ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ವಿವೇಕ್ ಬ್ಯಾಂಡ್ ಅಭಿಯಾನಕ್ಕೆ ಚಾಲನೆ

|
Google Oneindia Kannada News

ಮಂಗಳೂರು, ಜನವರಿ 06 : 'ಅಸಹಿಷ್ಣು ಮನೋಸ್ಥಿತಿಯ ಸಮಾಜವನ್ನು ಸ್ನೇಹಪರವಾಗಿ ಮುನ್ನಡೆಸುವ ಗುರಿ ಹೊಂದಲು ಸಮಷ್ಠಿ ಚಿಂತನೆಯ ಕಾರ್ಯವಾಗಬೇಕು' ಎಂದು ಚಿತ್ರ ನಟ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.

'ಸಮರ್ಥ ಭಾರತ'ದ ವತಿಯಿಂದ ಬುಧವಾರ ನಗರದ ಎಸ್‌ಡಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ವಿವೇಕ್ ಬ್ಯಾಂಡ್'ನ್ನು ಲೋಕಾರ್ಪಣೆ ಮಾಡಿ ನಾಗಾಭರಣ ಮಾತನಾಡಿದ ಅವರು, 'ಇಂದು ಸಂಸ್ಕಾರದಿಂದಲೇ ಭಾರತ ಗಟ್ಟಿಯಾಗಿ ನಿಂತಿದೆ. ಇಲ್ಲದಿದ್ದರೆ ವಿಚ್ಚೇದನಗಳಿಂದಲೇ ಭಾರತ ಛಿದ್ರವಾಗುತ್ತಿತ್ತು' ಎಂದು ಅವರು ತಿಳಿಸಿದರು. [ಜನವರಿ 12ರಿಂದ ವಿವೇಕ್ ಬ್ಯಾಂಡ್ ಅಭಿಯಾನ]

ts nagabarana

'ಭಾರತದಲ್ಲಿ ದ್ವೇಷವಿಲ್ಲ, ಸಹಿಷ್ಣುತೆ ಇದೆ. ಸರಳತೆ ಮತ್ತು ಸ್ನೇಹವನ್ನು ಹಿಂದಿನಿಂದಲು ಅನುಸರಿಸಿಕೊಂಡು ಬಂದಿದ್ದೇವೆ. ನಾವು ಏನಾಗಿದ್ದೆವು ಎಂಬುದನ್ನು ಇತಿಹಾಸ ತಿಳಿಸುತ್ತದೆ. ಆದರೆ, ನಾವು ಮುಂದೇನಾಗಬೇಕೆಂಬುದನ್ನು ನಾವು ನಿರ್ಧರಿಸಿಕೊಂಡು ಸಮಾಜಮುಖಿಯಾಗಿ ಬೆಳೆಯಬೇಕು' ಎಂದರು. [ಸ್ವಾಮಿ ವಿವೇಕಾನಂದ ವ್ಯಕ್ತಿಯಲ್ಲ, ಭಾರತದ ಆತ್ಮ : ಮೋದಿ]

'ಮಾಧ್ಯಮಗಳು ನಮ್ಮ ತುಡಿತಗಳಿಗೆ ಪೂರಕವಾಗಿರಬೇಕು. ಸಮಾಜಕ್ಕೆ, ಜನಸಾಮಾನ್ಯರಿಗೆ ಬೇಕಾದವನ್ನು ಅವು ನೀಡಬೇಕು. ನಾವು ಮಾಧ್ಯಮಗಳ ಉಪಯೋಗವನ್ನು ಪಡೆದುಕೊಳ್ಳಬೇಕು' ಎಂದು ಹೇಳಿದರು. [150ರ ವಸಂತ: ಸ್ವಾಮಿ ವಿವೇಕಾನಂದರ 9 ಆಣಿಮುತ್ತು]

ಮಂಗಳೂರು ವಿವಿ ಕುಲಸಚಿವ ಟಿ.ಡಿ. ಕೆಂಪರಾಜು ಅವರು ಮಾತನಾಡಿ, 'ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶದಲ್ಲಿ ಮಾನವ ಸಂಪನ್ಮೂಲ ಹಾಗೂ ಯುವ ಶಕ್ತಿ ಅಧಿಕವಾಗಿದೆ. ದೇಶ ಸಾಕಷ್ಟು ಅಭಿವೃದ್ಧಿಯಾಗಿದ್ದರೂ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಶೈಕ್ಷಣಿಕ ಮೌಲ್ಯಗಳು ಕುಸಿಯುತ್ತಿವೆ' ಎಂದು ಆತಂಕ ವ್ಯಕ್ತಪಡಿಸಿದರು.

mangaluru

ಏನಿದು ಅಭಿಯಾನ? : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ 'ಉತ್ತಮನಾಗು-ಉಪಕಾರಿಯಾಗು' ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನು ಸಾರುವ 'ವಿವೇಕ್ ಬ್ಯಾಂಡ್-2016' ಅಭಿಯಾನ ಜನವರಿ 12ರಿಂದ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ.

ಯುವಕ- ಯುವತಿಯರು ತಮ್ಮ ಬಲಗೈಗೆ ವಿವೇಕ್‍ ಬ್ಯಾಂಡ್‌ ಧರಿಸಲಿದ್ದು, ವಿವೇಕಾನಂದರ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ. ಸುಮಾರು 12 ಲಕ್ಷ ಯುವಕ-ಯುವತಿಯರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
The Samartha Bharatha Trust, Bengaluru unveiled the 'Vivek Band 2016 campaign' at the SDM law college Mangaluru on January 6. State wide 'Vivek Band' campaign begins on 12 January, to commemorate the birthday of Swami Vivekananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X