ದಕ್ಷಿಣ ಕನ್ನಡದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 17 : ದಕ್ಷಿಣ ಕನ್ನಡ ಜಿಲ್ಲಾಡಳಿತ ಮರಗಳು ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾಗಿದೆ. ಜಿಲ್ಲೆಯಲ್ಲಿ ಜೂನ್ 15ರಿಂದ ಗಣಿಗಾರಿಕೆ ನಿಷೇಧಿಸಿದ್ದು, ಹೊಸ ಪರವಾನಗಿಯನ್ನು ಇನ್ನೂ ಜಿಲ್ಲಾಡಳಿತ ನೀಡಿಲ್ಲ.

ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮರಳು ಪರವಾನಗೀದಾರರಿಗೆ ನೋಟೀಸು ನೀಡುವ ನಿರ್ಧಾರಕ್ಕೆ ಬರಲಾಗಿದೆ. ನಿಷೇಧಗೊಂಡಿದ್ದ ಮರಳುಗಾರಿಕೆ ಆ. 16ರಂದು ಆರಂಭವಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದಾಗಿ ಅನುಮತಿ ಸಿಕ್ಕಿಲ್ಲ.[ದಕ್ಷಿಣ ಕನ್ನಡದಲ್ಲಿ ಮರಳು ಗಣಿಗಾರಿಕೆಗೆ ಹೊಸ ನಿಯಮ]

Sand mining to begin in Dakshina Kannada soon

ಮರಳುಗಾರಿಕೆ ಪುನಃ ಆರಂಭಿಸಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿಲ್ಲ. ಇದೀಗ ಪರವಾನಗಿಯಲ್ಲಿರುವ ಷರತ್ತು ಪಾಲಿಸಿ, ಮರಳುಗಾರಿಕೆ ಆರಂಭಿಸಿ ಎಂದು ಜಿಲ್ಲಾಡಳಿತ ಎಲ್ಲ ಪರವಾನಗೀದಾರರಿಗೆ ನೋಟಿಸ್ ನೀಡಲಿದೆ.[ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

ಮರಳುಗಾರಿಕೆಗೆ ಅನುಮತಿ ಪಡೆಯಲು 30 ನಿಯಮಗಳನ್ನು ನೀಡಿದ್ದು, ಅವುಗಳೆಲ್ಲವನ್ನೂ ಚಾಚು ತಪ್ಪದೆ ಪಾಲಿಸಬೇಕು. ಸಾಂಪ್ರದಾಯಿಕ ಮರಳುಗಾರಿಕೆಗೆ ಒತ್ತು ನೀಡಬೇಕು, ಯಂತ್ರಗಳನ್ನು ಬಳಸುವಂತಿಲ್ಲ ಮುಂತಾದ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.[ಮಂಗಳೂರಲ್ಲಿ ಅಕ್ರಮ ಮರಳು ದಂಧೆಗೆ ಇಲ್ಲ ಕಡಿವಾಣ]

ಮರಳುಗಾರಿಕೆ ನಡೆಸುವವರು ಎಲ್ಲ ಷರತ್ತುಗಳನ್ನು ಒಪ್ಪಿ, ಮರಳುಗಾರಿಕೆಗೆ ಸಿದ್ದವಾಗಿದ್ದಾರೆ ಜಿಲ್ಲಾಡಳಿತ ನೋಟಿಸ್‌ಗೆ ಸ್ಪಷ್ಟ ಉತ್ತರ ನೀಡಿ ಬಳಿಕ ಮರಳುಗಾರಿಕೆ ಆರಂಭಿಸಬಹುದು. ಈ ನಿರ್ಧಾರ ಮರಳುಗಾರಿಕೆ ಉದ್ಯಮ ನಡೆಸುವವರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dakshina Kannada district administration will issue permits for sand mining soon. Mining banned in district from June 15, 2016.
Please Wait while comments are loading...