ಮಂಗಳೂರಿನಲ್ಲಿ 6 ರಿಂದ 2 ಬಾಟಲ್ ಗಿಳಿದ ಮದ್ಯದ ಮಾರಾಟ!

Posted By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 12 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ವಹಿವಾಟಿಗೆ ಭಾರಿ ಹೊಡೆತ ಬಿದ್ದಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಯುವ ದುಪ್ಪಟ್ಟು ವ್ಯವಹಾರ ಈಗ ಅರ್ಧದಷ್ಟು ಕುಸಿತಗೊಂಡಿರುವುದು ಕಂಡು ಬಂದಿದೆ.

ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅತೀ ಹೆಚ್ಚು ಕಾರ್ಯಕ್ರಮಗಳು, ಮದುವೆಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ಅತ್ಯಧಿಕ ಮದ್ಯ ಮಾರಾಟ ನಡೆಯುತ್ತದೆ. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ಪ್ರಸ್ತುತ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಮದ್ಯ ಮಾರಾಟ ಕುಸಿದಿದೆ.

ನೀತಿ ಸಂಹಿತೆ ಉಲ್ಲಂಘನೆ: ಗುಂಡ್ಲುಪೇಟೆ ಬಳಿ 1.50ಲಕ್ಷ ರೂ. ವಶ

ಮದ್ಯದಂಗಡಿಗಳ ಮೇಲೆ ಹದ್ದಿನ ಕಣ್ಣು...
ರಾಜ್ಯ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮತದಾರರಿಗೆ ಮದ್ಯವನ್ನು ಆಮಿಷವಾಗಿ ಬಳಸದಂತೆ ಮದ್ಯದಂಗಡಿಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿರಿಸಿದೆ. ಇದು ಮದ್ಯ ಮಾರಾಟಗಾರರ ವ್ಯವಹಾರ ಕುಸಿಯುವಂತೆ ಮಾಡಿದೆ.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

Sales of Alcohol fallen

ಕೇವಲ 2 ಬಾಟಲ್ ಮಾತ್ರ!
ಕಾನೂನಿನ ಪ್ರಕಾರ ಸಾಮಾನ್ಯ ದಿನಗಳಲ್ಲಿ ಒಬ್ಬರಿಗೆ ಗರಿಷ್ಠ 6 ಬಾಟಲ್ ಮದ್ಯ ನೀಡಬಹುದಾಗಿದೆ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಸಮಯದಲ್ಲಿ ಒಬ್ಬರಿಗೆ ಕೇವಲ 2 ಬಾಟಲ್ ಮದ್ಯ ಮಾತ್ರ ಮಾರಬಹುದಾಗಿದೆ. ಅಲ್ಲದೆ ಅಂಗಡಿ ಮಾಲೀಕರು ಪ್ರತಿನಿತ್ಯ ತಮಗಿರುವ ಬೇಡಿಕೆ ಹಾಗೂ ವ್ಯವಹಾರದ ಲೆಕ್ಕವನ್ನೂ ಚುನಾವಣಾ ಅಧಿಕಾರಿಗಳಿಗೆ ನೀಡಬೇಕಾಗಿದೆ. ಬೇಡಿಕೆ ಹೆಚ್ಚಿಸದಂತೆ ಚುನಾವಣಾ ಅಧಿಕಾರಿಗಳು ಮದ್ಯಮಾರಾಟಗಾರರಿಗೆ ಸೂಚಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಕಳೆದ ವರ್ಷ ಮಾರ್ಚ್ ಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಸುಮಾರು 8,544 ಕೇಸ್ ಬಾಕ್ಸಗಳು ಕಡಿಮೆ ಮಾರಾಟವಾಗಿವೆ. ಗ್ರಾಮೀಣ ಭಾಗದಲ್ಲಿ ಶೇ. 90 ರಷ್ಟು ಮದ್ಯ ಮಾರಾಟ ನಿಯಂತ್ರಣದಲ್ಲಿದ್ದು, ನಗರದ ಪ್ರದೇಶದಲ್ಲಿ ಅಧಿಕ ಪಾರ್ಸೆಲ್ ಕೊಡಲು ಮಾಲೀಕರಿಗೆ ಅವಕಾಶವಿಲ್ಲ. ಅಲ್ಲದೇ ಜಿಲ್ಲೆಯಲ್ಲಿ ಈ ಸಂದರ್ಭದಲ್ಲಿ ನಡೆಯುವ ಪಾರ್ಟಿ, ವಿವಿಧ ಬಗೆಯ ಸತ್ಕಾರ ಕೂಟಗಳ ಆಯೋಜನೆಗೆ ಪರವಾನಿಗೆ ನೀಡುತ್ತಿಲ್ಲ. ಅನುಮತಿ ನೀಡಿದರೂ ಮದ್ಯ ಬಾಟಲಿಗಳ ಸಂಖ್ಯೆಗೆ ಕಡಿವಾಣ ಬಿದ್ದಿದೆ.

Sales of Alcohol fallen

ಬಂದ್ ಆಯ್ತು ಪಾನ ವ್ಯವಸ್ಥೆ
ಕಾನೂನು ಪ್ರಕಾರ ವೈನ್ ಶಾಪ್ ಗಳಲ್ಲಿ ಕೇವಲ ಮದ್ಯ ಮಾರಾಟ ಮಾಡಬಹುದು. ಅಲ್ಲಿ ಕುಳಿತು ಕುಡಿಯುವಂತಿಲ್ಲ. ಆದರೆ ಕೆಲವು ವೈನ್ ಶಾಪ್ ಗಳಲ್ಲಿ ಕುಡಿಯುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿರುತ್ತಾರೆ. ಈಗ ಚುನಾವಣಾ ಆಯೋಗ ಇದರ ಮೇಲೂ ಕಣ್ಣಿಟ್ಟಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As model code of conduct for Karnataka assembly elections 2018 is implemented all over the sate,liquor business in Dakshina Kannada district is decreased. Even though many marriage fuctions are taking place in the district liquor business is in lose.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ