ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಸಮರ್ಥ ನಗರ

|
Google Oneindia Kannada News

ಮಂಗಳೂರು, ನವೆಂಬರ್ 17 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್‌ ಸಿಟಿ ಯೋಜನೆಗೆ ಕರ್ನಾಟಕದ 6 ನಗರಗಳು ಆಯ್ಕೆಯಾಗಿವೆ. ಕನ್ನಡದಲ್ಲಿ ಸ್ಮಾರ್ಟ್ ಸಿಟಿಗಳಿಗೆ 'ಸಮರ್ಥ ನಗರ' ಎಂಬ ಹೆಸರನ್ನು ಆಯ್ಕೆ ಮಾಡಲಾಗಿದೆ.

ಮಂಗಳೂರಿನಲ್ಲಿ ಸೋಮವಾರ ಮಾತನಾಡಿದ ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಸ್ಮಾರ್ಟ್‌ ಸಿಟೀಸ್‌ ಇಂಡಿಯಾ ಫೌಂಡೇಶನ್‌ (ಎಸ್‌ಸಿಐಎಫ್‌) ಅಧ್ಯಕ್ಷರಾದ ಡಾ. ಎ. ರವೀಂದ್ರ ಅವರು ಸ್ಮಾರ್ಟ್‌ ಸಿಟಿ ಎಂಬ ಪದಕ್ಕೆ ಕನ್ನಡದಲ್ಲಿ 'ಸಮರ್ಥ ನಗರ' ಎಂಬ ಪದವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. [ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಕೊಡಿ]

samartha nagara

'ಎಸ್‌ಸಿಐಎಫ್‌ ಸ್ಮಾರ್ಟ್‌ ಸಿಟಿ ಎಂಬ ಪದಕ್ಕೆ ಕನ್ನಡ ಪದವನ್ನು ಸೂಚಿಸಲು ಸ್ಪರ್ಧೆಯನ್ನು ಏರ್ಪಡಿಸಿತ್ತು. ಬೆಂಗಳೂರಿನ ಡಾ.ಎಂ. ಎಸ್‌. ವಿಜಯೇಂದ್ರ ಅವರು 'ಸಮರ್ಥ ನಗರ' ಎಂಬ ಪದವನ್ನು ಮೊದಲು ಸೂಚಿಸಿದ್ದರು. ಅವರಿಗೆ 10 ಸಾವಿರ ಬಹುಮಾನ ನೀಡಲಾಗಿದೆ. ಒಟ್ಟು 1,150 ಜನರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು' ಎಂದು ರವೀಂದ್ರ ಅವರು ಮಾಹಿತಿ ನೀಡಿದರು. [ಸ್ಪರ್ಧೆಯ ಫಲಿತಾಂಶ ನೋಡಿ]

ಎಂ.ಗೋವಿಂದಪ್ಪ, ಶಾಂತ ಎನ್‌.ಜಿ., ಚೇತನ್ ಹೆಗಡೆ, ರಂಗನಾಥ್ ಸೇರಿದಂತೆ ಹಲವು ಜನರು ಸಮರ್ಥ ನಗರ ಎಂಬ ಪದವನ್ನು ಸೂಚಿಸಿದ್ದರು. ತೀರ್ಪುಗಾರರು ಮೊದಲು ಪದವನ್ನು ಸೂಚಿಸಿದ್ದ ಡಾ.ಎಂ. ಎಸ್‌. ವಿಜಯೇಂದ್ರ ಅವರನ್ನು ವಿಜೇತರು ಎಂದು ಘೋಷಣೆ ಮಾಡಿದ್ದಾರೆ. [ಕರ್ನಾಟಕಕ್ಕೆ 6 ಸ್ಮಾರ್ಟ್ ಸಿಟಿ]

smart city

6 ಸಮರ್ಥ ನಗರಗಳು : ಅಂದಹಾಗೆ ಕರ್ನಾಟಕದ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಮತ್ತು ತುಮಕೂರು ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇವು ಕರ್ನಾಟಕದ ಸಮರ್ಥ ನಗರಗಳು.

English summary
Smart Cities India Foundation (SCIF) president Dr.A.Ravindra announced that 'Samartha Nagara' suitable equivalent word for of the term Smart City in Kannada. Dr.M.S.Vijendra from Bengaluru suggested this name and got award cash prize of Rs 10,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X