ಬಾಡಿಗೆ ಕಾರು ಪಡೆದು ಕಳ್ಳತನ ಮಾಡುತ್ತಿದ್ದ 6 ಮಂದಿ ಸೆರೆ!

Posted By:
Subscribe to Oneindia Kannada

ಮಂಗಳೂರು, ಅ.22 : ಮನೆ ಮತ್ತು ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರು ಮಂದಿ ಕುಖ್ಯಾತ ಕಳ್ಳರನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜಾನುವಾರು ಕಳ್ಳತನ ಮಾಡಿದ ಪ್ರಕರಣದಲ್ಲಿಯೂ ಭಾಗಿಯಾಗಿರುವುದು ವಿಚಾರಣೆ ವೇಳೆ ಬಹಿರಂಗವಾಗಿದೆ.

ಪುತ್ತೂರು ಉಪವಿಭಾಗ ವ್ಯಾಪ್ತಿಯ ಎಂಟು ಮನೆ ಕಳವು, ಮೂರು ಕಡೆಗಳಲ್ಲಿ ಅಡಿಕೆ ಕಳವು ಹಾಗೂ ಐದು ಕಡೆಗಳಲ್ಲಿ ಜಾನುವಾರು ಕಳವು ಮಾಡಿದ ಪ್ರಕರಣದಲ್ಲಿ ಈ ಎಲ್ಲಾ ಆರೂ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ವಿಚಾರಣೆ ವೇಳೆ ಅವರು ಒಪ್ಪಿಕೊಂಡಿದ್ದಾರೆ.

ಕದ್ದ ಫೋನಿನಲ್ಲಿ ಓಲಾ ಬುಕ್ ಮಾಡಿ, ಚಾಲಕನನ್ನೂ ದೋಚಿದ ಖದೀಮ!

Sampya police arrested gang of six robbers

ಪುತ್ತೂರು ನಿವಾಸಿ ಮಹಮ್ಮದ್ ಅಶ್ರಫ್, ಹಮ್ಮದ್ ಸಾದಿಕ್, ಫೈಸಲ್, ಮಹಮ್ಮದ್ ತೌಫಿಕ್, ಸಮೀರ್ ಮತ್ತು ರಫೀಕ್ ಬಂಧಿತ ಆರೋಪಿಗಳು. ಆಗಸ್ಟ್ 9ರಂದು ರಾತ್ರಿ ಸಂಪ್ಯ ಎಎಸ್ಐ ಅಬ್ದುಲ್ ಖಾದರ್ ನೇತೃತ್ವದ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಕಲ್ಲಪ್ಪ ಬಳಿ ಆಟೋ ರಿಕ್ಷಾದಲ್ಲಿ ಕುಳಿತಿದ್ದ ಆರು ಮಂದಿ, ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು.

ಮೈಸೂರಿನಲ್ಲಿ ಬಲೆಗೆ ಬಿದ್ದರು ಕನ್ನಹಾಕುತ್ತಿದ್ದ ಖದೀಮರು

ಆರೋಪಿಗಳು ಬಾಡಿಗೆಗೆ ಕಾರು ಪಡೆದು ಕಳವು ಕೃತ್ಯಗಳಲ್ಲಿ ತೊಡಗುತ್ತಿದ್ದರು ಎಂದು ತಿಳಿದುಬಂದಿದೆ. ಹಲವು ಖಾಸಗಿ ವಾಹನದ ಮಾಲೀಕರು ಕಾರನ್ನು ಬಾಡಿಗೆ ನೀಡುವ ಪರಿಪಾಠ ಬೆಳೆಸಿಕೊಂಡಿದ್ದು. ಅದನ್ನು ತಕ್ಷಣ ನಿಲ್ಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಬಂಧಿತ ಆರೋಪಿಗಳಿಂದ ಆರೋಪಿಗಳಿಂದ ಟಿವಿ, ಡಿಜಿಟಲ್ ಕ್ಯಾಮೆರಾ, ಲ್ಯಾಪ್ ಟಾಪ್, ಮೋಟರ್ ಸೈಕಲ್, ಇನ್ನೋವಾ ಕಾರು ಹಾಗೂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆಸೀಮ್ ಎಂಬವರಿಗೆ ಸೇರಿದ ಪಾಸ್ ಪೋರ್ಟ್ ಅನ್ನು ಕಳುವು ಮಾಡಿರುವುದು ವಿಚಾರಣೆ ವೇಳೆ ಬಯಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Sampya police arrested six robbers in connection with serial robbery in Putur and other parts of Dakshina Kannada districts.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ