂಬವರ ಪುತ್ರ ಕೇಶವ್ ಬಂಧಿತ ಆರೋಪಿಗಳು.

ಕುಡಿಪಾಡಿ ಜನಾರ್ದನ್ ದೇವಾಲಯದ ಬಳಿಯಲ್ಲಿ ನಿಂತಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ಗಸ್ತು ನಿರತರಾಗಿದ್ದ ಪೊಲೀಸರು ಆರೋಪಿಗಳನ್ನು ವಿಚಾರಿಸಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಲ್ಲಿ 39 ಕಿಲೋ ತೂಕದ ಹಸಿ ತೊಗಟೆ ಇರುವ ಶ್ರೀಗಂಧದ ತುಂಡುಗಳು ಪತ್ತೆಯಾಗಿತ್ತು.

ಮಾರಾಟ ಮಾಡಲು ಕುಡಿಪಾಡಿ ಗುಡ್ಡೆಯಿಂದ ಶ್ರೀಗಂಧದ ಮರವನ್ನು ಕಡಿದು ತುಂಡು ಮಾಡಿ ತಂದಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಬಂಧಿತ ಆರೋಪಿಗಳಿಂದ ಶ್ರೀಗಂಧದ ತುಂಡುಗಳ ಜೊತೆಗೆ ಗರಗಸ ಮತ್ತು ಮಂಡೆಕತ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Puttur town police have succeded in arresting two persons who were smuggling Sandalwood. The arrested are identified as Povappa and Keshav.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ